Career Tips: ನಿಮ್ಮ ವೃತ್ತಿಯಲ್ಲಿ ನೀವು ಯಶಸ್ವಿ ವ್ಯಕ್ತಿ ಎನಿಸಿಕೊಳ್ಳಲು ಈ 6 ಟಿಪ್ಸ್ ಪಾಲಿಸಿ

Tips to Increase Self Confidence: ನೀವು ನಿಮ್ಮ ವೃತ್ತಿಯಲ್ಲಿ ಎತ್ತರಕ್ಕೆ ಬೆಳೆಯಬೇಕೆಂದರೆ ಒಂದೊಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವುದು ತುಂಬಾನೇ ಮುಖ್ಯ. ಒಳ್ಳೆಯ ವ್ಯಕ್ತಿತ್ವ ಅಂದರೆ ಆತ್ಮವಿಶ್ವಾಸ, ಇದೊಂದು ಇದ್ದರೆ ನೀವು ಜಗತ್ತನ್ನೇ ಗೆಲ್ಲಬಹುದು. ವ್ಯಕ್ತಿತ್ವಕ್ಕೆ ಹೆಚ್ಚಿನ ತೂಕ ತಂದುಕೊಡುವಲ್ಲಿ ಆತ್ಮವಿಶ್ವಾಸವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

First published:

  • 17

    Career Tips: ನಿಮ್ಮ ವೃತ್ತಿಯಲ್ಲಿ ನೀವು ಯಶಸ್ವಿ ವ್ಯಕ್ತಿ ಎನಿಸಿಕೊಳ್ಳಲು ಈ 6 ಟಿಪ್ಸ್ ಪಾಲಿಸಿ

    ಆದರೆ ಎಲ್ಲರೂ ಹುಟ್ಟತ್ತಲೇ ಎಲ್ಲವನ್ನೂ ಕಲಿತುಕೊಂಡು ಬಂದಿರುವುದಿಲ್ಲ. ಕೆಲವೊಂದನ್ನು ಸ್ವಯಂ ಅರಿವಿನಿಂದ ಕಲಿಯಬೇಕಾಗುತ್ತದೆ. ಆ ನಿಟ್ಟಿನಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಕೆಲವು ಸಲಹೆಗಳ ಬಗ್ಗೆ ಇಂದು ನಾವು ನಿಮಗೆ ಇಲ್ಲಿ ತಿಳಿಸಿದ್ದೇವೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Career Tips: ನಿಮ್ಮ ವೃತ್ತಿಯಲ್ಲಿ ನೀವು ಯಶಸ್ವಿ ವ್ಯಕ್ತಿ ಎನಿಸಿಕೊಳ್ಳಲು ಈ 6 ಟಿಪ್ಸ್ ಪಾಲಿಸಿ

    1) ಯಾವಾಗಲೂ ನಿಮ್ಮನ್ನು ನಂಬಿರಿ: ಆತ್ಮವಿಶ್ವಾಸವನ್ನು ಹೆಚ್ಚಿಸಲು ನಿಮ್ಮನ್ನು ನೀವು ನಂಬುವುದು ಬಹಳ ಮುಖ್ಯ. ಆದ್ದರಿಂದ ಬೇರೊಬ್ಬರ ದೃಷ್ಟಿಕೋನವನ್ನು ನೋಡುವ ಬದಲು, ನಿಮ್ಮ ನಿರ್ಧಾರಗಳನ್ನು ಗೌರವಿಸಲು ಕಲಿಯಿರಿ. ಏಕೆಂದರೆ ಅನೇಕ ಬಾರಿ ಜನರು ತಮ್ಮನ್ನು ತಾವು ನಂಬದೆ ಗೊಂದಲಕ್ಕೊಳಗಾಗುತ್ತಾರೆ.

    MORE
    GALLERIES

  • 37

    Career Tips: ನಿಮ್ಮ ವೃತ್ತಿಯಲ್ಲಿ ನೀವು ಯಶಸ್ವಿ ವ್ಯಕ್ತಿ ಎನಿಸಿಕೊಳ್ಳಲು ಈ 6 ಟಿಪ್ಸ್ ಪಾಲಿಸಿ

    2) ಸಂವಹನಕ್ಕೆ ಗಮನ ಕೊಡುವುದು ಮುಖ್ಯ: ಆತ್ಮವಿಶ್ವಾಸವನ್ನು ಹೆಚ್ಚಿಸಲು, ನಿಮ್ಮ ಸಂವಹನ ಕೌಶಲ್ಯದ ಬಗ್ಗೆಯೂ ನೀವು ಗಮನ ಹರಿಸಬೇಕು. ಜನರೊಂದಿಗೆ ಮಾತನಾಡುವಾಗ ನಿಮ್ಮ ಮಾತು ಮತ್ತು ದೇಹ ಭಾಷೆಯ ಬಗ್ಗೆ ಕಾಳಜಿ ವಹಿಸಿ. ಇದು ನಿಮ್ಮ ಸಂವಹನ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತೆ.

