ಯುಪಿಎಸ್ ಸಿ ತಯಾರಿಗೆ ಎಷ್ಟು ಗಂಟೆ ಓದಬೇಕು ಎಂಬ ಪ್ರಶ್ನೆ ಉತ್ತರಿಸಿರುವ ಐಪಿಎಸ್ ತೃಪ್ತಿ ಭಟ್, ನಾನು ಕೆಲಸದ ಜೊತೆಗೆ ದಿನಕ್ಕೆ ನಾಲ್ಕು ಗಂಟೆ ಓದುತ್ತಿದ್ದೆ. ರಜಾ ದಿನಗಳಲ್ಲಿ ಏಳೆಂಟು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಅಭ್ಯರ್ಥಿಗಳು 6ರಿಂದ 8 ಗಂಟೆಗಳ ಕಾಲ ಅಧ್ಯಯನ ಮಾಡಿದರೆ ಸಾಕು. ಆದರೆ ಈ ಸಮಯದಲ್ಲಿ ನೀವು ನಿಮ್ಮ 100% ಏಕಾಗ್ರತೆಯನ್ನು ನೀಡಬೇಕು ಎಂದಿದ್ದಾರೆ.