UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ

IAS Shivangi Goyal Success Story: ಯುಪಿಎಸ್ ಸಿ ಸಾಧಕರ ಸರಣಿಯಲ್ಲಿನ ಇಂದಿನ ಅತಿಥಿ ನಿಜಕ್ಕೂ ಬೆಂಕಿಯಲ್ಲಿ ಅರಳಿದ ಹೂ ಎನ್ನಬಹುದು. ಮುರಿದು ಬಿದ್ದ ಮದುವೆಯ ಮಧ್ಯೆಯೂ ಛಲ ಬಿಡದೇ ಜೀವನದಲ್ಲಿ ಎತ್ತರಕ್ಕೆ ಬೆಳೆದ ಐಎಎಸ್ ಅಧಿಕಾರಿ ಶಿವಂಗಿ ಗೋಯಲ್ ಅವರ ಕಥೆ ಎಂಥವರಿಗೂ ಸ್ಪೂರ್ತಿದಾಯಕ.

First published:

  • 17

    UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ

    ಶಿವಾಂಗಿ ಗೋಯಲ್ ಅವರು ಉತ್ತರ ಪ್ರದೇಶದ ಹಾಪುರ್ ನ ಪಿಲ್ಖುವಾ ಪಟ್ಟಣದ ನಿವಾಸಿ. ಓದಿನಲ್ಲಿ ಚುರುಕಾಗಿದ್ದ ಶಿವಾಂಗಿಯ ಬದುಕು ಮದುವೆಯ ಬಳಿಕ ನರಕವಾಗಿತ್ತು. ಮದುವೆಗೂ ಮುನ್ನ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. ಆದರೆ ಎರಡೂ ಬಾರಿ ವಿಫಲವಾಯಿತು.

    MORE
    GALLERIES

  • 27

    UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ

    ಆದರೆ ಇತ್ತ ವೈವಾಹಿಕ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಮದುವೆಯ ನಂತರ ಪತಿ ಮತ್ತು ಅತ್ತೆ ಅವರನ್ನು ಸಾಕಷ್ಟು ಹಿಂಸಿಸುತ್ತಿದ್ದರು. ನಿತ್ಯ ಪತಿ-ಅತ್ತೆ ಹೊಡೆಯುತ್ತಿದ್ದರು. ಇದರ ಮಧ್ಯೆಯೇ ಶಿವಾಂಗಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗಳು ಹುಟ್ಟಿದ ಮೇಲೆ ದಾಂಪತ್ಯ ಸರಿ ಹೋಗುತ್ತೆ ಎಂದುಕೊಂಡಿದ್ದರು ಶಿವಾಂಗಿ. ಆದರೆ ಅದು ಕೂಡ ಸುಳ್ಳಾಯಿತು.

    MORE
    GALLERIES

  • 37

    UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ

    ಕೊನೆಗೆ ಒಂದು ದಿನ ಕಾಟ ತಾಳಲಾರದೆ ಮಗಳಿನೊಂದಿಗೆ ಶಿವಾಂಗಿ ಅವರು ತವರುಮನೆ ಸೇರಿದರು. 7 ವರ್ಷದ ಮಗಳೊಂದಿಗೆ ಮನೆಗೆ ಬಂದಾಗ ತಂದೆ ಆಸರೆಯಾದರು. ನಿನ್ನ ಕಾಲಿನ ಮೇಲೆ ನಿಲ್ಲಲು ನೀನು ಏನು ಬೇಕಾದರೂ ಮಾಡಬಹುದು ಎಂದು ತಂದೆ ಸಲಹೆ ನೀಡಿದರು.

    MORE
    GALLERIES

  • 47

    UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ

    ಎಲ್ಲಾ ನೋವನ್ನು ನುಂಗಿಕೊಂಡು ಮಗಳಿಗಾಗಿ ಶಿವಾಂಗಿ ಅವರು ಮತ್ತೆ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಈ ಬಾರಿ ಅಂದರೆ 2021ರಲ್ಲಿ ಮೂರನೇ ಪ್ರಯತ್ನದಲ್ಲಿ 177ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು.

    MORE
    GALLERIES

  • 57

    UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ

    UPSC ಪರೀಕ್ಷೆಯ ಫಲಿತಾಂಶ ಬರುವಾಗಲೂ ಶಿವಂಗಿ ಗೋಯಲ್ ಅವರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಆದರೆ ಆಕೆ ಅದ್ಯಾವುದರಿಂದಲೂ ವಿಚಲಿತಳಾಗದೆ ತನ್ನ ಗುರಿ ಮುಟ್ಟಿದ್ದಳು. ಅದರಿಂದ ಆಕೆಯ ಜೀವನವೇ ಬದಲಾಯಿತು.

    MORE
    GALLERIES

  • 67

    UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ

    ಮದುವೆ ಆಗಿ ಹೋಯ್ತು, ಮಕ್ಕಳಿದ್ದಾರೆ ಎಂದು ಕೌಟುಂಬಿಕ ದೌರ್ಜನ್ಯವನ್ನು ಸಹಿಸಿಕೊಂಡು ಬಾಳುವ ಅಗತ್ಯವಿಲ್ಲ ಎಂದು ಶಿವಾಂಗಿ ಸಾಬೀತುಪಡಿಸಿದ್ದಾರೆ. ಎಷ್ಟೇ ಕಷ್ಟ ಇದ್ದರೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.

    MORE
    GALLERIES

  • 77

    UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ

    ಕುಟುಂಬದಲ್ಲಿನ ಸಣ್ಣ-ಪುಟ್ಟ ಸಮಸ್ಯೆಗಳ ಮಧ್ಯೆಯೇ ಕಳೆದು ಹೋಗುವ ಸಾವಿರಾರು ಮಂದಿಗೆ ಶಿವಾಂಗಿ ಸ್ಪೂರ್ತಿಯಾಗಿದ್ದಾರೆ. ಹೆಣ್ಣುಮಕ್ಕಳಿಗೆ ಮದುವೆ ಒಂದೇ ಜೀವನದ ಯಶಸ್ಸು ಅಲ್ಲ, ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವುದು ನಿಜವಾದ ಯಶಸ್ಸು ಎಂದು ಶಿವಾಂಗಿ ಸಲಹೆ ನೀಡುತ್ತಾರೆ.

    MORE
    GALLERIES