UPSC Success Story: ರೈತನ ಮಗ ಈಗ ದೊಡ್ಡ ಅಧಿಕಾರಿ; ಮಾಜಿ ಸಂಸದರ ಪುತ್ರಿಯನ್ನು ವರಿಸಿದ ರಾಜನ್ಸ್ ಸಿಂಗ್
IRTS Rajhans Singh Success Story: ತಮ್ಮ ಮದುವೆಯ ಮೂಲಕ ಸುದ್ದಿಯಲ್ಲಿರುವ IRTS ಅಧಿಕಾರಿ ರಾಜನ್ಸ್ ಸಿಂಗ್ ಅವರು ಇಂದಿನ ಯುಪಿಎಸ್ ಸಿ ಸಾಧಕರ ಸರಣಿಯ ಅತಿಥಿಯಾಗಿದ್ದಾರೆ. ಅವರ ಸಾಧನೆಯ ಹಾದಿ ಬಗ್ಗೆ ತಿಳಿಯೋಣ ಬನ್ನಿ.
ರಾಜನ್ಸ್ ಸಿಂಗ್ ಅವರು ಬಿಹಾರದ ಮುಂಗೇರ್ ನಿವಾಸಿ. ರೈತ ಕುಟುಂಬದಿಂದ ಬಂದಿರುವ ರಾಜನ್ಸ್ ಅವರು ಕಷ್ಟಪಟ್ಟು ಓದಿ ಜೀವನದಲ್ಲಿ ಮುಂದೆ ಬಂದಿದ್ದಾರೆ. ರಾಜನ್ಸ್ ಚಿಕ್ಕಂದಿನಿಂದಲೂ ಓದಿನಲ್ಲಿ ಚುರುಕಾಗಿದ್ದರು.
2/ 8
ಮುಂಗೇರ್ ನ ಸರಸ್ವತಿ ಶಿಶು ಮಂದಿರದಿಂದ ಪ್ರಾಥಮಿಕ ಶಿಕ್ಷಣ ಪಡೆದ ನಂತರ, ಪಾಟ್ನಾದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು. ನಂತರ ಹೈದರಾಬಾದ್ ನ ಎನ್ ಐಟಿ ದುರ್ಗಾಪುರದಲ್ಲಿ ಬಿ.ಟೆಕ್ ಪದವಿ ಪಡೆದರು.
3/ 8
ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿದ ನಂತರ ಟಾಟಾ ಗ್ರೂಪ್ ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಉದ್ಯೋಗ ಮಾಡುತ್ತಲೇ UPSC ಪರೀಕ್ಷೆಗೂ ತಯಾರಿ ನಡೆಸಿದ್ದರು. ಸತತ ಎರಡು ಬಾರಿ ಪರೀಕ್ಷೆಯಲ್ಲಿ ವಿಫಲವಾದರೂ ಅವರು ಧೈರ್ಯ ಕಳೆದುಕೊಳ್ಳಲಿಲ್ಲ.
4/ 8
ದೆಹಲಿಯಲ್ಲಿಯೇ ಇದ್ದುಕೊಂಡು, ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದರು. ಇದರ ಫಲವಾಗಿ ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡರು. 660ನೇ ರ್ಯಾಂಕ್ ಪಡೆಯುವ ಮೂಲಕ ಐಆರ್ ಟಿಎಸ್ ಅಂದರೆ ರೈಲ್ವೇ ಸೇವೆಯಲ್ಲಿ ಸರ್ಕಾರಿ ನೌಕರಿ ಪಡೆದಿದ್ದಾರೆ.
5/ 8
ನಿನ್ನೆ ಅಂದರೆ ಫೆ.15ರಂದು ಬಿಹಾರದ ಮಾಜಿ ಸಂಸದರಾದ ಆನಂದ್ ಮೋಹನ್ ಅವರ ಪುತ್ರಿ ವಕೀಲರಾದ ಸುರಭಿ ಆನಂದ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ಇವರ ಮದುವೆಗೆ ದೊಡ್ಡ ದೊಡ್ಡ ರಾಜಕೀಯ ನಾಯಕರು ಭೇಟಿ ನೀಡಿ, ನವವಿವಾಹಿತರಿಗೆ ಶುಭ ಕೋರಿದರು.
6/ 8
ಆನಂದ್ ಮೋಹನ್ ಮತ್ತು ರಾಜನ್ಸ್ ಸಿಂಗ್ ಅವರ ಕುಟುಂಬಗಳು ಹಲವು ವರ್ಷಗಳಿಂದ ಪರಿಚಿತವಾಗಿವೆ. ಸುರಭಿ ಆನಂದ್ ಸಹೋದರ ಚೇತನ್ ಆನಂದ್ ಮತ್ತು ರಾಜನ್ಸ್ ಸಿಂಗ್ ಬಾಲ್ಯದ ಸ್ನೇಹಿತರು. ಸ್ನೇಹಿತನ ಸೋದರಿಯನ್ನೇ ರಾಜನ್ಸ್ ವರಿಸಿದ್ದಾರೆ.
7/ 8
ಇನ್ನು ರಾಜನ್ಸ್ ಸಿಂಗ್ ಅವರು ಮಾವ ಆನಂದ್ ಮೋಹನ್ ಮಗಳ ಮದುವೆ ಮಾಡುವ ಸಲುವಾಗಿ ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿದ್ದಾರೆ. ಕೊಲೆ ಪ್ರಕರಣವೊಂದರ ಸಂಬಂಧ ಅವರು ಜೈಲು ಸೇರಿದ್ದಾರೆ.
8/ 8
ಇನ್ನು ರಾಜನ್ಸ್-ಸುರಭಿ ಅದ್ಧೂರಿ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸಾಕಷ್ಟು ವೈರಲ್ ಸಹ ಆಗಿವೆ. ನೆಟ್ಟಿಗರು ನವಜೋಡಿಗೆ ಶುಭ ಕೋರುತ್ತಿದ್ದಾರೆ.
First published:
18