Success Story: ಜಸ್ಟ್ ಒಂದೇ ವರ್ಷ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಪಾಸ್ ಆದ ಅನುರಾಗ್ ಸಿಂಗ್

IRS Anurag Singh Success Story: ಕಠಿಣ ಪರೀಕ್ಷೆಯಾದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸು ಕಾಣಲು ಅನೇಕರಿಗೆ ಹಲವು ವರ್ಷಗಳೇ ಹಿಡಿಯುತ್ತೆ. ಆದರೆ ನಮ್ಮ ಇಂದಿನ ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಅತಿಥಿ ಅನುರಾಗ್ ಸಿಂಗ್ ಕೇವಲ ಒಂದು ವರ್ಷವಷ್ಟೇ ತಯಾರಿ ನಡೆಸಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.

First published:

 • 18

  Success Story: ಜಸ್ಟ್ ಒಂದೇ ವರ್ಷ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಪಾಸ್ ಆದ ಅನುರಾಗ್ ಸಿಂಗ್

  ಅನುರಾಗ್ ಸಿಂಗ್ ಉತ್ತರ ಪ್ರದೇಶದ ಆಗ್ರಾದ ನಿವಾಸಿ, ಇವರು ಐಐಟಿ ದೆಹಲಿಯಲ್ಲಿ ಓದಿದ್ದಾರೆ. ಒಂದು ವರ್ಷವಷ್ಟೇ ತಯಾರಿ ನಡೆಸಿ ಅನುರಾಗ್ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಷ್ಟೇ ಅಲ್ಲ, ಅನುರಾಗ್ ಸಿಂಗ್ ಯುಪಿಎಸ್ ಸಿ ಸಂದರ್ಶನದಲ್ಲಿ 200ಕ್ಕೂ ಹೆಚ್ಚು ಅಂಕ ಗಳಿಸಿದ್ದರು.

  MORE
  GALLERIES

 • 28

  Success Story: ಜಸ್ಟ್ ಒಂದೇ ವರ್ಷ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಪಾಸ್ ಆದ ಅನುರಾಗ್ ಸಿಂಗ್

  ಐಐಟಿಯಿಂದ ಉತ್ತೀರ್ಣರಾದ ಅನೇಕರು ನಾಗರಿಕ ಸೇವೆಯಲ್ಲಿದ್ದಾರೆ. ಅವರಲ್ಲಿ ಐಆರ್ ಎಸ್ ಅಧಿಕಾರಿ ಅನುರಾಗ್ ಸಿಂಗ್ ಕೂಡ ಒಬ್ಬರು. ಅನುರಾಗ್ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. 10ನೇ, 12ನೇ ತರಗತಿ ಹಾಗೂ IIT ಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ.

  MORE
  GALLERIES

 • 38

  Success Story: ಜಸ್ಟ್ ಒಂದೇ ವರ್ಷ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಪಾಸ್ ಆದ ಅನುರಾಗ್ ಸಿಂಗ್

  ಅನುರಾಗ್ ಸಿಂಗ್ ತಮ್ಮ ಶಾಲಾ ಶಿಕ್ಷಣವನ್ನು ಆಗ್ರಾದಲ್ಲಿ ಮುಗಿಸಿದ್ದಾರೆ. ಅವರು ತಮ್ಮ 10 ನೇ ತರಗತಿ ಪರೀಕ್ಷೆಯನ್ನು ದಯಾನಂದ ಬಾಲ ಮಂದಿರದಿಂದ ಮಾಡಿದ್ದಾರೆ. ಅದರಲ್ಲಿ ಅವರ CGPA 10 ಆಗಿತ್ತು. ಇದರ ನಂತರ ಅವರು ಆರ್ಮಿ ಸ್ಕೂಲ್ ಆಗ್ರಾದಿಂದ 12 ನೇ ಬೋರ್ಡ್ ಪರೀಕ್ಷೆಯನ್ನು ನೀಡಿದರು. ಇದರಲ್ಲಿ ಶೇ.91 ಅಂಕ ಪಡೆದಿದ್ದರು. IIT ದೆಹಲಿಯಿಂದ B.Tech ನಲ್ಲಿ ಅವರ ಅಂಕ 8.1 CGPA ಆಗಿತ್ತು. ಅನುರಾಗ್ ಸಿಂಗ್ ಅವರು ತಮ್ಮ ಕಾಲೇಜಿನ ಗ್ರಂಥಾಲಯದಿಂದಲೇ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ಆರಂಭಿಸಿದರು.

