[caption id="attachment_944820" align="aligncenter" width="1600"] 2) ಸಾರ್ವಜನಿಕ ವಲಯದ ಉದ್ಯಮಗಳು: ಸಾರ್ವಜನಿಕ ವಲಯದ ಎಂಜಿನಿಯರ್ ಗಳು ಮಾಸಿಕ 24 ಸಾವಿರದಿಂದ 50 ಸಾವಿರದರೆಗೆ ವೇತನ ಪಡೆಯುತ್ತಾರೆ. ಅವರ ವಾರ್ಷಿಕ ಸಿಟಿಸಿ 10 ಲಕ್ಷ 80 ಸಾವಿರದವರೆಗೆ ಇರುತ್ತದೆ. ಸಾರ್ವಜನಿಕ ವಲಯದ ಮ್ಯಾನೇಜ್ ಮೆಂಟ್ ಟ್ರೈನಿಗಳು ತಿಂಗಳಿಗೆ 24 ಸಾವಿರದ 900 ರಿಂದ 50 ಸಾವಿರದ 500 ರೂಪಾಯಿಗಳವರೆಗೆ ವೇತನವನ್ನು ಪಡೆಯುತ್ತಾರೆ. ಅವರ ವಾರ್ಷಿಕ ಸಿಟಿಸಿ 14 ಲಕ್ಷ 10 ಸಾವಿರ ರೂ.
3) ರಕ್ಷಣಾ ಸೇವೆಗಳಾದ ನೌಕಾಪಡೆ, ಸೇನೆ ಮತ್ತು ವಾಯುಪಡೆ: ಉತ್ತಮ ಸಂಬಳ ಹೊರತುಪಡಿಸಿ, ವೈದ್ಯಕೀಯ ಸೌಲಭ್ಯಗಳು, ಸರ್ಕಾರಿ ವಸತಿ ಮತ್ತು ಸಾರಿಗೆ ವೆಚ್ಚಗಳಂತಹ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ರಕ್ಷಣಾ ಸೇವೆಗಳಲ್ಲಿ ಜೂನಿಯರ್ ಗ್ರೇಡ್ ಕಮಾಂಡೆಂಟ್ 15,600 ರಿಂದ ರೂ 39,100 ಮತ್ತು ಗ್ರೇಡ್ ಪೇ ರೂ 7,600 ಪಡೆಯುತ್ತಾರೆ. ಡೆಪ್ಯುಟಿ ಕಮಾಂಡೆಂಟ್ 15 ಸಾವಿರ ವೇತನ ಹಾಗೂ 6 ಸಾವಿರ ಗ್ರೇಡ್ ಪೇ ಪಡೆಯುತ್ತಾರೆ. ಸಹಾಯಕ ಕಮಾಂಡೆಂಟ್ 15 ಸಾವಿರದಿಂದ 39 ಸಾವಿರ ವೇತನ ಹಾಗೂ 5 ಸಾವಿರ ಗ್ರೇಡ್ ಪೇ ಪಡೆಯುತ್ತಾರೆ.
4) ಭಾರತೀಯ ವಿದೇಶಾಂಗ ಸೇವೆ (IFS): IFS ಅಧಿಕಾರಿಗಳಿಗೆ ರಾಷ್ಟ್ರದ ಪ್ರತಿನಿಧಿಗಳ ಸ್ಥಾನಮಾನವನ್ನು ನೀಡಲಾಗುತ್ತದೆ. ವಿದೇಶಿ ಸೇವೆಯ ಸೀನಿಯರ್ ಟೈಮ್ ಸ್ಕೇಲ್ ನಲ್ಲಿರುವ ಉದ್ಯೋಗಿಗ ರೂ 15,600 ರಿಂದ ರೂ 39,100 ಮತ್ತು ಗ್ರೇಡ್ ಪೇ ರೂ 6,600 ಪಡೆಯುತ್ತಾರೆ. ಜೂನಿಯರ್ ಟೈಮ್ ಸ್ಕೇಲ್ ನಲ್ಲಿರುವ ಉದ್ಯೋಗಿಗೆ ಮಾಸಿಕ 15,600 ರಿಂದ 39,100 ರೂ ಮತ್ತು ಗ್ರೇಡ್ ಪೇ 5,400 ರೂ.