ವಿನಿತಾ ಸಿಂಗ್ ಅವರ ಪತಿ ಕೌಶಿಕ್ ಮುಖರ್ಜಿ ಅವರೊಂದಿಗೆ 2015 ರಲ್ಲಿ ತಮ್ಮ ಮೂರನೇ ಸ್ಟಾರ್ಟಪ್ ಶುಗರ್ ಕಾಸ್ಮೆಟಿಕ್ಸ್ ಅನ್ನು ಪ್ರಾರಂಭಿಸಿದರು. ಈ ಸ್ಟಾರ್ಟಪ್ ನಲ್ಲಿ ಅವರು ಉತ್ತಮ ಯಶಸ್ಸನ್ನು ಪಡೆದರು. ಇಂದು ಶುಗರ್ ಕಾಸ್ಮೆಟಿಕ್ಸ್ ವಹಿವಾಟು 500 ಕೋಟಿಗೂ ಅಧಿಕವಾಗಿದೆ. ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಸೆಪ್ಟೆಂಬರ್ 2022 ರಲ್ಲಿ ಶುಗರ್ ಕಾಸ್ಮೆಟಿಕ್ಸ್ ನಲ್ಲಿ ಹೂಡಿಕೆ ಮಾಡಿದ್ರು .
ವಿನಿತಾ ಸಿಂಗ್ ಫಿಟ್ನೆಸ್ ಫ್ರೀಕ್ ಆಗಿದ್ದಾರೆ. ಅವರು 20 ಮ್ಯಾರಥಾನ್ ಮತ್ತು ಅಲ್ಟ್ರಾ ಮ್ಯಾರಥಾನ್ ಗಳಲ್ಲಿ ಭಾಗವಹಿಸಿದ್ದಾರೆ. ಇದಲ್ಲದೆ, ಅವರು 12 ಹಾಫ್ ಮ್ಯಾರಥಾನ್ ಗಳಲ್ಲಿ ಭಾಗವಹಿಸಿದ್ದಾರೆ. ಅವರು ಆಸ್ಟ್ರಿಯಾದಲ್ಲಿ ಐರನ್ ಮ್ಯಾನ್ ಟ್ರಯಥ್ಲಾನ್ ಅನ್ನು ಪೂರ್ಣಗೊಳಿಸಿದ್ದರು. 2018 ರ ಮುಂಬೈ ಮ್ಯಾರಥಾನ್ ನಲ್ಲಿ, ಅವರು 6 ತಿಂಗಳ ಗರ್ಭಾವಸ್ಥೆಯಲ್ಲೂ 21 ಕಿಮೀ ಓಡಿದರು.