UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೊದಲ ಪ್ರಯತ್ನದಲ್ಲೇ IAS ಆದ ಸೌಮ್ಯ ಶರ್ಮಾ

IAS Saumya Sharma Success Story: ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸುಲಭದ ಮಾತಲ್ಲ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ. ಅವರಲ್ಲಿ ಕೆಲವೇ ಕೆಲವರು ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ತೇರ್ಗಡೆ ಆಗತ್ತಾರೆ. ಅದರಲ್ಲೂ ಮೊದಲ ಪ್ರಯತ್ನದಲ್ಲೇ ಟಾಪ್ ಹತ್ತರೊಳಗೆ ರ್ಯಾಂಕ್ ಬರುವುದು ನಿಜಕ್ಕೂ ಸವಾಲಿನದ್ದು.

First published:

  • 17

    UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೊದಲ ಪ್ರಯತ್ನದಲ್ಲೇ IAS ಆದ ಸೌಮ್ಯ ಶರ್ಮಾ

    ಯುಪಿಎಸ್ ಸಿ ಸಾಧಕರ ಸರಣಿಯ ನಮ್ಮ ಇಂದಿನ ಅಥಿತಿ ಐಎಎಸ್ ಸೌಮ್ಯ ಶರ್ಮಾ ಅಂತಹ ಅಪರೂಪದ ಸಾಧನೆ ಮಾಡಿದ್ದಾರೆ. ಯುಪಿಎಸ್ ಸಿ ಪರೀಕ್ಷೆಗಾಗಿ ಯಾವುದೇ ಕೋಚಿಂಗ್ ಪಡೆಯದೇ ಅಖಿಲ ಭಾರತ ಮಟ್ಟದಲ್ಲಿ 9ನೇ ರ್ಯಾಂಕ್ ಗಳಿಸಿದ್ದಾರೆ. ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.

    MORE
    GALLERIES

  • 27

    UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೊದಲ ಪ್ರಯತ್ನದಲ್ಲೇ IAS ಆದ ಸೌಮ್ಯ ಶರ್ಮಾ

    ದೆಹಲಿಯ ನಿವಾಸಿ ಸೌಮ್ಯ ಶರ್ಮಾ 16 ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ತನ್ನ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡರು. ವೈದ್ಯಕೀಯ ಸಹಾಯ ಪಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಶ್ರವಣ ಸಾಧನವನ್ನು ಅವಲಂಬಿಸಬೇಕಾಯಿತು. ಆದರೆ ಇದು ಸೌಮ್ಯ ಸಾಧನೆಗೆ ಅಡ್ಡಿ ಬರಲೇ ಇಲ್ಲ.

    MORE
    GALLERIES

  • 37

    UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೊದಲ ಪ್ರಯತ್ನದಲ್ಲೇ IAS ಆದ ಸೌಮ್ಯ ಶರ್ಮಾ

    2017 ರಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಸೌಮ್ಯಗೆ ಕೇವಲ 23 ವರ್ಷ ವಯಸ್ಸಾಗಿತ್ತು. ಯಾವುದೇ ಕೋಚಿಂಗ್ ಸಹಾಯ ಪಡೆಯದೇ ಐಎಎಸ್ ಅಧಿಕಾರಿಯಾದರು. ಪರೀಕ್ಷೆಯ ದಿನದಂದು ಸೌಮ್ಯಾ ವೈರಲ್ ಜ್ವರದಿಂದ ಬಳಲುತ್ತಿದ್ದರು. ಯಾವುದನ್ನೂ ಲೆಕ್ಕಿಸದೆ ಸೌಮ್ಯ ತಮ್ಮ ಗುರಿ ಮುಟ್ಟಿದರು.

