Success Story: ನೋಡಲು ಮಾಡ್ರನ್ ಬ್ಯೂಟಿ, UPSC ಪರೀಕ್ಷೆಯಲ್ಲಿ 11ನೇ Rank ಗಳಿಸಿದ ಜಾಣೆ

ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ಇಂದಿನ ಅತಿಥಿ ಐಆರ್ ಎಸ್ ಅಧಿಕಾರಿ ದೇವಯಾನಿ ಸಿಂಗ್. ವಾರದಲ್ಲಿ ಎರಡು ದಿನ ಓದುವ ಮೂಲಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್ ಎನಿಸಿಕೊಂಡಿದ್ದಾರೆ. ನೋಡಲು ಬಾಲಿವುಡ್ ತಾರೆಯಂತೆ ಕಾಣುವ ಈಕೆಯ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ.

First published:

  • 17

    Success Story: ನೋಡಲು ಮಾಡ್ರನ್ ಬ್ಯೂಟಿ, UPSC ಪರೀಕ್ಷೆಯಲ್ಲಿ 11ನೇ Rank ಗಳಿಸಿದ ಜಾಣೆ

    ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಆದರೆ ತಮ್ಮ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸರಿಯಾದ ಕಾರ್ಯತಂತ್ರದಿಂದ ಯುಪಿಎಸ್ ಸಿಯನ್ನು ಸುಲಭವಾಗಿ ಉತ್ತೀರ್ಣರಾದ ಅನೇಕ ಅಭ್ಯರ್ಥಿಗಳು ಇದ್ದಾರೆ.

    MORE
    GALLERIES

  • 27

    Success Story: ನೋಡಲು ಮಾಡ್ರನ್ ಬ್ಯೂಟಿ, UPSC ಪರೀಕ್ಷೆಯಲ್ಲಿ 11ನೇ Rank ಗಳಿಸಿದ ಜಾಣೆ

    ಹರಿಯಾಣದ ನಿವಾಸಿ ಐಆರ್ ಎಸ್ ಅಧಿಕಾರಿ ದೇವಯಾನಿ ಸಿಂಗ್ ಈ ಸಾಲಿಗೆ ಸೇರುತ್ತಾರೆ. ದೇವಯಾನಿ ಸಿಂಗ್ UPSC ಪರೀಕ್ಷೆಯಲ್ಲಿ ಯಾವ ತಂತ್ರದಿಂದ ಉತ್ತೀರ್ಣರಾಗಿದ್ದಾರೆಂದು ಇಲ್ಲಿ ತಿಳಿಯೋಣ.

    MORE
    GALLERIES

  • 37

    Success Story: ನೋಡಲು ಮಾಡ್ರನ್ ಬ್ಯೂಟಿ, UPSC ಪರೀಕ್ಷೆಯಲ್ಲಿ 11ನೇ Rank ಗಳಿಸಿದ ಜಾಣೆ

    IRS ದೇವಯಾನಿ ಸಿಂಗ್ ಚಂಡೀಗಢದಲ್ಲಿ 10 ಮತ್ತು 12 ನೇ ತರಗತಿಯನ್ನು ಓದಿದ್ದಾರೆ. 12 ನೇ ನಂತರ, ಅವರು 2014 ರಲ್ಲಿ ಬಿಐಟಿಎಸ್ ಪಿಲಾನಿಯ ಗೋವಾ ಕ್ಯಾಂಪಸ್ ಗೆ ಸೇರಿಕೊಂಡರು. ಇನ್ ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಮಾಡಿದರು. ಇಂಜಿನಿಯರಿಂಗ್ ಪದವಿ ಪಡೆದ ಕೂಡಲೇ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು.

