Success Story: ಕಣ್ಣು ಕಾಣದಿದ್ದರೂ UPSC ಪರೀಕ್ಷೆಯಲ್ಲಿ ಪಾಸ್ ಆಗಿ IFS ಆಗಿರುವ ದಿಟ್ಟೆ ಈಕೆ

First Visually Impaired IFS Officer: ಸಾಮಾನ್ಯ ಅಭ್ಯರ್ಥಿಗಳೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವುದಕ್ಕೆ ವರ್ಷಗಳೇ ಹಿಡಿಯುತ್ತೆ. ಇನ್ನು ಸಂಪೂರ್ಣ ದೃಷ್ಟಿ ಇಲ್ಲದವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗುವುದು ಕಬ್ಬಿಣದ ಕಡಲೆಯೇ ಸರಿ. ಆದರೆ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದಾರೆ ನಮ್ಮ ಇಂದಿನ ಅತಿಥಿ. ದೃಷ್ಟಿನ್ಯೂನತೆಯನ್ನು ಮೀರಿ ಸಾಧನೆ ಮಾಡಿರುವ ಬೆನೊ ಜೆಫಿನ್ ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

First published:

  • 17

    Success Story: ಕಣ್ಣು ಕಾಣದಿದ್ದರೂ UPSC ಪರೀಕ್ಷೆಯಲ್ಲಿ ಪಾಸ್ ಆಗಿ IFS ಆಗಿರುವ ದಿಟ್ಟೆ ಈಕೆ

    2005 ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ (IFS) ಸೇರಿದ ಮೊದಲ ಸಂಪೂರ್ಣ ಅಂಧ ಅಧಿಕಾರಿ ಬೆನೊ ಜೆಫಿನ್. UPSC ಪರೀಕ್ಷೆಯಲ್ಲಿ ಬೆನೊ ಜೆಫಿನ್ AIR 343 ಶ್ರೇಣಿ ಗಳಿಸಿದ್ದಾರೆ. ಚೆನ್ನೈನ ಬೆನೊ ಜೆಫೀನ್ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಅವರಿಗೆ ಕೇವಲ 25 ವರ್ಷ.

    MORE
    GALLERIES

  • 27

    Success Story: ಕಣ್ಣು ಕಾಣದಿದ್ದರೂ UPSC ಪರೀಕ್ಷೆಯಲ್ಲಿ ಪಾಸ್ ಆಗಿ IFS ಆಗಿರುವ ದಿಟ್ಟೆ ಈಕೆ

    ಬೆನೊ ಇಂಗ್ಲಿಷ್ ಸಾಹಿತ್ಯದಲ್ಲಿ ಡಾಕ್ಟರೇಟ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕೆಲಸ ಮಾಡುವ ನಡುವೆ ಜಗ್ಗಾಡುತ್ತಿದ್ದರು. ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬೆನ್ನೋ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

    MORE
    GALLERIES

  • 37

    Success Story: ಕಣ್ಣು ಕಾಣದಿದ್ದರೂ UPSC ಪರೀಕ್ಷೆಯಲ್ಲಿ ಪಾಸ್ ಆಗಿ IFS ಆಗಿರುವ ದಿಟ್ಟೆ ಈಕೆ

    ಬೆನೊ ಅವರ ತಂದೆ ಲ್ಯೂಕ್ ಆಂಥೋನಿ ಚಾರ್ಲ್ಸ್ ಚೆನ್ನೈನಲ್ಲಿ ರೈಲ್ವೆ ಉದ್ಯೋಗಿ, ತಾಯಿ ಮೇರಿ ಪದ್ಮಜಾ ಗೃಹಿಣಿಯಾಗಿದ್ದಾರೆ. ಬೆನೊ ತನ್ನ ಶಾಲಾ ಶಿಕ್ಷಣವನ್ನು ಅಂಧರಿಗಾಗಿ ಇರುವ ಲಿಟಲ್ ಫ್ಲವರ್ ಕಾನ್ವೆಂಟ್ ನಲ್ಲಿ ಮಾಡಿದರು. ಆಕೆಯ ಕುಟುಂಬ ಪ್ರತಿಹಂತದಲ್ಲೂ ಬೆಂಬಲವಾಗಿ ನಿಂತಿತ್ತು.