    MORE
    GALLERIES

  • 47

    UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೊದಲ ಪ್ರಯತ್ನದಲ್ಲೇ IAS ಆದ ಸೌಮ್ಯ ಶರ್ಮಾ

    UPSC ಗಾಗಿ ತಯಾರಿ ನಡೆಸುವ ಮೊದಲು ಅವರು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ LLB ಪೂರ್ಣಗೊಳಿಸಿದರು. ಅವರು 2017 ರಲ್ಲಿ UPSC ಗೆ ತಯಾರಿ ಆರಂಭಿಸಿದರು. ಅದೇ ವರ್ಷದಲ್ಲಿ ಅವರು ಪ್ರಿಲಿಮ್ಸ್ ಪರೀಕ್ಷೆಗೆ ಹಾಜರಾಗಿದ್ದರು. ಅವರು ಸಾಮಾನ್ಯ ವರ್ಗದ ಅಡಿಯಲ್ಲಿ ಅರ್ಜಿಯನ್ನು ಭರ್ತಿ ಮಾಡಿದ್ದರು, ಅಂಗವಿಕಲ ಕೋಟಾದಡಿ ಮಾಡಲಿಲ್ಲ.

    MORE
    GALLERIES

  • 57

    UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೊದಲ ಪ್ರಯತ್ನದಲ್ಲೇ IAS ಆದ ಸೌಮ್ಯ ಶರ್ಮಾ

    UPSC CSE ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸೌಮ್ಯ ಪ್ರಕಾರ ಸರಿಯಾದ ಯೋಜನೆ, ಕಾರ್ಯತಂತ್ರ ಎರಡು ಪ್ರಮುಖ ಅಂಶಗಳಾಗಿವೆ. ಶ್ರಮದ ಜೊತೆಗೆ ಜಾಣತನವೂ ಬಹಳ ಎಂದು ಸೌಮ್ಯ ಹೇಳುತ್ತಾರೆ.

    MORE
    GALLERIES

  • 67

    UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೊದಲ ಪ್ರಯತ್ನದಲ್ಲೇ IAS ಆದ ಸೌಮ್ಯ ಶರ್ಮಾ

    UPSC ಆಕಾಂಕ್ಷಿಗಳಿಗೆ ಅವರ ಸಲಹೆಯೆಂದರೆ ಬರವಣಿಗೆಯನ್ನು ಅಭ್ಯಾಸ ಮಾಡುವುದರ ಜೊತೆಗೆ ಪತ್ರಿಕೆಗಳನ್ನು ಓದಬೇಕು. ಐಚ್ಛಿಕ ವಿಷಯದ ಮೇಲೆ ಹಿಡಿತ ಸಾಧಿಸಬೇಕು ಎನ್ನುತ್ತಾರೆ.

    MORE
    GALLERIES

  • 77

    UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೊದಲ ಪ್ರಯತ್ನದಲ್ಲೇ IAS ಆದ ಸೌಮ್ಯ ಶರ್ಮಾ

    ಪ್ರಿಲಿಮ್ಸ್ ಜೊತೆಜೊತೆಗೆ ಮುಖ್ಯ ಪರೀಕ್ಷೆಗಳಿಗೂ ಒಟ್ಟಿಗೆ ತಯಾರಿ ಮಾಡಬೇಕು. ಟಾಪರ್ ಗಳ ಸಂದರ್ಶನಗಳನ್ನು ಆಲಿಸಿ ನಂತರ ನಿಮಗೆ ಸೂಕ್ತವಾದ ತಂತ್ರವನ್ನು ಅಳವಡಿಸಿಕೊಳ್ಳಿ ಎಂದು ಸೌಮ್ಯಾ ಅಭ್ಯರ್ಥಿಗಳಿಗೆ ಸಲಹೆ ನೀಡಿದರು. ಸೌಮ್ಯ ಶರ್ಮಾ ಪ್ರಸ್ತುತ ನಾಗ್ಪುರದ ಜಿಲ್ಲಾ ಪರಿಷತ್ ನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    MORE
    GALLERIES