ಸವಿತಾ ಪ್ರಧಾನ್ ಅವರು ಸಂಸದೀಯ ಮಂಡಿ ಎಂಬ ಹಳ್ಳಿಯಲ್ಲಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಅತ್ಯಂತ ಬಡತನದಲ್ಲಿ ಬೆಳೆದವರು. ತನ್ನ ಹೆತ್ತವರಿಗೆ ಮೂರನೇ ಮಗು. ಆಗ ಅವರ ಗ್ರಾಮದಲ್ಲಿ 10ನೇ ತರಗತಿವರೆಗೆ ಮಾತ್ರ ಶಾಲೆ ಇತ್ತು. ಹೆಚ್ಚಿನ ಹುಡುಗಿಯರನ್ನು ಓದಲು ಕಳುಹಿಸುತ್ತಿರಲಿಲ್ಲ. ತನ್ನ ಹಳ್ಳಿಯಿಂದ 10ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ಹುಡುಗಿ ಸವಿತಾ.
ಸವಿತಾ ಪ್ರಧಾನ್ ಅವರ ವೈವಾಹಿಕ ಜೀವನ ಕಷ್ಟಗಳಿಂದ ಕೂಡಿತ್ತು. ಅತ್ತೆ ಆಕೆಯನ್ನು ಸಾಕಷ್ಟು ಹಿಂಸಿಸುತ್ತಿದ್ದರು. ಆಕೆಯ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಎಲ್ಲರೊಂದಿಗೆ ಕುಳಿತು ಊಟ ಮಾಡುವ ಹಕ್ಕೂ ಇರಲಿಲ್ಲ. ಯಾರ ಬಳಿಯೂ ಮಾತನಾಡುವಂತೆಯೂ ಇರಲಿಲ್ಲ. ಊಟಕ್ಕೂ ಸರಿಯಾಗಿ ಕೊಡುತ್ತಿರಲಿಲ್ಲ. ಆಗ ಕದ್ದ ರೊಟ್ಟಿಗಳನ್ನು ಒಳಉಡುಪಿನಲ್ಲಿ ಬಚ್ಚಿಟ್ಟುಕೊಂಡು ಯಾರೂ ಇಲ್ಲದಾಗ ತಿನ್ನುತ್ತಿದ್ದರಂತೆ.