UPSC Success Story: ಅಬ್ಬಬ್ಬಾ, 6 ವರ್ಷಗಳಲ್ಲಿ 12 ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ; ರೈತನ ಮಗನ ಸಾಧನೆ ಇದು

ಬಹುತೇಕ ಭಾರತೀಯರಿಗೆ ಸರ್ಕಾರಿ ನೌಕರಿಯ ಮೇಲೆ ಮೋಹವಿದೆ. ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕರೂ ಸಾಕು ಅನ್ನುವವರೇ ಹೆಚ್ಚು. ಅಂತಹದರಲ್ಲಿ ಬಡ ರೈತನ ಮಗನೊಬ್ಬ 6 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 12 ಸರ್ಕಾರಿ ಹುದ್ದೆಗಳಿಗೆ ಆಯ್ಕೆ ಆಗಿದ್ದಾರೆ ಎಂದರೆ ನೀವು ನಂಬಲೇಬೇಕು. ಶ್ರದ್ಧೆ, ಪರಿಶ್ರಮ ಮತ್ತು ಪ್ರತಿಭೆ ಇನ್ನೊಂದು ಹೆಸರೇ ಐಪಿಎಸ್ ಅಧಿಕಾರಿ ಪ್ರೇಮ್ ಸುಖ್ ದೇಲು.

First published:

  • 18

    UPSC Success Story: ಅಬ್ಬಬ್ಬಾ, 6 ವರ್ಷಗಳಲ್ಲಿ 12 ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ; ರೈತನ ಮಗನ ಸಾಧನೆ ಇದು

    ಈ ಅಪರೂಪದ ಸಾಧಕ ಒಂದರ ಹಿಂದೆ ಒಂದರಂತೆ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ನಿವಾಸಿ ಐಪಿಎಸ್ ಪ್ರೇಮ್ ಸುಖ್ ದೇಲು ಒಂದರ ನಂತರ ಒಂದರಂತೆ 12 ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಾರೆ. ಕಾನ್ಸ್ ಟೇಬಲ್ ಹುದ್ದೆಯಿಂದ ಹಿಡಿದು ತಹಸೀಲ್ದಾರ್ ಹುದ್ದೆವರೆಗೆ ಒಟ್ಟು 12 ಹುದ್ದೆಗಳಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

    MORE
    GALLERIES

  • 28

    UPSC Success Story: ಅಬ್ಬಬ್ಬಾ, 6 ವರ್ಷಗಳಲ್ಲಿ 12 ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ; ರೈತನ ಮಗನ ಸಾಧನೆ ಇದು

    ಕೊನೆಗೆ UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಹಾಜರಾಗುವ ಮೂಲಕ ತಮ್ಮ ವಿಜಯಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಈಗ ಐಪಿಎಸ್ ಅಧಿಕಾರಿಯಾಗಿದ್ದಾರೆ.

    MORE
    GALLERIES

  • 38

    UPSC Success Story: ಅಬ್ಬಬ್ಬಾ, 6 ವರ್ಷಗಳಲ್ಲಿ 12 ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ; ರೈತನ ಮಗನ ಸಾಧನೆ ಇದು

    ಪ್ರೇಮ್ ಸುಖ್ ದೇಲು ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ಎತ್ತಿನ ಬಂಡಿಯನ್ನು ಓಡಿಸುವ ಮೂಲಕ ಸರಕುಗಳನ್ನು ಸಾಗಿಸಿ ಜೀವನ ನಡೆಸುತ್ತಿದ್ದರು. ದೇಲು ಬಾಲ್ಯದಿಂದಲೂ ತನ್ನ ಕುಟುಂಬವನ್ನು ಬಡತನದಿಂದ ಹೊರತರಲು ಬಯಸಿದ್ದರು. ಅದಕ್ಕಾಗಿಯೇ ಅವರ ಸಂಪೂರ್ಣ ಗಮನವು ಅಧ್ಯಯನದ ಮೇಲಿತ್ತು.

    MORE
    GALLERIES

  • 48

    UPSC Success Story: ಅಬ್ಬಬ್ಬಾ, 6 ವರ್ಷಗಳಲ್ಲಿ 12 ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ; ರೈತನ ಮಗನ ಸಾಧನೆ ಇದು

    ಗ್ರಾಮದ ಸರ್ಕಾರಿ ಶಾಲೆಯಲ್ಲೇ ಪ್ರೇಮ್ ಅವರು 10ನೇ ತರಗತಿವರೆಗೆ ಓದಿದ್ದಾರೆ. ಬಿಕಾನೇರ್ ನ ಸರ್ಕಾರಿ ಡುಂಗಾರ್ ಕಾಲೇಜಿನಲ್ಲಿ ಹೆಚ್ಚಿನ ಶಿಕ್ಷಣ ಪಡೆದರು. ಪ್ರೇಮ್ಸುಖ್ ದೇಲು ಅವರು ಇತಿಹಾಸದಿಂದ ಎಂಎ ಮಾಡಿದ್ದಾರೆ. ಇದರಲ್ಲಿ ಅವರು ಚಿನ್ನದ ಪದಕ ವಿಜೇತರಾಗಿದ್ದರು.

