ಇಶಾ ಅವರ ಎಲ್ಲಾ ಸಹೋದರಿಯರು ಅತ್ಯಂತ ಪ್ರತಿಷ್ಠಿತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹಿರಿಯ ಸಹೋದರಿ IFS ಅಧಿಕಾರಿಯಾಗಿದ್ದಾರೆ, ಎರಡನೆಯವರು HR ವೃತ್ತಿಯಲ್ಲಿದ್ದಾರೆ ಮೂರನೆಯವರು ಭಾರತೀಯ ವಾಯುಪಡೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿದ್ದಾರೆ. ಇಶಾ ಪೊಲೀಸ್ ಸೇವೆಗೆ ಸೇರಲು ಬಯಸಿರಲಿಲ್ಲ. ಯಾವುದಾದರೂ ಸರ್ಕಾರಿ ಕೆಲಸ ಸಿಗಲಿ ಎಂದು ತಯಾರಿ ನಡೆಸಿದ್ದರು. ಐಪಿಎಸ್ ಅನ್ನು ಕೊನೆಯ ಆದ್ಯತೆ ಆಗಿ ಇರಿಸಿದ್ದರು.
ಇಶಾ ಅವರ ಅದ್ಭುತ ಸಾಹಸಗಳ ಸುದ್ದಿ ಸಿನಿಮಾ ನಿರ್ದೇಶಕ ಪ್ರಕಾಶ್ ಝಾ ಅವರಿಗೆ ತಲುಪಿತ್ತು. ಅವರು ಐಪಿಎಸ್ ಇಶಾ ಪಂತ್ ಅವರನ್ನು ಭೇಟಿ ಮಾಡಲು ಜಬಲ್ಪುರಕ್ಕೆ ಹೋಗಿದ್ದರು. ಝಾ ಅವರು ಇಶಾ ಅವರೊಂದಿಗೆ 4 ಗಂಟೆಗಳ ಕಾಲ ಇದ್ದರು. ಅವರ ಮೆಥಡಾಲಜಿಯಿಂದ ಹಿಡಿದು ಹಾವಭಾವದವರೆಗೆ ಎಲ್ಲವನ್ನೂ ರೆಕಾರ್ಡ್ ಮಾಡಿ ಮುಂಬೈಗೆ ಹೋದರು. ಪ್ರಿಯಾಂಕಾ ಚೋಪ್ರಾ ಈ ರೆಕಾರ್ಡಿಂಗ್ ಮೂಲಕ ‘ಜೈ ಗಂಗಾಜಲ್’ ಸಿನಿಮಾಗೆ ಸಿದ್ಧರಾದರು.