Career Tips: ಉದ್ಯೋಗಕ್ಕೆ ಆಯ್ಕೆ ಆಗದಿದ್ದರೆ ಬೇಸರ ಬೇಡ, ಇಷ್ಟು ಮಾಡಿ ಸಾಕು ಮುಂದೆ ಕೆಲಸ ಸಿಗುತ್ತೆ

ಕೆಲಸ ಹುಡುಕುವುದು ಬಹುತೇಕರ ಜೀವನದ ಒಂದು ಹಂತ. ಓದು ಮುಗಿಸಿದ ನಂತರ ಅಥವಾ ಅನೇಕ ಕಾರಣಗಳಿಂದ ಕೆಲಸ ಹುಡುಕಬೇಕಾಗುತ್ತದೆ. ಮೊದಲ ಉದ್ಯೋಗ ಸಿಗುವ ಮುನ್ನ ಅನೇಕ ತಿರಸ್ಕಾರಗಳನ್ನು ಸಹ ಎದುರಿಸಬೇಕಾಗುತ್ತದೆ. ಜಾಬ್ ರಿಜೆಕ್ಷನ್ ನಂತರ ಬೇಸರಗೊಳ್ಳದೆ ಮತ್ತೆ ಸಕರಾತ್ಮಕವಾಗಿ ಉದ್ಯೋಗಕ್ಕಾಗಿ ಪ್ರಯತ್ನಿಸುವುದು ಹೇಗೆಂದು ಇಲ್ಲಿ ತಿಳಿಯೋಣ.

First published:

  • 18

    Career Tips: ಉದ್ಯೋಗಕ್ಕೆ ಆಯ್ಕೆ ಆಗದಿದ್ದರೆ ಬೇಸರ ಬೇಡ, ಇಷ್ಟು ಮಾಡಿ ಸಾಕು ಮುಂದೆ ಕೆಲಸ ಸಿಗುತ್ತೆ

    ಕಷ್ಟಪಟ್ಟು ಕೆಲಸಕ್ಕಾಗಿ ಪ್ರಯತ್ನಿಸಿದ ನಂತರವೂ ಅವರು ನಿರಾಕರಣೆಗಳನ್ನು ಎದುರಿಸಬೇಕಾಗುತ್ತದೆ. ನಿರಾಕರಣೆ ಬಳಿಕವೂ ನೀವು ಬಯಸಿದ ಕೆಲಸವನ್ನು ಪಡೆಯುವಲ್ಲಿ ಯಶಸ್ಸನ್ನು ಪಡೆಯಬಹುದು. ಅಂತಹ ಕೆಲವು ಸಲಹೆಗಳ ಬಗ್ಗೆ ನಾವು ನಿಮಗೆ ಇಲ್ಲಿ ನೀಡಿದ್ದೇವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Career Tips: ಉದ್ಯೋಗಕ್ಕೆ ಆಯ್ಕೆ ಆಗದಿದ್ದರೆ ಬೇಸರ ಬೇಡ, ಇಷ್ಟು ಮಾಡಿ ಸಾಕು ಮುಂದೆ ಕೆಲಸ ಸಿಗುತ್ತೆ

    1) ಯಾರಾದರೂ ತನ್ನ ನೆಚ್ಚಿನ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ನಿರಾಕರಣೆಯನ್ನು ಎದುರಿಸಿದರೆ ನಿರಾಶೆಗೊಳ್ಳಬೇಡಿ. ನಿರಾಕರಣೆಯ ನಂತರ, ನಿಮ್ಮ ಸ್ವಂತ ಕೌಶಲ್ಯಗಳನ್ನು ಗುರುತಿಸಿ, ನಿಮ್ಮ ವೀಕ್ ಪಾಯಿಂಟ್ ಮೇಲೆ ಕೆಲಸ ಮಾಡಿ. ಆ ಕೆಲಸಕ್ಕೆ ಮತ್ತೆ ಅರ್ಜಿ ಸಲ್ಲಿಸಿ. ಆಗ ನಿರಾಕರಣೆ ಸಾಧ್ಯತೆ ಕಡಿಮೆ ಇರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Career Tips: ಉದ್ಯೋಗಕ್ಕೆ ಆಯ್ಕೆ ಆಗದಿದ್ದರೆ ಬೇಸರ ಬೇಡ, ಇಷ್ಟು ಮಾಡಿ ಸಾಕು ಮುಂದೆ ಕೆಲಸ ಸಿಗುತ್ತೆ

    2) ನಿರಾಕರಣೆಗಳಿಂದ ಸ್ಫೂರ್ತಿ ಪಡೆಯಿರಿ: ಯಾರಾದರೂ ಕೆಲಸಕ್ಕಾಗಿ ತಿರಸ್ಕರಿಸಿದರೆ, ನೀವು ನಿರ್ದಿಷ್ಟ ಕೌಶಲ್ಯಗಳನ್ನು ಹೊಂದಿಲ್ಲ ಎಂದು ಅರ್ಥ. ಆ ಸ್ಕಿಲ್ಸ್ ಗಳನ್ನು ಕಷ್ಟಪಟ್ಟು ಕಲಿಯುವ ಪ್ರಯತ್ನ ಮಾಡಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Career Tips: ಉದ್ಯೋಗಕ್ಕೆ ಆಯ್ಕೆ ಆಗದಿದ್ದರೆ ಬೇಸರ ಬೇಡ, ಇಷ್ಟು ಮಾಡಿ ಸಾಕು ಮುಂದೆ ಕೆಲಸ ಸಿಗುತ್ತೆ

