Highest Paying Jobs: ಎಲ್ಲಾ ಇಂಜಿನಿಯರ್​ಗಳಿಗೂ ಬೇಡಿಕೆ ಇಲ್ಲ, ಈ ವಿಭಾಗದಲ್ಲಿ ಓದಿದವರಿಗೆ ಮಾತ್ರ ದೊಡ್ಡ ಸಂಬಳದ ಉದ್ಯೋಗ

ನಮ್ಮಲ್ಲಿ ಇಂದಿಗೂ ಮಕ್ಕಳು ಡಾಕ್ಟರ್ ಆಗಬೇಕು ಇಲ್ಲವೇ ಇಂಜಿನಿಯರ್ ಆಗಬೇಕು ಎಂದು ಬಯಸುವ ದೊಡ್ಡ ವರ್ಗವೇ ಇದೆ. ಇದರ ಪರಿಣಾಮವಾಗಿ ದೇಶದಲ್ಲಿ ಲಕ್ಷಾಂತರ ಇಂಜಿನಿಯರ್ ಗಳು ಇದ್ದಾರೆ. ಆದರೆ ವಿಷಾದದ ವಿಷಯವೆಂದರೆ ಬಹಳಷ್ಟು ಇಂಜಿನಿಯರ್ ಗಳಿಗೆ ಸರಿಯಾದ ಉದ್ಯೋಗಾವಕಾಶಗಳು ಸಿಕ್ಕಿಲ್ಲ. ಇಂಜಿನಿಯರಿಂಗ್ ಮಾಡಿ ಬೇರೆ ವೃತ್ತಿ ಮಾಡುತ್ತಿರುವವರ ಸಂಖ್ಯೆಯೇ ಹೆಚ್ಚಿದೆ.

First published:

 • 18

  Highest Paying Jobs: ಎಲ್ಲಾ ಇಂಜಿನಿಯರ್​ಗಳಿಗೂ ಬೇಡಿಕೆ ಇಲ್ಲ, ಈ ವಿಭಾಗದಲ್ಲಿ ಓದಿದವರಿಗೆ ಮಾತ್ರ ದೊಡ್ಡ ಸಂಬಳದ ಉದ್ಯೋಗ

  ಹಾಗಾದರೆ ಇಂಜಿನಿಯರಿಂಗ್ ಪದವಿಗೆ ಡಿಮ್ಯಾಂಡ್ ಇಲ್ಲವೇ? ಇದು ಸಂಪೂರ್ಣ ಸತ್ಯವಲ್ಲ. ಇಂಜಿನಿಯರಿಂಗ್ ನಲ್ಲಿ ಕೆಲ ವಿಭಾಗಗಳನ್ನು ಓದಿರುವವರಿಗೆ ಇಂದಿಗೂ ಉದ್ಯೋಗರಂಗದಲ್ಲಿ ಬೇಡಿಕೆ ಇದೆ. ಹಾಗಾದರೆ ಯಾವ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡಿದರೆ ಹೆಚ್ಚು ಸಂಬಳದ ಕೆಲಸ ಸಿಗುತ್ತೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 28

  Highest Paying Jobs: ಎಲ್ಲಾ ಇಂಜಿನಿಯರ್​ಗಳಿಗೂ ಬೇಡಿಕೆ ಇಲ್ಲ, ಈ ವಿಭಾಗದಲ್ಲಿ ಓದಿದವರಿಗೆ ಮಾತ್ರ ದೊಡ್ಡ ಸಂಬಳದ ಉದ್ಯೋಗ

  1. ಪೆಟ್ರೋಲಿಯಂ ಇಂಜಿನಿಯರ್: ಈ ಎಂಜಿನಿಯರ್ ಗಳಿಗೆ ಯಾವಾಗಲೂ ಬೇಡಿಕೆಯಿದೆ. ಸದ್ಯ ಈ ವಲಯದಲ್ಲಿ ಉದ್ಯೋಗ ಕಡಿತವಾಗುವ ಸಾಧ್ಯತೆ ಇಲ್ಲ. ಪೆಟ್ರೋಲಿಯಂ ಇಂಜಿನಿಯರ್ ವಾರ್ಷಿಕವಾಗಿ 10 ಲಕ್ಷ ರೂ.ವರೆಗೆ ಸಂಬಳ ಪಡೆಯುತ್ತಾರೆ. ಅನುಭವ ಹೆಚ್ಚಾದಂತೆ ದೊಡ್ಡ ಸಂಬಳದ ಪ್ಯಾಕೇಜ್ ಲಭ್ಯವಿದೆ.

