Success Story: ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯುವಕ ಈಗ ಪೊಲೀಸ್ ಸಬ್ ಇನ್ಸ್​ಪೆಕ್ಟರ್

Pintu Rana Success Story: ಕೆಟ್ಟ ಇತಿಹಾಸಗಳು ಎಂದಿಗೂ ನಮ್ಮ ಭವಿಷ್ಯವನ್ನು ನುಂಗಿ ಹಾಕಬಾರದು. ಕೆಟ್ಟ ಪರಿಸ್ಥಿತಿಯಲ್ಲೂ ಶ್ರಮದಿಂದ ಮುಂದುವರಿದರಷ್ಟೇ ಒಳ್ಳೆಯ ದಿನಗಳನ್ನು ನೋಡಲು ಸಾಧ್ಯ ಎಂದು ರಾಜಸ್ಥಾನದ ಯುವಕ ಪಿಂಟು ರಾಣಾ ತೋರಿಸಿಕೊಟ್ಟಿದ್ದಾರೆ. ಕಡು ಬಡತನದ ಕಾರಣ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾತ ಈಗ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿದ್ದಾರೆ. ಅವರ ಯಶಸ್ಸಿನ ಕಥೆಯನ್ನು ತಿಳಿಯೋಣ ಬನ್ನಿ.

First published:

  • 17

    Success Story: ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯುವಕ ಈಗ ಪೊಲೀಸ್ ಸಬ್ ಇನ್ಸ್​ಪೆಕ್ಟರ್

    ಕುಟುಂಬದಲ್ಲಿ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿರುವ, ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿರುವ ಯುವಕರಿಗೆ ಪಿಂಟು ರಾಣಾ ನಿಜಕ್ಕೂ ಸ್ಪೂರ್ತಿದಾಯಕ. ಜಾಲೋರ್ ನ ಸಂಚೋರ್ ಪ್ರದೇಶದ ಪಿಂಟು ರಾಣಾ ಅವರ ಬದುಕೇ ಒಂದು ಹೋರಾಟ.

    MORE
    GALLERIES

  • 27

    Success Story: ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯುವಕ ಈಗ ಪೊಲೀಸ್ ಸಬ್ ಇನ್ಸ್​ಪೆಕ್ಟರ್

    ಮನೆಯಲ್ಲಿ ಕಡು ಬಡತನ, ಆರ್ಥಿಕವಾಗಿ ಕುಟುಂಬಕ್ಕೆ ಆಸೆರೆಯಾಗಬೇಗಾದ ಅನಿವಾರ್ಯತೆಯ ಹೊರೆ ಪಿಂಟು ಮೇಲೆ ಇತ್ತು. ಸರ್ಕಾರಿ ಶಾಲೆಯಲ್ಲಿ 12ರವರೆಗೆ ಓದಿದ ಪಿಂಟು ನಂತರ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಂಡರು. 15 ಸಾವಿರ ರೂ. ಸಂಬಳಕ್ಕಾಗಿ ರಾತ್ರಿ ಇಡೀ ಸೆಕ್ಯೂರಿಡಿ ಗಾರ್ಡ್ ಆಗಿ ದುಡಿಯುತ್ತಿದ್ದರು. ಬೆಳಗಿನ ಸಮಯದಲ್ಲಿ ಓದುತ್ತಿದ್ದರು.

    MORE
    GALLERIES

  • 37

    Success Story: ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯುವಕ ಈಗ ಪೊಲೀಸ್ ಸಬ್ ಇನ್ಸ್​ಪೆಕ್ಟರ್

    ಕೆಲಸ ಮಾಡಿಕೊಂಡೇ ಓದಿ ಪದವಿಯನ್ನು ಪಡೆದರು. ರಾತ್ರಿ ಕೆಲಸ ಮಾಡಿ, ಬೆಳಗ್ಗೆ ಲೈಬ್ರರಿಗಳಿಗೆ ಹೋಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಸರ್ಕಾರಿ ನೌಕರಿ ಪಡೆಯಲೇ ಬೇಕೆಂಬುವುದು ಅವರ ಗುರಿಯಾಗಿತ್ತು. ಇದಕ್ಕಾಗಿ ಅವರು ಹಗಲಿರುಳು ಶ್ರಮಿಸಿದರು.

