Job Search Tips: ಉದ್ಯೋಗದಲ್ಲಿದ್ದುಕೊಂಡೇ ಬೇರೆಡೆ ಕೆಲಸ ಹುಡುಕುತ್ತಿದ್ದರೆ, ಈ ತಪ್ಪುಗಳನ್ನು ಮಾಡಬೇಡಿ
ಉದ್ಯೋಗದಲ್ಲಿದ್ದುಕೊಂಡೇ ಬೇರೆಡೆ ಕೆಲಸ ಹುಡುಕುವುದು ಕಾಮನ್. ಇರುವ ಕೆಲಸ ಇಷ್ಟವಿಲ್ಲದೆ, ಆಫೀಸ್ ವಾತಾವರಣ ಹಿಡಿಸದೆ, ಸಂಬಳ ಏರಿಕೆ-ಬಡ್ತಿ ಬಗ್ಗೆ ಅಸಮಾಧಾನದಿಂದ ಅಥವಾ ಬೇರೆಡೆ ಒಳ್ಳೆಯ ಹುದ್ದೆಗಾಗಿ ಪ್ರಯತ್ನಿಸುವುದು ಸಾಮಾನ್ಯ. ಆದರೆ ಉದ್ಯೋಗಿಗಳು ಕೆಲಸ ಹುಡುಕುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಉದ್ಯೋಗದಲ್ಲಿದ್ದುಕೊಂಡು ಬೇರೆಡೆ ಕೆಲಸ ಹುಡುಕುವಾಗ ಉದ್ಯೋಗಿಗಳು ಕೆಲವೊಂದು ತಪ್ಪುಗಳನ್ನು ಮಾಡಬಾರದು. ಇದರಿಂದ ಈಗ ಇರುವ ಕಂಪನಿಯಲ್ಲಿ ಹಾಗೂ ಕೆಲಸ ಹುಡುಕುತ್ತಿರುವ ಕಂಪನಿಗಳಲ್ಲೂ ನಿಮ್ಮ ಮೇಲಿನ ಅಭಿಪ್ರಾಯ ಕೆಡಬಹುದು. ಹೀಗಾಗಿ ಆದಷ್ಟು ಈ ತಪ್ಪುಗಳನ್ನು ತಪ್ಪಿಸುವುದು ಸೂಕ್ತ. (ಸಾಂದರ್ಭಿಕ ಚಿತ್ರ)
2/ 8
1) ಮೊದಲನೆಯದಾಗಿ ಈಗ ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ನೀವು ಉದ್ಯೋಗ ಬೇಟೆಗೆ ಇಳಿದಿದ್ದೀರಿ ಎಂಬ ಸುಳಿವನ್ನು ನೀಡಬೇಡಿ. ಏಕೆಂದರೆ ನಿಮ್ಮ ಮೇಲಿನ ಅಭಿಪ್ರಾಯ ಕೆಡಬಹುದು. ಬಡ್ತಿ ಸಮಯದಲ್ಲಿ ಇದನ್ನೇ ಪರಿಗಣಿಸಬಹುದು. ಹೇಗೋ ಕೆಲಸ ಬಿಡಲಿದ್ದಾರೆ ಎಂದು ಸ್ಯಾಲರಿ ಹೈಕ್, ಪ್ರಮೋಷನ್ ಕೊಡದೇ ಇರಬಹುದು.
3/ 8
2) ಬೇರೆಡೆ ಕೆಲಸ ಹುಡುಕಲು ಆಫೀಸ್ ಲ್ಯಾಪ್ ಟಾಪ್, ಇ ಮೇಲೆ ಐಡಿಯನ್ನು ಬಳಸಬೇಡಿ. ಇದು ವೃತ್ತಿಪರತೆ ಅಲ್ಲ. ನೀವು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿರುವ ಕಂಪನಿಯವರು ಕೂಡ ನಿಮ್ಮನ್ನು ಜಡ್ಜ್ ಮಾಡಬಹುದು. ಆಫೀಸ್ ಸಮಯದಲ್ಲೂ ರೆಸ್ಯೂಮ್ ಗಳನ್ನು ಕಳುಹಿಸಬೇಡಿ.
4/ 8
3) ರೆಸ್ಯೂಮ್ ಕಳುಹಿಸಲು, ಜಾಬ್ ಸರ್ಚ್ ಮಾಡಲು ನಿಮ್ಮ ವೈಯಕ್ತಿಕ ಲ್ಯಾಪ್ ಟಾಪ್ ಬಳಸಿ. ಬಿಡುವಿನ ವೇಳೆಯಲ್ಲಿ ಇವುಗಳನ್ನು ಮಾಡಿ. ಕೆಲಸದ ಸಮಯದಲ್ಲಿ ಮಾಡಬೇಡಿ. (ಸಾಂದರ್ಭಿಕ ಚಿತ್ರ)
5/ 8
4) ನೀವು ಈಗ ಇರುವ ಕಂಪನಿಯ, ಹುದ್ದೆಯ ಐಡೆಂಟಿ ಕಾರ್ಡ್ ಅನ್ನು ಬಳಸಬೇಡಿ. ಇಂಟರ್ ವ್ಯೂಗೆ ತೆರಳಿದಾಗಲು ಬೇರೆ ಕಂಪನಿಯ ಐಡಿ ಧರಿಸುವುದು ನಿಷಿದ್ಧ.
6/ 8
5) ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲೂ ಸದ್ಯ ನೀವು ಇರುವ ಕಂಪನಿಯ ಬಗ್ಗೆಯೇ ಮಾಹಿತಿ ಇರಲಿ. ಹೊಸ ಕಂಪನಿಯವರು ನಿಮ್ಮ ಬಗ್ಗೆ ಜಾಲಾಡಿದಾಗ ಸೂಕ್ತ ಮಾಹಿತಿ ಸಿಗುವುದು ಮುಖ್ಯ.
7/ 8
6) ಹೊಸ ಕೆಲಸದ ಇಂಟರ್ ವ್ಯೂನಲ್ಲಿ ಹಳೆಯ ಕಂಪನಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಬಾಸ್ ಸರಿ ಇಲ್ಲ, ಕಂಪನಿ ಸರಿ ಇಲ್ಲ ಅಂತೆಲ್ಲಾ ಹೇಳುವುದು ವೃತ್ತಿಪರತೆ ಅಲ್ಲ. ನಿಮ್ಮ ಕೆಲಸದ ಅಗತ್ಯದ ಬಗ್ಗೆ ಮಾತ್ರ ಮಾತನಾಡಿ. ಸಾಂದರ್ಭಿಕ ಚಿತ್ರ
8/ 8
7) ಸುಳ್ಳು ಹೇಳಿ ರಜೆ ತೆಗೆದುಕೊಂಡು ಬೇರೆ ಕಂಪನಿಯ ಇಂಟರ್ ವ್ಯೂಗೆ ಹಾಜರಾಗಬೇಡಿ. ಆರೋಗ್ಯ ಸರಿ ಇಲ್ಲ, ಎಮರ್ಜೆನ್ಸಿ ರಜೆ ಅಂತೆಲ್ಲಾ ಹೇಳುವುದು ಬೇಡ. ವೈಯಕ್ತಿಕ ಕಾರಣ ಅಂತಷ್ಟೇ ಹೇಳಿ ರಜೆ ಪಡೆದುಕೊಳ್ಳಿ. ಸುಳ್ಳು ಹೇಳಿ ಸಿಕ್ಕಿಬಿದ್ದರೆ ಚೆನ್ನಾಗಿರೋಲ್ಲ. (ಸಾಂದರ್ಭಿಕ ಚಿತ್ರ)