UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡೇ 3ನೇ Rank ಪಡೆದು IAS ಆದ ಸ್ತುತಿ ಚರಣ್

IAS Stuti Charan Success Story: UPSC ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯೊಂದಿಗೆ ಪಾಸ್ ಆಗುವುದು ಬಹುತೇಕ ಅಭ್ಯರ್ಥಿಗಳ ಬಯಕೆ. ಆದರೆ ಉದ್ಯೋಗದ ಜೊತೆ UPSC ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳು ಟಾಪ್ ರ್ಯಾಂಕ್ ನ ಆಸೆಯನ್ನೇ ಬಿಟ್ಟು ಬಿಡುತ್ತಾರೆ. UPSC ಪರೀಕ್ಷೆಯಲ್ಲಿ ಪಾಸ್ ಆದರೆ ಸಾಕು ಅಂದುಕೊಳ್ಳುತ್ತಾರೆ. ಆದರೆ ಇದನ್ನು ಸವಾಲಾಗಿ ತೆಗೆದುಕೊಂಡು ಯಶಸ್ವಿಯಾದವರು ಐಎಎಸ್ ಸ್ತುತಿ ಚರಣ್.

First published:

  • 17

    UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡೇ 3ನೇ Rank ಪಡೆದು IAS ಆದ ಸ್ತುತಿ ಚರಣ್

    ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ನಮ್ಮ ಇಂದಿನ ಅತಿಥಿ ಐಎಎಸ್ ಸ್ತುತಿ ಚರಣ್. ರಾಜಸ್ಥಾನದ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿದ ಇವರಿಗೆ ಯುಪಿಎಸ್ ಸಿ ಹಾದಿ ಖಂಡಿತವಾಗಿಯೂ ಸುಲಭವಾಗಿರಲಿಲ್ಲ. ಆದರೆ ಬಾಲ್ಯದ ಕನಸ್ಸನ್ನು ಈ ದಿಟ್ಟ ಹೆಣ್ಣು ಮಗಳು ನನಸು ಮಾಡಿಕೊಂಡಿದ್ದಾರೆ.

    MORE
    GALLERIES

  • 27

    UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡೇ 3ನೇ Rank ಪಡೆದು IAS ಆದ ಸ್ತುತಿ ಚರಣ್

    ಫುಲ್ ಟೈಂ ಉದ್ಯೋಗದೊಂದಿಗೆ ತಯಾರಿ ನಡೆಸಿ UPSC ಟಾಪರ್ ಆಗಿದ್ದಾರೆ ಸ್ತುತಿ ಚರಣ್. ಬ್ಯಾಂಕ್ ಉದ್ಯೋಗದ ಜೊತೆಗೆ UPSC ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾರೆ. 3ನೇ ರ್ಯಾಂಕ್ ಪಡೆದು ಈಗ IAS ಆಗುವ ಮೂಲಕ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ.

    MORE
    GALLERIES

  • 37

    UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡೇ 3ನೇ Rank ಪಡೆದು IAS ಆದ ಸ್ತುತಿ ಚರಣ್

    UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಬಹುತೇಕ ಅಭ್ಯರ್ಥಿಗಳು ಉದ್ಯೋಗದ ಜೊತೆಗೆ ನಾಗರಿಕ ಸೇವೆಗೆ ತಯಾರಿ ನಡೆಸಬೇಕೋ ಅಥವಾ ಕೆಲಸ ಬಿಟ್ಟು ತಯಾರಿ ನಡೆಸಬೇಕೋ ಎಂಬ ಸಂದಿಗ್ಧದಲ್ಲಿದ್ದಾರೆ. ಕೆಲವೊಮ್ಮೆ ಈ ಸಂದಿಗ್ಧತೆಯಲ್ಲಿ ಕೆಲವು ವರ್ಷಗಳು ಕಳೆದು ಹೋಗುತ್ತವೆ.