  MORE
  GALLERIES

 • 38

  Highest Paying Jobs: ಎಲ್ಲಾ ಇಂಜಿನಿಯರ್​ಗಳಿಗೂ ಬೇಡಿಕೆ ಇಲ್ಲ, ಈ ವಿಭಾಗದಲ್ಲಿ ಓದಿದವರಿಗೆ ಮಾತ್ರ ದೊಡ್ಡ ಸಂಬಳದ ಉದ್ಯೋಗ

  2. ಕಂಪ್ಯೂಟರ್ ಇಂಜಿನಿಯರ್: ಐಟಿ ವಲಯದಲ್ಲಿ ಯಾವಾಗಲೂ ಸಾಕಷ್ಟು ಉದ್ಯೋಗಗಳಿವೆ. ಈ ವಲಯವು ನಿರಂತರವಾಗಿ ಬೆಳೆಯುತ್ತಿದೆ. ಕಂಪ್ಯೂಟರ್ ಎಂಜಿನಿಯರ್ ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಭಾರತದಲ್ಲಿ ಕಂಪ್ಯೂಟರ್ ಎಂಜಿನಿಯರ್ ಗಳ ಸರಾಸರಿ ವೇತನ ವಾರ್ಷಿಕ ನಾಲ್ಕರಿಂದ ಐದು ಲಕ್ಷ ರೂಪಾಯಿ.

  MORE
  GALLERIES

 • 48

  Highest Paying Jobs: ಎಲ್ಲಾ ಇಂಜಿನಿಯರ್​ಗಳಿಗೂ ಬೇಡಿಕೆ ಇಲ್ಲ, ಈ ವಿಭಾಗದಲ್ಲಿ ಓದಿದವರಿಗೆ ಮಾತ್ರ ದೊಡ್ಡ ಸಂಬಳದ ಉದ್ಯೋಗ

  3. ಏರೋಸ್ಪೇಸ್ ಇಂಜಿನಿಯರ್: ಏರೋಸ್ಪೇಸ್ ಎಂಜಿನಿಯರ್ ಗಳು ವಿಮಾನ ಮತ್ತು ಅದರ ವ್ಯವಸ್ಥೆಗಳನ್ನು ವಿನ್ಯಾಸ-ನಿರ್ವಹಣೆ ಮಾಡುತ್ತಾರೆ. ಈ ವಲಯದಲ್ಲೂ ಸಾಕಷ್ಟು ಬೇಡಿಕೆ ಇದೆ. ಒಬ್ಬ ಏರೋಸ್ಪೇಸ್ ಇಂಜಿನಿಯರ್ ಆಗಿ ಭಾರತೀಯ ವಾಯುಪಡೆಗೆ ಸೇರಬಹುದು. ಭಾರತದಲ್ಲಿ ಏರೋಸ್ಪೇಸ್ ಇಂಜಿನಿಯರ್ ನ ಸರಾಸರಿ ವೇತನ ವಾರ್ಷಿಕ 6 ಲಕ್ಷ ರೂಪಾಯಿಗಳು.

  MORE
  GALLERIES

 • 58

  Highest Paying Jobs: ಎಲ್ಲಾ ಇಂಜಿನಿಯರ್​ಗಳಿಗೂ ಬೇಡಿಕೆ ಇಲ್ಲ, ಈ ವಿಭಾಗದಲ್ಲಿ ಓದಿದವರಿಗೆ ಮಾತ್ರ ದೊಡ್ಡ ಸಂಬಳದ ಉದ್ಯೋಗ