    MORE
    GALLERIES

  • 58

    UPSC Success Story: ಅಬ್ಬಬ್ಬಾ, 6 ವರ್ಷಗಳಲ್ಲಿ 12 ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ; ರೈತನ ಮಗನ ಸಾಧನೆ ಇದು

    ಪಿಜಿ ನಂತರ ಅವರು ಇತಿಹಾಸದಲ್ಲಿ ಯುಜಿಸಿ ನೆಟ್-ಜೆಆರ್ ಎಫ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. 2010ರಲ್ಲಿ ಪದವಿ ಮುಗಿಸಿದ ನಂತರವೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು. ಐಪಿಎಸ್ ಪ್ರೇಮ್ಸುಖ್ ದೇಲುಗೆ ಮೊದಲು ಪಟ್ವಾರಿ ಕೆಲಸ (ಜಮೀನಿನ ಮಾಲೀಕತ್ವದ ಬಗ್ಗೆ ದಾಖಲೆಗಳನ್ನು ಇಡುವ ಸರ್ಕಾರಿ ಅಧಿಕಾರಿ) ಸಿಕ್ಕಿತು.

    MORE
    GALLERIES

  • 68

    UPSC Success Story: ಅಬ್ಬಬ್ಬಾ, 6 ವರ್ಷಗಳಲ್ಲಿ 12 ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ; ರೈತನ ಮಗನ ಸಾಧನೆ ಇದು

    ನಂತರ, ರಾಜಸ್ಥಾನ ಗ್ರಾಮಸೇವಕ ಪರೀಕ್ಷೆಯಲ್ಲಿ ಎರಡನೇ ಸ್ಥಾನವನ್ನು ಪಡೆದರು. ರಾಜಸ್ಥಾನ ಸಹಾಯಕ ಜೈಲರ್ ನೇಮಕಾತಿ ಪರೀಕ್ಷೆಯಲ್ಲಿ ಟಾಪರ್ ಆದರು. ಜೈಲರ್ ಹುದ್ದೆಗೆ ಬರುವ ಮೊದಲೇ ಅವರು ರಾಜಸ್ಥಾನ ಪೊಲೀಸ್ನಲ್ಲಿ ಸಬ್ ಇನ್ಸ್ಪೆಕ್ಟರ್ ಆದರು. ಅಷ್ಟೊತ್ತಿಗಾಗಲೇ ಯುಜಿಸಿ ನೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬಿ.ಎಡ್ ಕೂಡ ಮಾಡಿದ್ದರು.

    MORE
    GALLERIES

  • 78

    UPSC Success Story: ಅಬ್ಬಬ್ಬಾ, 6 ವರ್ಷಗಳಲ್ಲಿ 12 ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ; ರೈತನ ಮಗನ ಸಾಧನೆ ಇದು

    ಆಗ ಕಾಲೇಜಿನಲ್ಲಿ ಉಪನ್ಯಾಸಕರ ಕೆಲಸ ಸಿಕ್ಕಿತು. ಇದಾದ ನಂತರ ಅವರು UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ನೀಡಲು ನಿರ್ಧರಿಸಿದರು. ಇದರ ನಂತರ, ಅವರು ರಾಜಸ್ಥಾನ ಪಿಸಿಎಸ್ ಪರೀಕ್ಷೆಯ ಮೂಲಕ ತಹಸೀಲ್ದಾರ್ ಹುದ್ದೆಗೆ ಆಯ್ಕೆಯಾದರು. ತಹಸೀಲ್ದಾರ್ ನಂತಹ ಜವಾಬ್ದಾರಿಯುತ ಹುದ್ದೆಯನ್ನು ಹೊಂದಿದ್ದರೂ ಅವರು ಐಪಿಎಸ್ ಆಗುವ ಕನಸನ್ನು ಬಿಡಲಿಲ್ಲ.

    MORE
    GALLERIES

  • 88

    UPSC Success Story: ಅಬ್ಬಬ್ಬಾ, 6 ವರ್ಷಗಳಲ್ಲಿ 12 ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ; ರೈತನ ಮಗನ ಸಾಧನೆ ಇದು

    ಆಫೀಸ್ ಡ್ಯೂಟಿ ಮುಗಿದ ಮೇಲೆ ಓದುತ್ತಲೇ ಇದ್ದರು. ಅಂತಿಮವಾಗಿ, 2015 ರಲ್ಲಿ, ಎರಡನೇ ಪ್ರಯತ್ನದಲ್ಲಿ, ಅವರು UPSC ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವ ಮೂಲಕ ಐಪಿಎಸ್ ಆದರು. ಪ್ರೇಮ್ಸುಖ್ ದೇಲು ಅವರು ಅಖಿಲ ಭಾರತ ಮಟ್ಟದಲ್ಲಿ 170ನೇ ರ್ಯಾಂಕ್ ಪಡೆದಿದ್ದಾರೆ. ಅವರನ್ನು ಮೊದಲು ಗುಜರಾತ್ ನ ಅಮ್ರೇಲಿ ಜಿಲ್ಲೆಯಲ್ಲಿ ಎಸಿಪಿ ಹುದ್ದೆಗೆ ಪೋಸ್ಟಿಂಗ್ ಮಾಡಲಾಗಿತ್ತು.

    MORE
    GALLERIES