ಐಎಎಸ್ ಸೃಷ್ಟಿ ದೇಶಮುಖ್ 2018ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 5ನೇ ರ್ಯಾಂಕ್ ಪಡೆದಿರುವ ಸೃಷ್ಟಿ, ಮಹಿಳಾ ಅಭ್ಯರ್ಥಿಗಳಲ್ಲಿ ಅಗ್ರ ಸ್ಥಾನಕ್ಕೆ ಪಾತ್ರರಾಗಿದ್ದಾರೆ. ಇವರು ಇಂಜಿನಿಯರಿಂಗ್ ಓದುತ್ತಿರುವಾಗಲೇ UPSC ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಅವರ ಹಿನ್ನೆಲೆ, ಕುಟುಂಬ ಮತ್ತು ಯಶಸ್ಸಿನ ಮಾಹಿತಿ ಇಲ್ಲಿದೆ.
UPSC ಪರೀಕ್ಷೆಗೆ ತಯಾರಿ ನಡೆಸುವಾಗ ನಿಮ್ಮ ಏಕಾಗ್ರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಸೃಷ್ಟಿ ದೇಶಮುಖ್ ಸಲಹೆ ನೀಡುತ್ತಾರೆ. ಮೊದಲ ಪ್ರಯತ್ನವು ತಮ್ಮ ಕೊನೆಯ ಪ್ರಯತ್ನವಾಗಿರಲಿ ಎಂದು ಅವರು ನಿರ್ಧರಿಸಿದ್ದರು. ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ದಿನಪತ್ರಿಕೆ ಓದುತ್ತಿದ್ದರು. ರಾಜ್ಯಸಭಾ ಟಿವಿ ಮತ್ತು ಆನ್ ಲೈನ್ ಸ್ಟಡಿ ಮೆಟೀರಿಯಲ್ ನಿಂದಲೂ ಅವರಿಗೆ ಸಾಕಷ್ಟು ಸಹಾಯ ಸಿಕ್ಕಿತ್ತಂತೆ.
ಐಎಎಸ್ ಸೃಷ್ಟಿ ಜಯಂತ್ ದೇಶಮುಖ್ ಅವರು ತಮ್ಮದೇ ಬ್ಯಾಚ್ ಮೇಟ್ ಕನ್ನಡಿಗ ಐಎಎಸ್ ಡಾ. ನಾಗಾರ್ಜುನ ಬಿ.ಗೌಡ ಅವರೊಂದಿಗೆ ಪ್ರೇಮ ವಿವಾಹವಾಗಿದ್ದಾರೆ. ಸಿವಿಲ್ ಸರ್ವೀಸ್ ಟ್ರೈನಿಂಗ್ ಅಕಾಡೆಮಿ LBSNA ಅಂದರೆ ಲಾಲ್ ಬಹದ್ದೂರ್ ಶಾಸ್ತ್ರಿ ಟ್ರೈನಿಂಗ್ ಅಕಾಡೆಮಿಯಲ್ಲಿ ಇಬ್ಬರು ಭೇಟಿಯಾದರು. 24 ಏಪ್ರಿಲ್ 2022 ರಂದು ವಿವಾಹವಾದರು. ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.