ಐಪಿಎಸ್ ಮನೋಜ್ ಕುಮಾರ್ ಶರ್ಮಾ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಯಾಗಿದ್ದರು. ಹಿಂದಿ ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ 12ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು. 9 ಮತ್ತು 10ನೇ ತರಗತಿಯಲ್ಲಿ ಜಸ್ಟ್ ಪಾಸ್ ಆಗಿದ್ದರು. ಬಾಲ್ಯದಿಂದಲೂ ಓದಿನ ವೈಫಲ್ಯಗಳನ್ನು ನೋಡಿದ್ದರು. ಇದರ ಹೊರತಾಗಿಯೂ ಮನೋಜ್ ಎಂದಿಗೂ ಛಲ ಬಿಡಲಿಲ್ಲ.