ಐಪಿಎಸ್ ಇಲ್ಮಾ ಅಫ್ರೋಜ್ ಅವರ ಜೀವನವು ಹೋರಾಟಗಳಿಂದ ತುಂಬಿದೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಆಗ ಮನೆ, ಹೊಲ, ಮಕ್ಕಳ ಜವಾಬ್ದಾರಿ ಅಮ್ಮನ ಮೇಲೆ ಬಿತ್ತು. ಅಮ್ಮನ ಜೊತೆ ಕಷ್ಟಗಳಿಗೆ ಹೆಗಲು ಕೊಟ್ಟವರು ಈ ಇಲ್ಮಾ. ಎಲ್ಲಾ ಕಷ್ಟಗಳ ನಡುವೆ, ಅವರು ತಮ್ಮ ಅಧ್ಯಯನವನ್ನು ಮುಂದುವರೆಸಿದರು. ಇಂದು ಲಕ್ಷಾಂತರ ಮಂದಿ ಕನಸು ಕಾಣುವ UPSC ಪರೀಕ್ಷೆಯಲ್ಲಿ ಯಶಸ್ವಿಯಾಗಿ, ಐಪಿಎಸ್ ಅಧಿಕಾರಿಯಾಗಿದ್ದಾರೆ.
ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸ್ಕಾಲರ್ ಶಿಪ್ ಸಿಕ್ಕರೂ ಉಳಿದ ಖರ್ಚಿಗೆ ಅಲ್ಲಿಯೇ ಮಕ್ಕಳಿಗೆ ಟ್ಯೂಷನ್ ನೀಡುವ ಮೂಲಕ ಹಣ ಗಳಿಸುತ್ತಿದ್ದರು. ಈ ಸಮಯದಲ್ಲಿ ನಿಮ್ಮ ಮಗಳು ವಿದೇಶಕ್ಕೆ ಹೋಗಿದ್ದಾಳೆ. ಅಲ್ಲಿಯೇ ಇರುತ್ತಾರೆ ಮತ್ತೆ ಮರಳುವುದಿಲ್ಲ ಎಂದು ತಾಯಿಗೆ ನೆರೆಹೊರೆಯವರು ಹೇಳುತ್ತಿದ್ದರು. ಆದರೆ ಅವರ ಮಾತನ್ನು ಇಲ್ಮಾ ಸುಳ್ಳಾಗಿಸಿ ವಿದೇಶದಿಂದ ಮರಳಿ ದೇಶಕ್ಕಾಗಿ ದುಡಿಯುತ್ತಿದ್ದಾರೆ.