IAS Simi Karan Success Story: ಜೀವನದಲ್ಲಿ ನಡೆಯುವ ಒಂದೊಂದು ಘಟನೆ ಬದುಕಿನ ದಾರಿಯನ್ನೇ ಬಲಿಸಿಬಿಡುತ್ತೆ. ಚೆನ್ನಾಗಿ ಓದಿ ದೊಡ್ಡ ಸಂಬಳದ ಕೆಲಸ ಹಿಡಿಯಬೇಕು ಎಂದು ಎಲ್ಲರೂ ಓಡುತ್ತಿರುವಾಗ ಬಡವರ ಉದ್ಧಾರ ಮಾಡಬೇಕು, ದೇಶ ಸೇವೆ ಮಾಡಬೇಕು ಎಂದು ಯೋಚಿಸುವವರ ಸಂಖ್ಯೆ ಕಡಿಮೆ. ಅಂತಹ ಬೆರಳೆಣಿಯಷ್ಟು ವ್ಯಕ್ತಿಗಳಲ್ಲಿ ಐಎಎಸ್ ಸಿಮಿ ಕರಣ್ ಸಹ ಒಬ್ಬರು. ಅವರ ಸಕ್ಸಸ್ ಸ್ಟೋರಿ ತಿಳಿಯೋಣ ಬನ್ನಿ.
ಐಎಎಸ್ ಸಿಮಿ ಕರಣ್ ಒಡಿಶಾ ನಿವಾಸಿ. ಐಐಟಿಯಲ್ಲಿ ಓದಿದ ನಂತರ ನಾಗರಿಕ ಸೇವೆಗೆ ಸೇರಲು ನಿರ್ಧರಿಸಿದ್ದರು. ಇಂಜಿನಿಯರಿಂಗ್ ಹಿನ್ನೆಲೆ ಹೊಂದಿರುವ ಸಿಮಿ ಕರಣ್ ಸಿವಿಲ್ ಸರ್ವೀಸ್ ಗೆ ಬರಲು ಸ್ಫೂರ್ತಿಯಾದ ಕಥೆ ತುಂಬಾ ಆಸಕ್ತಿದಾಯಕವಾಗಿದೆ.
2/ 7
ಸಿಮಿ ಕರಣ್ ಅವರು ಶಾಲಾ ಶಿಕ್ಷಣವನ್ನು ಭಿಲಾಯಿಯಲ್ಲಿ ಪೂರೈಸಿದ್ದಾರೆ. ಅವರ ತಂದೆ ಭಿಲಾಯ್ ಸ್ಟೀಲ್ ಪ್ಲಾಂಟ್ ನಲ್ಲಿ ಕೆಲಸ ಮಾಡುತ್ತಿದ್ದರು, ತಾಯಿ ಶಿಕ್ಷಕಿಯಾಗಿದ್ದರು. ಸಿಮಿ ಕರಣ್ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು.
3/ 7
ಸಿಮಿ ಅವರು ಬಾಲ್ಯದಿಂದಲೂ ಸರ್ಕಾರಿ ನೌಕರಿ ಪಡೆಯಬೇಕೆಂಬ ಗುರಿಯನ್ನು ಹೊಂದಿರಲಿಲ್ಲ. ಆದರೆ ಅವರ ಜೀವನದಲ್ಲಿ ಆದ ಒಂದು ಘಟನೆ ಅವರನ್ನು ಈ ಗಮ್ಯಸ್ಥಾನಕ್ಕೆ ಕರೆದೊಯ್ಯಿತು.
4/ 7
ಸಿಮಿ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಗಾಗಿ ಐಐಟಿ ಬಾಂಬೆಯಲ್ಲಿ ಪ್ರವೇಶ ಪಡೆದರು. ಅಲ್ಲಿ ಓದುತ್ತಿರುವಾಗಲೇ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ಕಲಿಸುವ ಅವಕಾಶ ಸಿಕ್ಕಿತು. ಅಲ್ಲಿಯೇ ಅವರ ಬದುಕು ಬದಲಾಯಿತು. ತನ್ನ ಗಮ್ಯಸ್ಥಾನ MNC ಅಲ್ಲ, ನಾಗರಿಕ ಸೇವೆ ಎಂದು ನಿರ್ಧರಿಸಿದ್ದರು.
5/ 7
ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳನ್ನು ನೋಡಿ, ಅವರ ನಡುವೆ ಜನರ ಸೇವೆಯಲ್ಲೇ ತನ್ನ ಜೀವನವನ್ನು ಕಳೆಯಬೇಕು ಎಂದು ನಿರ್ಧರಿಸಿದರು. ಇಂಜಿನಿಯರ್ ಆಗುವ ಬದಲು UPSC ಪರೀಕ್ಷೆಗೆ ತಯಾರಿ ಶುರು ಮಾಡಿದರು.
6/ 7
ಐಐಟಿ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ಸಿಮಿ ಕರಣ್ UPSC ಪರೀಕ್ಷೆಯನ್ನು ತೆಗೆದುಕೊಂಡರು. ಪಠ್ಯಕ್ರಮವನ್ನು ಭಾಗಗಳಾಗಿ ವಿಭಜಿಸುವ ಮೂಲಕ ಸೀಮಿತ ಪಠ್ಯ ಸಾಮಗ್ರಿಗಳೊಂದಿಗೆ ತನ್ನ ತಯಾರಿಯನ್ನು ಪ್ರಾರಂಭಿಸಿದರು.
7/ 7
ಸಿಮಿ ಕರಣ್ UPSC CSE 2019 ಪರೀಕ್ಷೆಯಲ್ಲಿ 31 ನೇ ರ್ಯಾಂಕ್ ಗಳಿಸುವ ಮೂಲಕ IAS ಅಧಿಕಾರಿಯಾದರು. UPSC ತರಬೇತಿಯ ಸಮಯದಲ್ಲಿ ಅವರು ಅತ್ಯುತ್ತಮ ತರಬೇತಿ ಅಧಿಕಾರಿ ಎಂದು ಪ್ರಶಸ್ತಿ ಪಡೆದಿದ್ದಾರೆ. ಸಿಮಿ ಕರಣ್ ಪ್ರಸ್ತುತ ದೆಹಲಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.