ವಂದನಾ ಉತ್ತರ ಪ್ರದೇಶದ ಸಹರಾನ್ ಪುರ ಜಿಲ್ಲೆಯ ನಸ್ರುಲ್ಲಗಢ ಎಂಬ ಹಳ್ಳಿಯಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ವಂದನಾ ಹುಟ್ಟಿನಿಂದಲೂ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರು. ಕುಟುಂಬದಲ್ಲಿ ಹೆಣ್ಣು ಮಗಳಾದ ವಂದನಾ ಓದಿನ ಬಗ್ಗೆ ತಕರಾರು ಹೊಂದಿದ್ದರು. ಆದರೆ ವಂದನಾ ಅವರ ತಂದೆ ಮಾತ್ರ ಮಗಳ ಓದಿನ ಪರ ನಿಂತರು. ತಮ್ಮ ಮಗಳನ್ನು ಮೊರಾದಾಬಾದ್ ನ ಗುರುಕುಲದಲ್ಲಿ ಓದಲು ಕಳುಹಿಸಿದರು.
2012 ರ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 8 ನೇ ರ್ಯಾಂಕ್ ಗಳಿಸುವ ಮೂಲಕ IAS ಟಾಪರ್ಗಳಲ್ಲಿ ಒಬ್ಬರಾದ ವಂದವಾ, IAS ಪರೀಕ್ಷೆಯಲ್ಲಿ ಕೇವಲ ಇಂಗ್ಲಿಷ್ ಮಾಧ್ಯಮದ ಅಭ್ಯರ್ಥಿಗಳು ಮಾತ್ರ ಉತ್ತಮ ಸಾಧನೆ ಮಾಡಬಹುದು ಎಂಬ ಅನಿಸಿಕೆಯನ್ನು ಸುಳ್ಳಾಗಿಸಿದರು. ಯಾವುದೇ ಕೋಚಿಂಗ್ಗೆ ಹೋಗದೆ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಕೂಡ ಆಕೆಯ ಯಶಸ್ಸಿನಲ್ಲಿ ದೊಡ್ಡ ಸಂಗತಿ. ವಂದನಾ ಈಗ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಡಿಎಂ ಆಗಿದ್ದಾರೆ. (ಪ್ರಾತಿನಿಧಿಕ ಚಿತ್ರ)