ಕಾಲೇಜು ಮುಗಿದ ನಂತರ, ಅಭಿಷೇಕ್ ಉತ್ತಮ ಪ್ಯಾಕೇಜ್ ನೊಂದಿಗೆ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಕ್ಕೆ ಆಯ್ಕೆಯಾದರು. ಹೈದರಾಬಾದ್ ನಗರದಲ್ಲಿ ಕೆಲಸ ಮಾಡಲು ಆರಂಭಿಸಿದರು. MNC ಉದ್ಯೋಗದಲ್ಲಿ, ಪಾಶ್ಚಿಮಾತ್ಯ ದೇಶಗಳ ಸಮಯವನ್ನು ಅನುಸರಿಸಬೇಕಾಗಿತ್ತು. ಅರ್ಥಾತ್ ಹಗಲು ನಿದ್ದೆ ಮಾಡಿ ಇಡೀ ರಾತ್ರಿ ಕೆಲಸ ಮಾಡಬೇಕಿತ್ತು. ಇದರಿಂದ ಅಭಿಷೇಕ್ ದೈಹಿಕವಾಗಿ, ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು.
ಐಪಿಎಸ್ ಅಭಿಷೇಕ್ ಅವರ ಜೀವನದಲ್ಲಿ ನಡೆದ ಎರಡು ಘಟನೆಗಳು ಕೂಡ ಅವರನ್ನು ಸಾರ್ವಜನಿಕ ಸೇವೆಗೆ ಸೇರಲು ಪ್ರೇರೇಪಿಸಿತು. ಮೊದಲ ಘಟನೆ ಬೆಂಗಳೂರಿನದ್ದು. ಬಸ್ಸಿನಲ್ಲಿ ಅವರ ಪರ್ಸ್ ಕದ್ದಿದ್ದು, ಪೊಲೀಸ್ ಕಂಪ್ಲೇಂಟ್ ಕೊಡುವಾಗ ಆದ ಅನುಭವ. ಅದೇ ರೀತಿ ಮುಖರ್ಜಿ ನಗರದಲ್ಲಿರುವಾಗ ಅವರ ಕೊಠಡಿಯಿಂದ ಅವರ ಪರ್ಸ್, ಮೊಬೈಲ್ ಮತ್ತು ಲ್ಯಾಪ್ ಟಾಪ್ ಅನ್ನು ಕದ್ದೊಯ್ದಿದ್ದರು. ಈ ಘಟನೆಯಲ್ಲೂ ಎಫ್ ಐಆರ್ ದಾಖಲಿಸುವುದು ದೊಡ್ಡ ಹೋರಾಟವೇ ಅನಿಸಿತು. ಆದರಿಂದ ಅವರು ಪೊಲೀಸ್ ಇಲಾಖೆಗೆ ಸೇರಬೇಕೆಂದು ಬಯಸಿದರು. (ಸಾಂದರ್ಭಿಕ ಚಿತ್ರ)