ಮದುವೆ ಮುರಿದುಬಿದ್ದ ನಂತರ, ಕೋಮಲ್ ತನ್ನ ಮನೆಯಿಂದ ದೂರದ ಹಳ್ಳಿಯಲ್ಲಿ ವಾಸಿಸಲು ಪ್ರಾರಂಭಿಸಿದರು. ಆ ಹಳ್ಳಿಯಲ್ಲಿ ಇಂಟರ್ ನೆಟ್ ಸೌಲಭ್ಯವಾಗಲಿ, ಇಂಗ್ಲಿಷ್ ಪತ್ರಿಕೆಯಾಗಲಿ ಇರಲಿಲ್ಲ. ಇದರ ಹೊರತಾಗಿಯೂ, ಅವರು ತಮ್ಮ ತಯಾರಿಯನ್ನು ಮುಂದುವರೆಸಿದರು. ಆ ಸಮಯದಲ್ಲಿ ಅವರು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಿದ್ದರು.