    MORE
    GALLERIES

  • 47

    Success Story: ಕಣ್ಣು ಕಾಣದಿದ್ದರೂ UPSC ಪರೀಕ್ಷೆಯಲ್ಲಿ ಪಾಸ್ ಆಗಿ IFS ಆಗಿರುವ ದಿಟ್ಟೆ ಈಕೆ

    ಬೆನೊ ಜೆಫಿನ್ ತನ್ನ ಯಶಸ್ಸಿಗೆ ತನ್ನ ಶಿಕ್ಷಕರು, ತರಬೇತುದಾರರಿಗೆ ಹಾಗೂ ಅವರ ಪೋಷಕರ ಬೆಂಬಲವೇ ಕಾರಣವೆಂದು ಹೇಳುತ್ತಾರೆ. ಅವರು ಅಧ್ಯಯನಕ್ಕಾಗಿ ಜಾಬ್ ಆಕ್ಸೆಸ್ ವಿತ್ ಸ್ಪೀಚ್ (JAWS) ಸಾಫ್ಟ್ ವೇರ್ ಅನ್ನು ಬಳಸಿದರು. ಈ ಸಾಫ್ಟ್ವೇರ್ ನೊಂದಿಗೆ ಅಂಧರು ಕಂಪ್ಯೂಟರ್ ಪರದೆಯಿಂದ ಓದಬಹುದು.

    MORE
    GALLERIES

  • 57

    Success Story: ಕಣ್ಣು ಕಾಣದಿದ್ದರೂ UPSC ಪರೀಕ್ಷೆಯಲ್ಲಿ ಪಾಸ್ ಆಗಿ IFS ಆಗಿರುವ ದಿಟ್ಟೆ ಈಕೆ

    ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ, ಅಂತಿಮವಾಗಿ ಗೆದ್ದಿರುವ ಬೆನೊ ಅಂಗವಿಕಲರಿಗೆ ಸಲಹೆ ನೀಡುತ್ತಾರೆ. ನಿಮ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡಬೇಡಿ. ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಿ ಎಂದು ಕಿವಿಮಾತು ಕೇಳಿದ್ದಾರೆ.

    MORE
    GALLERIES

  • 67

    Success Story: ಕಣ್ಣು ಕಾಣದಿದ್ದರೂ UPSC ಪರೀಕ್ಷೆಯಲ್ಲಿ ಪಾಸ್ ಆಗಿ IFS ಆಗಿರುವ ದಿಟ್ಟೆ ಈಕೆ

    ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಐಎಫ್ ಎಸ್ ನಲ್ಲಿ ಬೆನೊ ಆಯ್ಕೆಯನ್ನು ಖಚಿತಪಡಿಸಲು ಫೋನ್ ಕರೆ ಬಂದಾಗ, ಆ ಕರೆ ಅವರ ಆಕೆಯ ಜೀವನವನ್ನೇ ಶಾಶ್ವತವಾಗಿ ಬದಲಾಯಿಸಿತು.

    MORE
    GALLERIES

  • 77

    Success Story: ಕಣ್ಣು ಕಾಣದಿದ್ದರೂ UPSC ಪರೀಕ್ಷೆಯಲ್ಲಿ ಪಾಸ್ ಆಗಿ IFS ಆಗಿರುವ ದಿಟ್ಟೆ ಈಕೆ

    ಹುಟ್ಟಿನಿಂದಲೇ ಕುರುಡು, ಬ್ರೈಲ್ ಲಿಪಿಯಲ್ಲಿ ಸಾಕಷ್ಟು ಶಿಕ್ಷಣ ಸಾಮಗ್ರಿಗಳು ಲಭ್ಯವಿಲ್ಲದ ಕಾರಣ ಬೆನೊ ಸ್ವತಃ ಓದಲು ಸಾಧ್ಯವಾಗಲಿಲ್ಲ. ಪರೀಕ್ಷೆಗೆ ತಯಾರಾಗಲು ಆಕೆಯ ಕುಟುಂಬ ಮತ್ತು ಸ್ನೇಹಿತರು ಗಂಟೆಗಟ್ಟಲೆ ಓದುತ್ತಿದ್ದರು. ಅದನ್ನು ಕೇಳಿಸಿಕೊಂಡು ಬೆನೊ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.

    MORE
    GALLERIES