UPSC Success Story: ಬಡ ಟೈಲರ್ ದಂಪತಿಯ ಇಬ್ಬರೂ ಮಕ್ಕಳು ಈಗ IPS ಅಧಿಕಾರಿಗಳು
IPS Pankaj Kumawat and IPS Amit Kumawat: ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಒಬ್ಬರಲ್ಲ ಇಬ್ಬರು. ಇದು ಇಬ್ಬರು ಸಾಧಕರ ಕಥೆ ಎನ್ನುವುದಕ್ಕಿಂದ ಒಂದು ಬಡ ಕುಟುಂಬವೇ ಗೆದ್ದ ಕಥೆ ಎನ್ನುವುದು ಹೆಚ್ಚು ಸೂಕ್ತ ಎನಿಸುತ್ತೆ. ಬಡ ಟೈಲರ್ ದಂಪತಿಯ ಇಬ್ಬರೂ ಗಂಡು ಮಕ್ಕಳು ಈಗ IPS ಅಧಿಕಾರಿಗಳಾಗಿರುವ ಯಶಸ್ಸಿನ ಸ್ಟೋರಿ ಇಲ್ಲಿದೆ.
ವಿಶೇಷವೆಂದರೆ ಇಬ್ಬರೂ ಸಹೋದರರು ಒಟ್ಟಿಗೆ IPS ಆಗಿದ್ದಾರೆ. ಈ ಕಥೆ ಐಪಿಎಸ್ ಪಂಕಜ್ ಕುಮಾವತ್ ಮತ್ತು ಅಮಿತ್ ಕುಮಾವತ್ ಅವರದ್ದು. ಪಂಕಜ್ ಮತ್ತು ಅಮಿತ್ ಕುಮಾವತ್ ಬಡ ಕುಟುಂಬದಿಂದ ಬಂದವರು. ಇಡೀ ಜೀವನ ಆರ್ಥಿಕ ಸಂಕಷ್ಟದಲ್ಲಿಯೇ ಕಳೆದವರು. ಈಗ ಇವರ ಕುಟುಂಬದಲ್ಲಿ ಭಾಗ್ಯದ ಬೆಳಕು ಮೂಡಿದೆ.
2/ 8
ಈ ಸೋದರರ ತಂದೆ ಸುಭಾಷ್ ಕುಮಾವತ್ ಟೈಲರ್ ಕೆಲಸ ಮಾಡುತ್ತಿದ್ದರು. ತಾಯಿ ರಾಜೇಶ್ವರಿ ದೇವಿ ಕೂಡ ಟೈಲರಿಂಗ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಅವರ ಜೀವನವು ತುಂಬಾ ಕಷ್ಟಕರವಾಗಿತ್ತು. ಪ್ರಪಂಚದ ಇತರ ಪೋಷಕರಂತೆ, ಇವರು ಸಹ ತಮ್ಮ ಮಕ್ಕಳು ಓದಿ ಜೀವನದಲ್ಲಿ ಮುಂದೆ ಬರಲಿ ಎಂದು ಬಯಸಿದ್ದರು.
3/ 8
ಮಕ್ಕಳು ಸಹ ತಂದೆ-ತಾಯಿ ಕಷ್ಟ ನೋಡಿ ಅವರ ಕನಸನ್ನು ನನಸು ಮಾಡಲು ಶ್ರಮವಹಿಸಿ ಓದಿದರು. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಓದುತ್ತಿರುವಾಗಲೇ ಸಹೋದರರಿಬ್ಬರೂ ಒಟ್ಟಿಗೇ ಅಧಿಕಾರಿಗಳಾಗುವ ಕನಸು ಕಂಡು ಅದನ್ನು ನನಸು ಮಾಡಿಕೊಂಡಿದ್ದಾರೆ. ಪಂಕಜ್ ಮತ್ತು ಅಮಿತ್ ಯುಪಿಎಸ್ ಸಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾಗಿದ್ದಾರೆ.