    MORE
    GALLERIES

  • 47

    Career Tips: ನಿಮ್ಮ ವೃತ್ತಿಯಲ್ಲಿ ನೀವು ಯಶಸ್ವಿ ವ್ಯಕ್ತಿ ಎನಿಸಿಕೊಳ್ಳಲು ಈ 6 ಟಿಪ್ಸ್ ಪಾಲಿಸಿ

    3) ತಪ್ಪುಗಳನ್ನು ಮಾಡಲು ಹಿಂಜರಿಯದಿರಿ: ತಪ್ಪುಗಳನ್ನು ಮಾಡಲು ಎಂದಿಗೂ ಭಯಪಡಬಾರದು, ಏಕೆಂದರೆ ಈ ಭಯದಿಂದ ಜನರು ಅನೇಕ ಬಾರಿ ಹೊಸದನ್ನು ಪ್ರಯತ್ನಿಸಲು ಹಿಂಜರಿಯುತ್ತಾರೆ. ಇದರಿಂದಾಗಿ ಅವರ ಆತ್ಮವಿಶ್ವಾಸ ಕಡಿಮೆಯಾಗಬಹುದು. ಯಾವಾಗಲೂ ಟೀಕೆಗಳನ್ನು ದೃಢವಾಗಿ ಎದುರಿಸಿ ಮತ್ತು ಹೊಸದನ್ನು ಕಲಿಯಲು ಸಿದ್ಧರಾಗಿರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 57

    Career Tips: ನಿಮ್ಮ ವೃತ್ತಿಯಲ್ಲಿ ನೀವು ಯಶಸ್ವಿ ವ್ಯಕ್ತಿ ಎನಿಸಿಕೊಳ್ಳಲು ಈ 6 ಟಿಪ್ಸ್ ಪಾಲಿಸಿ

    4) ಇತರರನ್ನು ಕಾಪಿ ಮಾಡಬೇಡಿ: ಬೇರೆಯವರನ್ನು ನಕಲಿಸುವ ಬದಲು, ನಿಮ್ಮ ಸ್ವಂತ ಕೌಶಲ್ಯಗಳನ್ನು ಸುಧಾರಿಸುವತ್ತ ಗಮನಹರಿಸಿ. ವಾಸ್ತವವಾಗಿ, ಅನೇಕ ಬಾರಿ ಬೇರೊಬ್ಬರನ್ನು ನಕಲಿಸುವುದರಿಂದ, ಜನರು ತಮ್ಮದೇ ಆದ ವ್ಯಕ್ತಿತ್ವದ ಹೊಂದದೇ ಇರಬಹುದು. ಇದು ನಿಮ್ಮ ಆತ್ಮವಿಶ್ವಾಸವನ್ನು ಅಲುಗಾಡಿಸಬಹುದು. ಹಾಗಾಗಿ ಯಾರನ್ನೂ ನಕಲಿಸಲು ಪ್ರಯತ್ನಿಸಬೇಡಿ.

    MORE
    GALLERIES

  • 67

    Career Tips: ನಿಮ್ಮ ವೃತ್ತಿಯಲ್ಲಿ ನೀವು ಯಶಸ್ವಿ ವ್ಯಕ್ತಿ ಎನಿಸಿಕೊಳ್ಳಲು ಈ 6 ಟಿಪ್ಸ್ ಪಾಲಿಸಿ

    5) ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಗಮನಹರಿಸಲು ಮರೆಯಬೇಡಿ: ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಕೂಡ ಬಹಳ ಮುಖ್ಯ. ಆದ್ದರಿಂದ ಅಚ್ಚುಕಟ್ಟಾದ ಉಡುಗೆಯೊಂದಿಗೆ, ಪಾದರಕ್ಷೆಗಳನ್ನು ಧರಿಸಿ. ಇದರಿಂದ ನೀವು ಕಾನ್ಫಿಡೆಂಟ್ ಆಗಿ ಇರುತ್ತೀರಿ.

    MORE
    GALLERIES

  • 77

    Career Tips: ನಿಮ್ಮ ವೃತ್ತಿಯಲ್ಲಿ ನೀವು ಯಶಸ್ವಿ ವ್ಯಕ್ತಿ ಎನಿಸಿಕೊಳ್ಳಲು ಈ 6 ಟಿಪ್ಸ್ ಪಾಲಿಸಿ

    6) ಜನರ ಮಾತುಗಳನ್ನು ಮನಸಿಗೆ ತೆಗೆದುಕೊಳ್ಳಬೇಡಿ: ಇತರರ ಮಾತುಗಳನ್ನು ಮನಸಿಗೆ ತೆಗೆದುಕೊಳ್ಳುವ ಬದಲು, ಅವುಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ. ಜನರು ಹೇಳುವ ಎಲ್ಲಾ ಮಾತುಗಳಿಗೂ ಕಿವಿಕೊಟ್ಟರೆ ನಿಮ್ಮ ಯಶಸ್ಸಿಗೆ ನೀವೇ ಅಡ್ಡಿಯಾಗುತ್ತೀರಿ. ಅದಕ್ಕಾಗಿಯೇ ಇತರರು ಏನು ಹೇಳುತ್ತಾರೆಂದು ಗಮನ ಕೊಡಬೇಡಿ, ನಿಮ್ಮ ಸ್ವಂತ ತಪ್ಪುಗಳಿಂದ ಕಲಿಯಿರಿ.

    MORE
    GALLERIES