  MORE
  GALLERIES

 • 48

  Success Story: ಜಸ್ಟ್ ಒಂದೇ ವರ್ಷ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಪಾಸ್ ಆದ ಅನುರಾಗ್ ಸಿಂಗ್

  ಅನುರಾಗ್ ಸಿಂಗ್ 1995ರ ಅಕ್ಟೋಬರ್ 27ರಂದು ಆಗ್ರಾದಲ್ಲಿ ಜನಿಸಿದರು. ಅವರ ತಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಮತ್ತು ತಾಯಿ ಗೃಹಿಣಿ. ಅನುರಾಗ್ ಅವರಿಗೆ ಅಕ್ಕ ಮತ್ತು ಕಿರಿಯ ಸಹೋದರ ಇದ್ದಾರೆ. ಅನುರಾಗ್ ತಮ್ಮ ಕುಟುಂಬ ಸದಸ್ಯರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

  MORE
  GALLERIES

 • 58

  Success Story: ಜಸ್ಟ್ ಒಂದೇ ವರ್ಷ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಪಾಸ್ ಆದ ಅನುರಾಗ್ ಸಿಂಗ್

  ಇಂಜಿನಿಯರಿಂಗ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅನುರಾಗ್ ಗೆ ಭಾರತೀಯ ರೈಲ್ವೇಯಲ್ಲಿ ಕೆಲಸ ಸಿಕ್ಕಿತು. ಯುಪಿಎಸ್ ಸಿಗೆ ತಯಾರಿ ನಡೆಸಲು ಅವರಿಗೆ ಕೇವಲ ಒಂದು ವರ್ಷವಿತ್ತು. ಅದಕ್ಕಾಗಿಯೇ ಅವರು ಒಂದು ವರ್ಷದ ಹೆಚ್ಚುವರಿ ಸಾಮಾನ್ಯ ರಜೆ ತೆಗೆದುಕೊಂಡರು. 2019 ರಲ್ಲಿ, ಅವರ ವಲಯದಿಂದ ಐವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

  MORE
  GALLERIES

 • 68

  Success Story: ಜಸ್ಟ್ ಒಂದೇ ವರ್ಷ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಪಾಸ್ ಆದ ಅನುರಾಗ್ ಸಿಂಗ್

  ಅನುರಾಗ್ ಸಿಂಗ್ 2019 ರ UPSC ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ 689 ನೇ ರ್ಯಾಂಕ್ ಗಳಿಸಿದರು. ಅವರ ಮೊದಲ ಪೋಸ್ಟಿಂಗ್ ಮೇಡ್ಚಲ್ ಕಮಿಷನರೇಟ್ ನಲ್ಲಿ. ಅಲ್ಲಿ ಅವರಿಗೆ ಸಹಾಯಕ ಆಯುಕ್ತರಾಗಿ ನಿಜಾಮಾಬಾದ್ ವಿಭಾಗದ ಉಸ್ತುವಾರಿ ನೀಡಲಾಯಿತು. ಪ್ರಸ್ತುತ ಅವರು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯ ಸಹಾಯಕ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

  MORE
  GALLERIES

 • 78

  Success Story: ಜಸ್ಟ್ ಒಂದೇ ವರ್ಷ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಪಾಸ್ ಆದ ಅನುರಾಗ್ ಸಿಂಗ್

  UPSC ಸಂದರ್ಶನದಲ್ಲಿ ಅನುರಾಗ್ ಸಿಂಗ್ 201 ಅಂಕಗಳನ್ನು ಪಡೆದಿದ್ದಾರೆ. ಅವರಿಗೆ ಬರೋಡಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಲಾಯಿತು. ಆ ಸಮಯದಲ್ಲಿ ಅವರು ರೈಲ್ವೇಯ NAIR ವಡೋದರಾದಲ್ಲಿ ತರಬೇತಿ ಪಡೆಯುತ್ತಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅವರ ಉತ್ತರ ಹೀಗಿತ್ತು. ನಾನು ವಡೋದರಾಕ್ಕೆ ಬಂದ ತಕ್ಷಣ ದೆಹಲಿಯಲ್ಲಿ ಸಿಗದ ಶುದ್ಧ ಗಾಳಿ ಮತ್ತು ನೀಲಿ ಆಕಾಶವನ್ನು ನೋಡಿದೆ. ಇದರೊಂದಿಗೆ ಪ್ರತಿದಿನ ಸಂಜೆ ಹಕ್ಕಿಗಳ ಕಲರವ ಕೇಳುತ್ತಿತ್ತು ಎಂದಿದ್ದರು.

  MORE
  GALLERIES

 • 88

  Success Story: ಜಸ್ಟ್ ಒಂದೇ ವರ್ಷ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಪಾಸ್ ಆದ ಅನುರಾಗ್ ಸಿಂಗ್

  IRS ಅನುರಾಗ್ ಸಿಂಗ್ ಅವರು UPSC ಆಕಾಂಕ್ಷಿಗಳಿಗಾಗಿ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ನೀವು ಸಿವಿಲ್ ಸರ್ವೀಸಸ್ ನಲ್ಲಿ ವೃತ್ತಿಜೀವನವನ್ನು ಮಾಡಲು ಬಯಸಿದ್ರೆ ಶೇ.100ರಷ್ಟು ಶ್ರದ್ಧೆಯಿಂದ ಪ್ರಯತ್ನಿಸಬೇಕು. ಇನ್ನು ಯುಪಿಎಸ್ ಸಿ ಪರೀಕ್ಷೆಯನ್ನು ಪಾಸ್ ಮಾಡಿದವರ ಸಂಪರ್ಕದಲ್ಲಿರಿ. ನಿಮ್ಮ ಪ್ರಯಾಣವನ್ನು ಸುಲಭಗೊಳಿಸಲು ಅವರ ಸಹಾಯ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.

  MORE
  GALLERIES