UPSC Success Story: 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಎನ್​​ಕೌಂಟರ್​; IITಯ ಇಂಜಿನಿಯರ್ ಈಗ ಖಡಕ್ ಐಪಿಎಸ್ ಅಧಿಕಾರಿ

IPS amitabh yash story: ಯುಪಿಎಸ್ ಸಿ ಸಾಧಕರ ಸರಣಿಯ ಇಂದಿನ ಅತಿಥಿ ಖಡಕ್ ಪೊಲೀಸ್ ಆಫೀಸರ್, ಎನ್ ಕೌಂಟರ್ ಸ್ಪೆಷಲಿಸ್ಟ್ ಐಪಿಎಸ್ ಅಮಿತಾಬ್ ಯಶ್. ಕೇವಲ 5 ವರ್ಷಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ದುಷ್ಕರ್ಮಿಗಳನ್ನು ಎನ್ ಕೌಂಟರ್ ಮಾಡುವ ಮೂಲಕ ಅಮಿತಾಬ್ ಯಶ್ ಖ್ಯಾತಿಯನ್ನು ಗಳಿಸಿದ್ದಾರೆ. ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.

First published:

  • 17

    UPSC Success Story: 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಎನ್​​ಕೌಂಟರ್​; IITಯ ಇಂಜಿನಿಯರ್ ಈಗ ಖಡಕ್ ಐಪಿಎಸ್ ಅಧಿಕಾರಿ

    ಬಿಹಾರ ಮೂಲದ ಅಮಿತಾಬ್ ಯಶ್ ಪ್ರಸ್ತುತ ಯುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ಅಮಿತಾಬ್ ಯಶ್ ಸೇರಿದಂತೆ 8 ಮಂದಿ ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆಯೊಂದಿಗೆ ಬಡ್ತಿ ನೀಡಲಾಗಿತ್ತು. ಐಜಿ ಹುದ್ದೆಯಿಂದ ಅಮಿತಾಬ್ ಯಶ್ ಎಸ್ ಟಿಎಫ್ ಮುಖ್ಯಸ್ಥರಾದರು.

    MORE
    GALLERIES

  • 27

    UPSC Success Story: 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಎನ್​​ಕೌಂಟರ್​; IITಯ ಇಂಜಿನಿಯರ್ ಈಗ ಖಡಕ್ ಐಪಿಎಸ್ ಅಧಿಕಾರಿ

    ಇತ್ತೀಚಿಗಿನ ದಿನಗಳಲ್ಲಿ ಅವರ ಶೌರ್ಯದ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ. ಪ್ರಯಾಗ್ ರಾಜ್ ನಲ್ಲಿ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಕ್ರಿಮಿನಲ್ ಗಳಲ್ಲಿ ಒಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಈ ಎನ್ ಕೌಂಟರ್ ನಲ್ಲಿ ಎಸ್ ಟಿಎಫ್ ಎಡಿಜಿ ಅಮಿತಾಬ್ ಯಶ್ ಅವರ ಕೊಡುಗೆಯೂ ಇದೆ.

    MORE
    GALLERIES

  • 37

    UPSC Success Story: 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಎನ್​​ಕೌಂಟರ್​; IITಯ ಇಂಜಿನಿಯರ್ ಈಗ ಖಡಕ್ ಐಪಿಎಸ್ ಅಧಿಕಾರಿ

    ಕ್ರಿಮಿನಲ್ ಗಳಲ್ಲಿ ಭಯ ಹುಟ್ಟಿಸಿರುವ ಐಪಿಎಸ್ ಅಮಿತಾಬ್ ಯಶ್ ಬಾಲ್ಯದಿಂದಲೂ ಪೊಲೀಸ್ ಠಾಣೆಗಳನ್ನು ಕಂಡವರು. ಅವರ ತಂದೆ ರಾಮ್ ಯಶ್ ಕೂಡ ಪೊಲೀಸ್ ಕೆಲಸ ಮಾಡುತ್ತಿದ್ದರು. ಅಮಿತಾಬ್ ಬಿಹಾರದ ಭೋಜ್ ಪುರ ಜಿಲ್ಲೆಯಲ್ಲಿ ಜನಿಸಿದ್ದಾರೆ. ಅವರು ಪಾಟ್ನಾದಲ್ಲಿ ತಮ್ಮ ಅಧ್ಯಯನವನ್ನು ಮಾಡಿದರು.