  4. ಕೆಮಿಕಲ್ ಇಂಜಿನಿಯರ್: ರಾಸಾಯನಿಕ ಎಂಜಿನಿಯರ್ ಗಳು ವಿವಿಧ ರಾಸಾಯನಿಕ ಉತ್ಪನ್ನಗಳ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಕೆಲಸ ಮಾಡುತ್ತಾರೆ. ಇದಲ್ಲದೇ ಪೆಟ್ರೋಲಿಯಂ ಉತ್ಪಾದಿಸುವ ಕಂಪನಿಗಳಲ್ಲೂ ಕೆಮಿಕಲ್ ಇಂಜಿನಿಯರ್ ಗಳಿಗೆ ಬೇಡಿಕೆ ಇದೆ. ಕೆಮಿಕಲ್ ಇಂಜಿನಿಯರ್ ನ ಆರಂಭಿಕ ವೇತನ ವಾರ್ಷಿಕ ನಾಲ್ಕರಿಂದ ಐದು ಲಕ್ಷ ರೂಪಾಯಿ.

  MORE
  GALLERIES

 • 68

  Highest Paying Jobs: ಎಲ್ಲಾ ಇಂಜಿನಿಯರ್​ಗಳಿಗೂ ಬೇಡಿಕೆ ಇಲ್ಲ, ಈ ವಿಭಾಗದಲ್ಲಿ ಓದಿದವರಿಗೆ ಮಾತ್ರ ದೊಡ್ಡ ಸಂಬಳದ ಉದ್ಯೋಗ

  5. AI ಮತ್ತು ಮೆಷಿನ್ ಲರ್ನಿಂಗ್ ಇಂಜಿನಿಯರ್: ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಕೂಡ ಕಂಪ್ಯೂಟರ್ ಎಂಜಿನಿಯರಿಂಗ್ ನ ಒಂದು ಭಾಗವಾಗಿದೆ. AI, ಯಂತ್ರ ಕಲಿಕೆ ಎಂಜಿನಿಯರ್ ಗಳು AI ಸಂಶೋಧನಾ ಪರಿಕರಗಳು ಮತ್ತು ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಾರೆ. ಭಾರತದಲ್ಲಿ AI ಇಂಜಿನಿಯರ್ಗಳ ಸರಾಸರಿ ವಾರ್ಷಿಕ ವೇತನ 12 ಲಕ್ಷ ರೂ.

  MORE
  GALLERIES

 • 78

  Highest Paying Jobs: ಎಲ್ಲಾ ಇಂಜಿನಿಯರ್​ಗಳಿಗೂ ಬೇಡಿಕೆ ಇಲ್ಲ, ಈ ವಿಭಾಗದಲ್ಲಿ ಓದಿದವರಿಗೆ ಮಾತ್ರ ದೊಡ್ಡ ಸಂಬಳದ ಉದ್ಯೋಗ

  6. ಪರಮಾಣು ಎಂಜಿನಿಯರ್ ಗಳು: ಇವರು ಪರಮಾಣು ಸೌಲಭ್ಯಗಳ ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆಗೆ ಜವಾಬ್ದಾರರಾಗಿರುತ್ತಾರೆ. ಭಾರತದಲ್ಲಿ ಪರಮಾಣು ಇಂಜಿನಿಯರ್ ನ ಆರಂಭಿಕ ಸರಾಸರಿ ವೇತನ ವಾರ್ಷಿಕ ಒಂಬತ್ತೂವರೆ ಲಕ್ಷ ರೂಪಾಯಿ.

  MORE
  GALLERIES

 • 88

  Highest Paying Jobs: ಎಲ್ಲಾ ಇಂಜಿನಿಯರ್​ಗಳಿಗೂ ಬೇಡಿಕೆ ಇಲ್ಲ, ಈ ವಿಭಾಗದಲ್ಲಿ ಓದಿದವರಿಗೆ ಮಾತ್ರ ದೊಡ್ಡ ಸಂಬಳದ ಉದ್ಯೋಗ

  7. ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರ್ : ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರ್ ಗಳು ಮುಖ್ಯವಾಗಿ ಎಲೆಕ್ಟ್ರಾನಿಕ್ ಸಾಧನಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಭಾರತೀಯ ಸೇನೆಯಲ್ಲೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರ್ ಗಳಿಗೆ ಬೇಡಿಕೆ ಇದೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರ್ ಗಳ ಆರಂಭಿಕ ವೇತನವು ವಾರ್ಷಿಕ ಸರಾಸರಿ 3 ಲಕ್ಷ ರೂ.

  MORE
  GALLERIES