    ಉದ್ಯೋಗ ನಿರಾಕರಣೆಗೆ ಅಭ್ಯರ್ಥಿಯ ಕಡಿಮೆ ಅನುಭವವೂ ಕಾರಣವಾಗಿರಬಹುದು. ಅದಕ್ಕಾಗಿಯೇ ನಿರಾಶೆಗೊಳ್ಳುವುದಕ್ಕಿಂತ ನಿಮ್ಮ ಕೌಶಲ್ಯಗಳನ್ನು ಸುಧಾರಿಸುವುದು ಉತ್ತಮ. ಅನುಭವ ತಾನಾಗಿಯೇ ಬರುತ್ತದೆ (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Career Tips: ಉದ್ಯೋಗಕ್ಕೆ ಆಯ್ಕೆ ಆಗದಿದ್ದರೆ ಬೇಸರ ಬೇಡ, ಇಷ್ಟು ಮಾಡಿ ಸಾಕು ಮುಂದೆ ಕೆಲಸ ಸಿಗುತ್ತೆ

    3) ಗುರಿ ಮುಟ್ಟಲು ಇತರೆ ಮಾರ್ಗಗಳನ್ನು ಕಂಡುಕೊಳ್ಳಿ: ಪ್ರತಿಯೊಬ್ಬರಿಗೂ ಗುರಿ ಇರುತ್ತದೆ. ತಲುಪಲು ಹಲವು ಮಾರ್ಗಗಳಿವೆ. ನೀವು ನಿರಾಕರಣೆಗಳನ್ನು ಎದುರುಸಿದರೆ ಅದೇ ರೀತಿಯ ಬೇರೆ ಕಂಪನಿಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Career Tips: ಉದ್ಯೋಗಕ್ಕೆ ಆಯ್ಕೆ ಆಗದಿದ್ದರೆ ಬೇಸರ ಬೇಡ, ಇಷ್ಟು ಮಾಡಿ ಸಾಕು ಮುಂದೆ ಕೆಲಸ ಸಿಗುತ್ತೆ

    4) ನಿರಾಕರಣೆಗೆ ಕಾರಣ ಕೇಳಿ: ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗೆ ಕೆಲಸ ಸಿಗುವುದಿಲ್ಲ ಎಂದು ಹೇಳಿದಾಗ, ಮೊದಲು ತಿರಸ್ಕರಿಸಿದ ಕಾರಣವನ್ನು ಕೇಳಿ. ಬೇಸರ ವ್ಯಕ್ತಪಡಿಸದೆ ಮುಂದೆ ತಿದ್ದುಕೊಳ್ಳುವುದಾಗಿ ತಿಳಿಸುವುದು ಸೂಕ್ತ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Career Tips: ಉದ್ಯೋಗಕ್ಕೆ ಆಯ್ಕೆ ಆಗದಿದ್ದರೆ ಬೇಸರ ಬೇಡ, ಇಷ್ಟು ಮಾಡಿ ಸಾಕು ಮುಂದೆ ಕೆಲಸ ಸಿಗುತ್ತೆ

    5) ಕೆಲಸ ಸಿಗುವುದು ಅನುಮಾನ ಎಂದಾಗ ನಿಮಗೆ ಈ ಕಂಪನಿಯಲ್ಲಿ ಕೆಲಸ ಮಾಡಲು ಆಸಕ್ತಿ ಇದೆ. ಅವಕಾಶ ನೀಡಿದರೆ ಒಳ್ಳೆಯ ಕೆಲಸ ಮಾಡುತ್ತೇನೆ, ತನ್ನನ್ನು ತಾನು ಸುಧಾರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿ. ಇದಲ್ಲದೆ, ಸ್ವಲ್ಪ ಸಮಯದ ನಂತರ ಮತ್ತೆ ಸಂದರ್ಶನಕ್ಕೆ ಬರಬಹುದೇ ಎಂದು ಕೇಳಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Career Tips: ಉದ್ಯೋಗಕ್ಕೆ ಆಯ್ಕೆ ಆಗದಿದ್ದರೆ ಬೇಸರ ಬೇಡ, ಇಷ್ಟು ಮಾಡಿ ಸಾಕು ಮುಂದೆ ಕೆಲಸ ಸಿಗುತ್ತೆ

    6) ನಮ್ಮಲ್ಲಿ ಒಂದು ಹುದ್ದೆಗೆ ಅನೇಕರು ಪ್ರಯತ್ನಿಸಿರುತ್ತಾರೆ. ನೀವು ಆ ಕೆಲಸಕ್ಕೆ ಅರ್ಹರಾಗಿದ್ದರೂ ಒಬ್ಬರನ್ನು ಮಾತ್ರ ಆಯ್ಕೆ ಮಾಡುವ ಕಾರಣ ನಿಮಗೆ ಕೆಲಸ ಸಿಗದೇ ಹೋಗಬಹುದು. ಅಂತಹ ತಿರಸ್ಕಾರಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ, ಆತ್ಮವಿಶ್ವಾಸದಿಂದ ಬೇರೆಡೆ ಉದ್ಯೋಗಕ್ಕೆ ಪ್ರಯತ್ನಿಸಿ.

    MORE
    GALLERIES