4/ 8
ಸಹೋದರರಾದ ಪಂಕಜ್ ಮತ್ತು ಅಮಿತ್ ರಾಜಸ್ಥಾನದ ಜುಂಜುನುವಿನ ಭಾರತಿ ವಿದ್ಯಾ ವಿಹಾರ್ ಶಾಲೆಯಲ್ಲಿ 10 ನೇ ತರಗತಿಯವರೆಗೆ ಓದಿದ್ದಾರೆ. ನಂತರ ಜುಂಜುನು ಅಕಾಡೆಮಿಯಿಂದ 12 ನೇ ಕ್ಲಾಸ್ ಪಾಸ್ ಆಗಿದ್ದಾರೆ. ದೆಹಲಿಯ ಐಐಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಮಾಡಿದ್ದಾರೆ.
5/ 8
ಯುಪಿಎಸ್ ಸಿ ಪಾಸಾಗುವ ಕನಸನ್ನು ನನಸು ಮಾಡಿಕೊಳ್ಳಲು ಹಣದ ಅಗತ್ಯವಿತ್ತು. ಹಾಗಾಗಿ ಬಿಟೆಕ್ ನಂತರ ಪಂಕಜ್ ನೋಯ್ಡಾದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗವನ್ನೂ ಪಡೆದರು. ಪಂಕಜ್ ಅವರ ಕೆಲಸವು ಕುಟುಂಬದ ಆರ್ಥಿಕ ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿತು.
6/ 8
ತಂದೆ-ತಾಯಿ ಸಹ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದರು. 2018 ರಲ್ಲಿ, ಇಬ್ಬರೂ ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಪಂಕಜ್ AIR 443 ಪಡೆದರು, ಅಮಿತ್ 600 ನೇ ರ್ಯಾಂಕ್ ಪಡೆದರು. ಪಂಕಜ್ ಗೆ ಐಪಿಎಸ್ ಹುದ್ದೆ ಸಿಕ್ಕಿದೆ.
7/ 8
2018 ರಲ್ಲಿ ಅವರ ಮೊದಲ ಪ್ರಯತ್ನದಲ್ಲಿ, ಅಮಿತ್ ಐಆರ್ ಟಿಎಸ್ ಕೇಡರ್ ಅನ್ನು ಪಡೆದರು. 2019 ರಲ್ಲಿ ಮತ್ತೆ ಇಬ್ಬರೂ ಪರೀಕ್ಷೆ ಬರೆದರು. ಎರಡನೇ ಬಾರಿ ಅಮಿತ್ 423 ಮತ್ತು ಪಂಕಜ್ 424ನೇ ಶ್ರೇಣಿ ಪಡೆದರು. ಎರಡನೇ ಬಾರಿಗೆ ಇಬ್ಬರಿಗೂ ಐಪಿಎಸ್ ಕೇಡರ್ ಸಿಕ್ಕಿತು. ಪಂಕಜ್ ಆಗಲೇ ಐಪಿಎಸ್ ಆಗಿದ್ದರು. ಅಮಿತ್ ಎರಡನೇ ಬಾರಿಯೂ ಐಪಿಎಸ್ ಆದರು.
8/ 8
ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಪಂಕಜ್ ಮತ್ತು ಅಮಿತ್ ಅವರು ನಮಗೆ ಓದುವುದು ಕಷ್ಟವಲ್ಲ. ಶಿಕ್ಷಣದ ವೆಚ್ಚವನ್ನು ಪೋಷಕರು ಭರಿಸುವುದೇ ಕಷ್ಟವಾಗಿತ್ತು ಎಂದು ಹೇಳಿದ್ದಾರೆ. ಬಡ ಕುಟುಂಬದಿಂದ ಬಂದ ಸೋದರರು ಜೀವನದಲ್ಲಿ ಗೆದ್ದಿರುವುದು ನಿಜಕ್ಕೂ ಅನೇಕರಿಗೆ ಸ್ಪೂರ್ತಿದಾಯಕ.
First published:
18