    MORE
    GALLERIES

  • 47

    UPSC Success Story: 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಎನ್​​ಕೌಂಟರ್​; IITಯ ಇಂಜಿನಿಯರ್ ಈಗ ಖಡಕ್ ಐಪಿಎಸ್ ಅಧಿಕಾರಿ

    ಅಮಿತಾಬ್ ಯಶ್ ತಮ್ಮ ಪದವಿಯನ್ನು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಮಾಡಿದ್ದಾರೆ. ಅವರು ಐಐಟಿ ಕಾನ್ಪುರದಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಯುಪಿ ಕೇಡರ್ ನ 1996 ಬ್ಯಾಚ್ ನ ಐಪಿಎಸ್ ಅಧಿಕಾರಿಯಾದರು.

    MORE
    GALLERIES

  • 57

    UPSC Success Story: 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಎನ್​​ಕೌಂಟರ್​; IITಯ ಇಂಜಿನಿಯರ್ ಈಗ ಖಡಕ್ ಐಪಿಎಸ್ ಅಧಿಕಾರಿ

    ವಿಶೇಷ ಕಾರ್ಯಪಡೆ ಅಂದರೆ ಎಸ್ ಟಿಎಫ್ ನ ಮುಖ್ಯಸ್ಥರಾಗಿರುವ ಅಮಿತಾಬ್ ಯಶ್ ಶೈಲಿಯು ಅವರನ್ನು ಎಲ್ಲರಿಗಿಂತ ಭಿನ್ನವಾಗಿಸುತ್ತದೆ ಎಂದು ಹೇಳಬಹುದು. ಸದ್ದುಗದ್ದಲವಿಲ್ಲದೆ ಕೆಲಸ ಮಾಡುವ ಇವರ ದಾರಿಗೆ ಅಡ್ಡ ಬರುವ ದುಷ್ಕರ್ಮಿಗಳನ್ನು ಎನ್ ಕೌಂಟರ್ ಮಾಡುತ್ತಾರೆ.

    MORE
    GALLERIES

  • 67

    UPSC Success Story: 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಎನ್​​ಕೌಂಟರ್​; IITಯ ಇಂಜಿನಿಯರ್ ಈಗ ಖಡಕ್ ಐಪಿಎಸ್ ಅಧಿಕಾರಿ

    ಐಜಿ ಹುದ್ದೆಯಲ್ಲಿದ್ದಾಗ ಅಮಿತಾಬ್ ನೇತೃತ್ವದಲ್ಲಿ ವಿಕಾಸ್ ದುಬೆ ಎನ್ ಕೌಂಟರ್ ನಡೆದಿತ್ತು. ನಂತರ ಆತನ ಸಹಚರರು ಎಲಿಮಿನೇಟ್, ಚಂಬಲ್ ಕಣಿವೆಯಲ್ಲಿ ನಿರ್ಭಯ್ ಗ್ಯಾಂಗ್ ನಿರ್ಮೂಲನೆ, ದಾದುವಾ ಗ್ಯಾಂಗ್ ಎನ್ಕೌಂಟರ್, ಬೈಕೇರು ಘಟನೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

    MORE
    GALLERIES

  • 77

    UPSC Success Story: 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಎನ್​​ಕೌಂಟರ್​; IITಯ ಇಂಜಿನಿಯರ್ ಈಗ ಖಡಕ್ ಐಪಿಎಸ್ ಅಧಿಕಾರಿ

    ಮಾಧ್ಯಮಗಳ ವರದಿಗಳ ಪ್ರಕಾರ ಅಮಿತಾಬ್ ಅವರು 50ಕ್ಕೂ ಹೆಚ್ಚು ಎನ್ ಕೌಂಟರ್ಗಳನ್ನು ಮಾಡಿದ್ದಾರಂತೆ. 2017 ರಿಂದ 2023ರ ಫೆಬ್ರವರಿ 27 ರವರೆಗೆ ಅಮಿತಾಬ್ ಯಶ್ ಅವರ ಮಾರ್ಗದರ್ಶನದಲ್ಲಿ ನಿರ್ಮೂಲನೆಯಾದ ಅಪರಾಧಿಗಳ ಸಂಖ್ಯೆ 50ಕ್ಕೂ ಹೆಚ್ಚು ಎನ್ನಲಾಗುತ್ತೆ.

    MORE
    GALLERIES