    MORE
    GALLERIES

  • 47

    Success Story: ನೋಡಲು ಮಾಡ್ರನ್ ಬ್ಯೂಟಿ, UPSC ಪರೀಕ್ಷೆಯಲ್ಲಿ 11ನೇ Rank ಗಳಿಸಿದ ಜಾಣೆ

    ದೇವಯಾನಿ ಸಿಂಗ್ ಅವರು 2015, 2016, 2017 ರಲ್ಲಿ ಸತತ ಮೂರು ಬಾರಿ UPSC ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಕಾಣಿಸಿಕೊಂಡರು. ಆದರೆ ಮೂರೂ ಪ್ರಯತ್ನಗಳಲ್ಲಿ ವಿಫಲರಾದರು. ಮೊದಲ ಎರಡು ಪ್ರಯತ್ನಗಳಲ್ಲಿ ಆಕೆ ಯುಪಿಎಸ್ಸಿಯ ಪ್ರಿಲಿಮ್ಸ್ ನಲ್ಲಿ ತೇರ್ಗಡೆಯಾಗಲಿಲ್ಲ. ಆದರೆ ಮೂರನೇ ಪ್ರಯತ್ನದಲ್ಲಿ ಸಂದರ್ಶನದ ಸುತ್ತು ತಲುಪಿದ್ರು. ಅಂತಿಮವಾಗಿ, ನಾಲ್ಕನೇ ಯಶಸ್ಸನ್ನು ಕಂಡರು.

    MORE
    GALLERIES

  • 57

    Success Story: ನೋಡಲು ಮಾಡ್ರನ್ ಬ್ಯೂಟಿ, UPSC ಪರೀಕ್ಷೆಯಲ್ಲಿ 11ನೇ Rank ಗಳಿಸಿದ ಜಾಣೆ

    ಸತತ ಮೂರು ವೈಫಲ್ಯಗಳ ನಂತರವೂ ಛಲ ಬಿಡಲಿಲ್ಲ. ನಾಲ್ಕನೇ ಬಾರಿಗೆ, ಅವರು 2018 ರಲ್ಲಿ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ನೀಡಿದರು. ಈ ಬಾರಿ ತಂತ್ರ ಮತ್ತು ಅದೃಷ್ಟ ಎರಡೂ ಅವರನ್ನು ಬೆಂಬಲಿಸಿತು. ಅಖಿಲ ಭಾರತ 222 ನೇ ರ್ಯಾಂಕ್ ಪಡೆದರು. ಆಗ ಅವರನ್ನು ಕೇಂದ್ರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ನೇಮಿಸಲಾಯಿತು.

    MORE
    GALLERIES

  • 67

    Success Story: ನೋಡಲು ಮಾಡ್ರನ್ ಬ್ಯೂಟಿ, UPSC ಪರೀಕ್ಷೆಯಲ್ಲಿ 11ನೇ Rank ಗಳಿಸಿದ ಜಾಣೆ

    ಕೇಂದ್ರ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಕೆಲಸ ಸಿಕ್ಕ ನಂತರವೂ ಮತ್ತೊಮ್ಮೆ UPSC ಯನ್ನು ಪ್ರಯತ್ನಿಸಲು ದೇವಯಾನಿ ಸಿಂಗ್ ಮನಸ್ಸು ಮಾಡಿದರು. ಆದರೆ ಈಗ ಅವರ ಕೆಲಸದ ತರಬೇತಿ ಪ್ರಾರಂಭವಾಯಿತು. ಇದರಿಂದಾಗಿ ಆಕೆಗೆ ಅಧ್ಯಯನಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗಲಿಲ್ಲ. ವಾರಾಂತ್ಯದಲ್ಲಿ ಅಂದರೆ ಶನಿವಾರ ಮತ್ತು ಭಾನುವಾರದಂದು ಮಾತ್ರ ಅಧ್ಯಯನ ಮಾಡಲು ಸಾಧ್ಯವಾಯಿತು.

    MORE
    GALLERIES

  • 77

    Success Story: ನೋಡಲು ಮಾಡ್ರನ್ ಬ್ಯೂಟಿ, UPSC ಪರೀಕ್ಷೆಯಲ್ಲಿ 11ನೇ Rank ಗಳಿಸಿದ ಜಾಣೆ

    2019 ರಲ್ಲಿ ದೇವಯಾನಿ ಮತ್ತೊಮ್ಮೆ ಯುಪಿಎಸ್ ಸಿಯನ್ನು ಭೇದಿಸಿದ್ದರು. ಈ ಬಾರಿ ಆಕೆ ಅಖಿಲ ಭಾರತ 11ನೇ ರ್ಯಾಂಕ್ ಪಡೆದು IRS ಆಗಲು ಯಶಸ್ವಿಯಾದಳು.

    MORE
    GALLERIES