Career Mistakes: ಈ 6 ಅಭ್ಯಾಸಗಳು ನಿಮ್ಮ ವೃತ್ತಿಜೀವನವನ್ನೇ ಹಾಳು ಮಾಡುತ್ತವೆ, ಎಚ್ಚರಿಕೆ

ಓದು ಮುಗಿಸಿ, ಉದ್ಯೋಗ ಮಾಡಲು ಶುರು ಮಾಡುವ ಎಲ್ಲರಿಗೂ ತಮ್ಮ ವೃತ್ತಿಯಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂಬ ಹಂಬಲವಿರುತ್ತದೆ. ಕಾಲ ಕಾಲಕ್ಕೆ ಸ್ಯಾಲರಿ ಹೈಕ್, ಪ್ರಮೋಷನ್ ಸಿಗುತ್ತಿರಬೇಕು ಎಂದುಕೊಳ್ಳುತ್ತಾರೆ. ಆದರೆ ಕೆಲವೊಂದು ಅಭ್ಯಾಸಗಳು ಅವರ ಕರಿಯರ್ ಗೆ ಮುಳ್ಳಾಗುತ್ತವೆ.

First published:

  • 17

    Career Mistakes: ಈ 6 ಅಭ್ಯಾಸಗಳು ನಿಮ್ಮ ವೃತ್ತಿಜೀವನವನ್ನೇ ಹಾಳು ಮಾಡುತ್ತವೆ, ಎಚ್ಚರಿಕೆ

    ವೃತ್ತಿಜೀವನದ ಆರಂಭದಲ್ಲಿ ಗೊತ್ತೋ, ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ದೀರ್ಘಾವಧಿಯಲ್ಲಿ ವೃತ್ತಿಜೀವನವನ್ನು ಹಾಳು ಮಾಡುತ್ತವೆ. ಅಂತಹ 6 ಅಭ್ಯಾಸಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ನೀವು ಈ ತಪ್ಪುಗಳನ್ನು ಮಾಡುತ್ತಿದ್ದರೆ, ಕೂಡಲೇ ಎಚ್ಚೆತ್ತುಕೊಳ್ಳಿ.

    MORE
    GALLERIES

  • 27

    Career Mistakes: ಈ 6 ಅಭ್ಯಾಸಗಳು ನಿಮ್ಮ ವೃತ್ತಿಜೀವನವನ್ನೇ ಹಾಳು ಮಾಡುತ್ತವೆ, ಎಚ್ಚರಿಕೆ

    1) ಹಣದ ಹಿಂದೆ ಓಡುವುದು: ವೃತ್ತಿಜೀವನದ ಆರಂಭದಲ್ಲಿ ಕಲಿಯುವುದರ ಕಡೆಗೆ ಹೆಚ್ಚು ಗಮನ ಕೊಡಬೇಕು. ಎಲ್ಲವನ್ನೂ ದುಡ್ಡಿನಿಂದಲೇ ಅಳೆಯಬಾರದು. ಹೆಚ್ಚಿನ ಸಂಬಳದ ಆಸೆಗೆ ಬಿದ್ದು, ಅರ್ಧಂಬರ್ಧ ಕಲಿಯಬಾರದು. ಪದೇ ಪದೇ ಕಂಪನಿಗಳನ್ನು ಬದಲಿಸಬಾರದು.

    MORE
    GALLERIES

  • 37

    Career Mistakes: ಈ 6 ಅಭ್ಯಾಸಗಳು ನಿಮ್ಮ ವೃತ್ತಿಜೀವನವನ್ನೇ ಹಾಳು ಮಾಡುತ್ತವೆ, ಎಚ್ಚರಿಕೆ

    2) ನಿಮ್ಮ ಸಾಮರ್ಥ್ಯವನ್ನು ಅರಿಯದೇ ಇರುವುದು: ನಿಮ್ಮನ್ನು ನೀವೇ ಕಡಿಮೆ ಅಂದಾಜು ಮಾಡಿಕೊಂಡರೆ ಎಂದಿಗೂ ನೀವು ಸಾಮಾನ್ಯ ಮಟ್ಟದ ಉದ್ಯೋಗಿಯೇ ಇರುತ್ತೀರಿ. ಮಿತಿಗಳನ್ನು ಮೀರಿ ಬೆಳೆದಾಗಲೇ ಕರಿಯರ್ ಯಶಸ್ವಿಯಾಗೋದು.

