ಐಪಿಎಸ್ ಮನೋಜ್ ಕುಮಾರ್ ಶರ್ಮಾ 12ನೇ ತರಗತಿಯಲ್ಲಿ ಫೇಲ್ ಆಗಿ ಟೆಂಪೋ ಓಡಿಸಿಕೊಂಡು ಭಿಕ್ಷುಕರೊಂದಿಗೆ ಮಲಗುತ್ತಿದ್ದ ಇವರು ಐಪಿಎಸ್ ಆಗಿದ್ದೇ ಒಂದು ಪವಾಡ. ಮಧ್ಯಪ್ರದೇಶದ ಐಪಿಎಸ್ ಮನೋಜ್ ಕುಮಾರ್ ಶರ್ಮಾ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಿ ಯಶಸ್ಸು ಸಾಧಿಸಿದರು. ದೊಡ್ಡ ಅಧಿಕಾರಿ ಆದರಷ್ಟೇ ಪ್ರೇಮ ವಿವಾಹವಾಗುವುದು ಎಂದು ಗರ್ಲ್ ಫ್ರೆಂಡ್ ಹಾಕಿದ ಕಂಡಿಷನ್ ನಿಂದ ಇವರು ಐಪಿಎಸ್ ಅಧಿಕಾರಿ ಆಗಿದ್ದಾರೆ. ಆ ಮೂಲಕ ಇವರ ಪ್ರೇಮಕಥೆ ಸ್ಪೂರ್ತಿದಾಯಕ ಎನಿಸಿಕೊಂಡಿದೆ.
ಐಎಎಸ್ ಅಂಜು ಶರ್ಮಾ ಕೂಡ 10-12ರಲ್ಲಿ ಅನುತ್ತೀರ್ಣರಾದರು. 12 ನೇ ತರಗತಿಯಲ್ಲಿ ಅರ್ಥಶಾಸ್ತ್ರದಲ್ಲಿ ಅನುತ್ತೀರ್ಣಳಾಗಿದ್ದರು, 10 ನೇ ತರಗತಿಯಲ್ಲಿ ರಸಾಯನಶಾಸ್ತ್ರದಲ್ಲಿ ಫೇಲ್ ಆಗಿದ್ದರು. ನಂತರ ಕಾಲೇಜಿನಲ್ಲಿ ಗೋಲ್ಡ್ ಮೆಡಲಿಸ್ಟ್ ಆದರು. ಬಿ.ಎಸ್ಸಿ ಮುಗಿಸಿ ನಂತರ ಎಂಬಿಎ ಮಾಡಿದರು. 22 ನೇ ವಯಸ್ಸಿನಲ್ಲಿ, ಅವರು ಮೊದಲ ಬಾರಿಗೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಕೂಡ 10ನೇ ತರಗತಿಯಲ್ಲಿ ಮೂರು ಬಾರಿ ಅನುತ್ತೀರ್ಣರಾಗಿದ್ದರು. ಇಂದು ಅವರು ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ. ಪ್ರಸ್ತುತ ಬರೋಡಾದಲ್ಲಿ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗಾಗಿ ಆಡುತ್ತಿದ್ದಾರೆ. ಕೃನಾಲ್ ಪಾಂಡ್ಯ ಮುಂಬೈ ಇಂಡಿಯನ್ಸ್ ಗಾಗಿ ಆಡುವ ಮೂಲಕ ಐಪಿಎಲ್ ಗೆ ಪಾದಾರ್ಪಣೆ ಮಾಡಿದರು.