    MORE
    GALLERIES

  • 47

    UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡೇ 3ನೇ Rank ಪಡೆದು IAS ಆದ ಸ್ತುತಿ ಚರಣ್

    ಆದರೆ ಯುಪಿಎಸ್ಸಿ ಆಕಾಂಕ್ಷಿಗಳು ತಮ್ಮ ಪೂರ್ಣಾವಧಿಯ ಕೆಲಸದ ಜೊತೆಗೆ ಸಿವಿಲ್ ಸರ್ವೀಸ್ ಗೆ ಸಿದ್ಧರಾಗಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಉದಾಹರಣೆಗಳು ನಮ್ಮ ಮುಂದೆ ಇವೆ. ಈ ಪಟ್ಟಿಯಲ್ಲಿ ಐಎಎಸ್ ಸ್ತುತಿ ಚರಣ್ ಹೆಸರೂ ಸೇರಿದೆ.

    MORE
    GALLERIES

  • 57

    UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡೇ 3ನೇ Rank ಪಡೆದು IAS ಆದ ಸ್ತುತಿ ಚರಣ್

    ಐಎಎಸ್ ಸ್ತುತಿ ಚರಣ್ ಅವರು ರಾಜಸ್ಥಾನದ ಜೋಧ್ ಪುರದ ಖಾರಿ ಕಲ್ಲಾ ಎಂಬ ಹಳ್ಳಿಯಲ್ಲಿ ಜನಿಸಿದವರು. ಅವರ ತಂದೆ ರಾಮ್ ಕರಣ್ ಬರೆತ್ ಅವರು ರಾಜಸ್ಥಾನ ರಾಜ್ಯ ಉಗ್ರಾಣ ನಿಗಮದಲ್ಲಿ ಉಪ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಸುಮನ್ ಹಿಂದಿ ಉಪನ್ಯಾಸಕಿಯಾಗಿದ್ದಾರೆ. ಸ್ತುತಿಯ ತಂಗಿ ನೀತಿ ಅವರು ದಂತವೈದ್ಯೆ. ಅವರ ತಂದೆ 1974ರ ಬ್ಯಾಚ್ ನ ಐಎಎಸ್ ಅಧಿಕಾರಿ.

    MORE
    GALLERIES

  • 67

    UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡೇ 3ನೇ Rank ಪಡೆದು IAS ಆದ ಸ್ತುತಿ ಚರಣ್

    ಸ್ತುತಿ ಚರಣ್ ತನ್ನ ಶಾಲಾ ಶಿಕ್ಷಣವನ್ನು ಭಿಲ್ವಾರದ ವಿವೇಕಾನಂದ ಕೇಂದ್ರ ವಿದ್ಯಾಲಯದಲ್ಲಿ ಮಾಡಿದರು. ನಂತರ ಅವರು ಲಚು ಮೆಮೋರಿಯಲ್ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ಪದವಿ ಪಡೆದರು. ನಂತರ ನವದೆಹಲಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದರು. ತಮ್ಮ ಪದವಿಯ ಸಮಯದಲ್ಲೇ ನಾಗರಿಕ ಸೇವೆಗೆ ತಯಾರಿ ಆರಂಭಿಸಿದರು.

    MORE
    GALLERIES

  • 77

    UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡೇ 3ನೇ Rank ಪಡೆದು IAS ಆದ ಸ್ತುತಿ ಚರಣ್

    ಸ್ತುತಿ ಚರಣ್ 2012 ರಲ್ಲಿ ತನ್ನ ಮೂರನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ಸಮಯದಲ್ಲಿ ಅವರು ಯುಕೊ ಬ್ಯಾಂಕ್ನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಸ್ತುತಿ ಅವರು ಗುಜರಾತಿನ ಛೋಟಾ ಉದಯಪುರದಲ್ಲಿ ನೇಮಕಗೊಂಡಿದ್ದಾರೆ.

    MORE
    GALLERIES