1995ರ ಮಾರ್ಚ್ 15 ರಂದು ಬಿಹಾರದ ಮುಜಾಫರ್ ಪುರದಲ್ಲಿ ಜನಿಸಿದ ಶಿವಾಂಗಿ ಸಿಂಗ್ 10 ನೇ ವಯಸ್ಸಿನಲ್ಲಿ ಪೈಲಟ್ ಆಗಬೇಕೆಂದು ಕನಸು ಕಂಡಿದ್ದರು. ಅವರೇ ಹೇಳುವಂತೆ, ನಾನು 10 ವರ್ಷದವಳಾಗಿದ್ದಾಗ ಒಬ್ಬ ನಾಯಕ ಹೆಲಿಕಾಪ್ಟರ್ ಮೂಲಕ ನನ್ನ ಹಳ್ಳಿಗೆ ಬಂದರು. ಎಲ್ಲರೂ ಅವರನ್ನು ನೋಡಲು ಹೋಗುತ್ತಿದ್ದರು. ಅಜ್ಜನ ಜೊತೆ ನಾನೂ ಹೋಗಿದ್ದೆ. ಆಗ ಹೆಲಿಕಾಪ್ಟರ್ ಗಳು ಹಾರುವುದನ್ನು ನೋಡಿ ನಾನೂ ಪೈಲಟ್ ಆಗುತ್ತೇನೆ ಎಂದುಕೊಂಡೆ.