Tips to Choose Career: ಓದಿರುವ ಕ್ಷೇತ್ರದಲ್ಲೇ ಯಾವ ಉದ್ಯೋಗ ಮಾಡಬೇಕೆಂಬ ಗೊಂದಲವೇ, ಹೀಗೆ ಉತ್ತರ ಹುಡುಕಿಕೊಳ್ಳಿ
ಬಹುತೇಕ ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ನಂತರ ಯೋಚಿಸಿ ಪಿಯುಸಿಯಲ್ಲಿ (ವಿಜ್ಞಾನ, ಕಾಮರ್ಸ್,ಕಲಾ) ವಿಭಾಗವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಪಿಯು ಫಲಿತಾಂಶ ಬಂದ ಬಳಿಕವೂ ಯಾವ ಡಿಗ್ರಿ ಮಾಡಬೇಕು ಎಂದು ಯೋಚಿಸಿ ನಿರ್ಧಾರ ತೆಗೆದುಕೊಂಡಿರುತ್ತಾರೆ.
ಆಯ್ಕೆ ಮಾಡಿದ ವಿಭಾಗದಲ್ಲೇ ಡಬಲ್ ಡಿಗ್ರಿ ಕೂಡ ಆದ ಮೇಲೆ ಮತ್ತೊಂದು ಗೊಂದಲ ಶುರುವಾಗುತ್ತೆ. ಅದುವೇ ಯಾವ ರೀತಿಯ ಉದ್ಯೋಗ ಮಾಡುವುದು ಅಂತ. ಉದಾಹರಣೆಗೆ ಬಿ.ಕಾಮ್ ಓದಿರುವ ಪದವೀಧರರಿಗೆ ಕಂಪನಿಗಳಲ್ಲಿ ಯಾವ ರೀತಿಯ ಉದ್ಯೋಗಗಳನ್ನು ಮಾಡಬೇಕು, ಯಾವ ಹುದ್ದೆಗೆ ಪ್ರಯತ್ನಿಸಬೇಕು ಎಂಬ ಗೊಂದಲ ಶುರುವಾಗುತ್ತೆ.
2/ 7
ಈ ರೀತಿ ಕಾಡುವ ಕರಿಯರ್ ಪ್ರಾಬ್ಲಮ್ ಗೆ ನೀವೇ ಸ್ವ ಪರೀಕ್ಷೆಯಿಂದ ಉತ್ತರವನ್ನು ಕಂಡುಕೊಳ್ಳಬಹುದು. ಅದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪ್ರಾತಿನಿಧಿಕ ಚಿತ್ರ
3/ 7
1) ಮೊದಲನೆಯದಾಗಿ ಯಾವ ರೀತಿಯ ಕೆಲಸವನ್ನು ಮಾಡಲು ಬಯಸುತ್ತೀರಿ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ನೀವು ಫೀಲ್ಡ್ ವರ್ಕ್ ಮಾಡಲು ಬಯಸುವಿರಾ ಅಥವಾ ಡೆಸ್ಕ್ ವರ್ಕ್ ಮಾಡಲು ಬಯಸುವಿರಾ? ನಿಮ್ಮ ಡ್ರಿಮ್ ಜಾಬ್ ಸರ್ಕಾರಿ ಕೆಲಸನಾ ಅಥವಾ ಸ್ವಂತ ಬ್ಯುಸಿನೆಸ್ ಮಾಡುವ ಕನಸಿದೆಯೇ ಕೇಳಿಕೊಳ್ಳಿ. (ಸಾಂದರ್ಭಿಕ ಚಿತ್ರ)
4/ 7
2) ಈ ಪ್ರಶ್ನೆಗಳಿಗೆ ನಿಮ್ಮ ಉತ್ತರವನ್ನು ಕಾಗದದ ಮೇಲೆ ಬರೆಯುತ್ತಾ ಹೋಗಿ. ನೀವು ಮಾಡಬಹುದಾದ ಅಥವಾ ಮಾಡಲು ಬಯಸುವ ಎಲ್ಲಾ ಕೆಲಸದ ಪ್ರಕಾರಗಳನ್ನು ಪಟ್ಟಿ ಮಾಡಿ. ಇದರಲ್ಲಿ ಹಲವಾರು ರೀತಿಯ ಕೆಲಸಗಳಿರಬಹುದು. ನಿಮ್ಮ ಬಗ್ಗೆ ನಿಮಗೇ ಒಂದು ಸ್ಪಷ್ಟತೆ ಬರಲು ಆರಂಭವಾಗುತ್ತೆ.
5/ 7
3) ವೃತ್ತಿ ಆಯ್ಕೆ ಸಂಪೂರ್ಣವಾಗಿ ನಿಮ್ಮದೇ ನಿರ್ಧಾರವಾಗಿರಬೇಕು. ಬೇರೆಯವರು ಹೇಳಿದರು ಎಂದು ಆಯ್ಕೆ ಮಾಡುವುದು ಸರಿಯಲ್ಲ. ಮುಂದೆ ನೀವೇ ಪಶ್ಚಾತಪ ಪಡಬೇಕಾಗುತ್ತೆ. ವೃತ್ತಿಜೀವನದ ಆರಂಭದಲ್ಲಿ ಹಣವು ಮೊದಲ ಆದ್ಯತೆ ಆಗಿರಬಾರದು. ಕೆಲಸ ಕಲಿಯುವುದು, ಅನುಭವ ಪಡೆದುಕೊಳ್ಳುವುದು ಗುರಿಯಾಗಿರಬೇಕು. ಸಾಂದರ್ಭಿಕ ಚಿತ್ರ
6/ 7
4) ಲಾಂಗ್ ಟರ್ಮ್ ಗುರಿಗಳನ್ನು ಹೊಂದುವುದು ಮುಖ್ಯ. ಜಸ್ಟ್ ಕೆಲಸ ಸಿಕ್ಕರೆ ಸಾಕಪ್ಪಾ.. ಎಂದು ಯೋಚಿಸಬೇಡಿ. ನೀವು ಆಯ್ಕೆ ಮಾಡಿದ ಉದ್ಯೋಗ ನಿಮ್ಮನ್ನು ಮುಂದಿನ 5, 10, 15 ವರ್ಷಗಳಲ್ಲಿ ಎಲ್ಲಿಗೆ ಕರೆದೊಯ್ಯುತ್ತೆ ಎಂಬ ಬಗ್ಗೆ ಅಂದಾಜಿರಬೇಕು.
7/ 7
5) ಯಾವ ಸೀರಿಯರ್ ಪೋಸ್ಟ್ ಗೆ ಹೋಗಲು ನೀವು ಈಗ ಉದ್ಯೋಗ ಶುರು ಮಾಡಿದ್ದೀರಿ ಎಂಬ ನಿಟ್ಟಿನಲ್ಲಿ ಯೋಚಿಸಬೇಕು. ಗುರಿ ಇಲ್ಲದೆ ಸಿಕ್ಕ ಕೆಲಸ, ಸಂಬಳದ ಆಸೆಗೆ ಕೆಲಸಗಳನ್ನು ಮಾಡುತ್ತಾ ಹೋದರೆ ಭವಿಷ್ಯದಲ್ಲಿ ನೀವು ದೊಡ್ಡ ಮಟ್ಟಕ್ಕೆ ಬೆಳೆಯುವುದು ಕಷ್ಟವಾಗುತ್ತೆ, ಎಚ್ಚರವಿರಲಿ. ಸಾಂದರ್ಭಿಕ ಚಿತ್ರ