    MORE
    GALLERIES

  • 47

    Success Story: ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯುವಕ ಈಗ ಪೊಲೀಸ್ ಸಬ್ ಇನ್ಸ್​ಪೆಕ್ಟರ್

    ಅಡೆತಡೆಗಳ ಮಧ್ಯೆಯೇ ಪಿಂಟು ಅವರು ರಾಜಸ್ಥಾನ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪರೀಕ್ಷೆಯನ್ನು ತೆಗೆದುಕೊಂಡರು. ಅದರಲ್ಲಿ ಪಿಂಟು ರಾಣಾ 33 ನೇ ರ್ಯಾಂಕ್ ಗಳಿಸಿದರು. 14 ತಿಂಗಳ ತರಬೇತಿಯ ನಂತರ 2022 ಸೆಪ್ಟೆಂಬರ್ 2ರಂದು ಪಾಸಿಂಗ್ ಔಟ್ ಪರೇಡ್ ನಲ್ಲಿ ಪಿಂಟು ರಾಣಾ ಅವರ ಸಮವಸ್ತ್ರಕ್ಕೆ ಸ್ಟಾರ್ ಗಳು ಸೇರ್ಪಡೆಗೊಂಡವು.

    MORE
    GALLERIES

  • 57

    Success Story: ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯುವಕ ಈಗ ಪೊಲೀಸ್ ಸಬ್ ಇನ್ಸ್​ಪೆಕ್ಟರ್

    ಈ ಸಾರ್ಥಕ ಕ್ಷಣಕ್ಕೆ ತಂದೆ ಪೂನ್ಮಾರಂ ರಾಣಾ ಮತ್ತು ತಾಯಿ ಸುಖಿದೇವಿ ಸಾಕ್ಷಿಯಾದರು, ಭಾವುಕರಾಗಿ ಕಣ್ಣೀರಿಟ್ಟರು. ತನ್ನ ಸಾಧನೆಯಲ್ಲಿ ಕುಟುಂಬ ಮತ್ತು ಸ್ನೇಹಿತರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪಿಂಟು ರಾಣಾ ಸ್ಮರಿಸುತ್ತಾರೆ.

    MORE
    GALLERIES

  • 67

    Success Story: ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯುವಕ ಈಗ ಪೊಲೀಸ್ ಸಬ್ ಇನ್ಸ್​ಪೆಕ್ಟರ್

    ಪಿಂಟು ರಾಣಾ ಅವರು ಕೇರ್ನ್ ಇಂಡಿಯಾ ಕಂಪನಿಯ ಸಂಚೋರ್ ಕಚೇರಿಯಲ್ಲಿ ತಿಂಗಳಿಗೆ ರೂ.15,000 ಕ್ಕೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಈಗ ಜೋಧ್ ಪುರದ ದೇವನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    MORE
    GALLERIES

  • 77

    Success Story: ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯುವಕ ಈಗ ಪೊಲೀಸ್ ಸಬ್ ಇನ್ಸ್​ಪೆಕ್ಟರ್

    ಬಡ ಕುಟುಂಬಗಳಿಂದ ಬಂದಿರುವ, ಕಷ್ಟಗಳ ಮಧ್ಯೆಯೂ ದೊಡ್ಡ ಅಧಿಕಾರಿ ಆಗಬೇಕು ಎಂದು ಬಯಸುವ ಸಾವಿರಾರು ಯುವಕರಿಗೆ ಪಿಂಟು ಮಾದರಿಯಾಗಿದ್ದಾರೆ. ಕಷ್ಟಗಳನ್ನೇ ಕಾರಣ ಮಾಡಿಕೊಳ್ಳದೆ ಶ್ರಮ ಹಾಕಿದರೆ ಸಾಧನೆ ಸಾಧ್ಯ ಎಂದು ಪಿಂಟು ಸಲಹೆ ನೀಡುತ್ತಾರೆ.

    MORE
    GALLERIES