    MORE
    GALLERIES

  • 47

    Career Mistakes: ಈ 6 ಅಭ್ಯಾಸಗಳು ನಿಮ್ಮ ವೃತ್ತಿಜೀವನವನ್ನೇ ಹಾಳು ಮಾಡುತ್ತವೆ, ಎಚ್ಚರಿಕೆ

    3) ಎಲ್ಲವನ್ನೂ ಕಲಿಯಲು ಹೋಗುವುದು: ಈ ದಡ್ಡತನವನ್ನು ಮಾಡಿಕೊಳ್ಳಬೇಡಿ. ಎಲ್ಲದರ ಬಗ್ಗೆ ಮಾಹಿತಿ ಇರಬೇಕು, ಆದರೆ ಯಾವುದಾದರೂ ಒಂದು ವಿಷಯದಲ್ಲಿ ನೀವು ಎಕ್ಸ್ ಪರ್ಟ್ ಆಗಿರಬೇಕು ಎಂಬುವುದನ್ನು ಮರೆಯಬೇಡಿ.

    MORE
    GALLERIES

  • 57

    Career Mistakes: ಈ 6 ಅಭ್ಯಾಸಗಳು ನಿಮ್ಮ ವೃತ್ತಿಜೀವನವನ್ನೇ ಹಾಳು ಮಾಡುತ್ತವೆ, ಎಚ್ಚರಿಕೆ

    4) ನೆಟ್ ವರ್ಕಿಂಗ್ ಬೆಳಿಸಿಕೊಳ್ಳದೇ ಇರುವುದು: ತಾನಾಯ್ತು, ತನ್ನ ಕೆಲಸವಾಯ್ತು ಎಂದು ಇದ್ದರೆ ನಿಮ್ಮ ವೃತ್ತಿಜೀವನ ಬಾವಿಯಲ್ಲಿನ ಕಪ್ಪೆಯಂತೆ ಆಗುತ್ತೆ. ಕಾಂಟ್ಯಾಪ್ಟ್ ಬಿಲ್ಡಿಂಗ್ ಇರಬೇಕು. ಇದು ನಿಮ್ಮ ವೃತ್ತಿ ಬೆಳವಣಿಗೆ ಸಹಾಯಕಾರಿ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 67

    Career Mistakes: ಈ 6 ಅಭ್ಯಾಸಗಳು ನಿಮ್ಮ ವೃತ್ತಿಜೀವನವನ್ನೇ ಹಾಳು ಮಾಡುತ್ತವೆ, ಎಚ್ಚರಿಕೆ

    5) ನೀವು ಮಾಡೋ ಕೆಲಸವನ್ನು ಸದಾ ಗುರುತಿಸುತ್ತಾರೆ ಎಂಬ ಭ್ರಮೆ ಬೇಡ. ನಿಮ್ಮ ಪರವಾಗಿ ನೀವೇ ಎದ್ದು ಮಾತನಾಡಬೇಕು. ನಿಮ್ಮ ಕೆಲಸ ಲೆಕ್ಕಕ್ಕೇ ಇಲ್ಲದಂತೆ ಆಗುತ್ತಿದ್ದರೆ ಎಚ್ಚೆತ್ತುಕೊಳ್ಳಬೇಕು. ಬಾಸ್/ಮ್ಯಾನೇಜರ್ ಗೆ ನೀವೇ ನಿಮ್ಮ ಸಾಧನೆ ಬಗ್ಗೆ ಮನವರಿಕೆ ಮಾಡಿಕೊಡಬೇಕು.

    MORE
    GALLERIES

  • 77

    Career Mistakes: ಈ 6 ಅಭ್ಯಾಸಗಳು ನಿಮ್ಮ ವೃತ್ತಿಜೀವನವನ್ನೇ ಹಾಳು ಮಾಡುತ್ತವೆ, ಎಚ್ಚರಿಕೆ

    6) ವೈಯಕ್ತಿಕ ವಿಚಾರಗಳನ್ನು ಆಫೀಸ್ ಗೆ ತರುವುದು: ಪರ್ಸನಲ್ ಲೈಫೇ ಬೇರೆ, ಪ್ರೊಫೆಷನಲ್ ಲೈಫೇ ಬೇರೆ. ಈ ಗೆರೆಯನ್ನು ಮೀರಬಾರದು. ವೈಯಕ್ತಿಕ ವಿಚಾರಗಳನ್ನು ಕಚೇರಿಗೆ ತರುವುದು ನಿಮಗೇ ನಷ್ಟ ಎಂಬುವುದನ್ನು ಮರೆಯಬೇಡಿ.

    MORE
    GALLERIES