ಕೇಂದ್ರ ಲೋಕಸೇವಾ ಆಯೋಗದ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಭೇದಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮದೇ ಆದ ವಿಧಾನವನ್ನು ಪಾಲಿಸುತ್ತಾರೆ. ಹೆಚ್ಚಿನ ಅಭ್ಯರ್ಥಿಗಳು UPSC ಪರೀಕ್ಷೆಗೆ ತರಬೇತಿಯ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಉದಾಹರಣೆಗಳು ನಮ್ಮ ನಡುವೆ ಇವೆ. ಅವರಲ್ಲಿ ಐಎಎಸ್ ಸರ್ಜನಾ ಯಾದವ್ ಕೂಡ ಒಬ್ಬರು.
ಐಎಎಸ್ ಸರ್ಜನಾ ಯಾದವ್ ದೆಹಲಿಯಲ್ಲಿ ಓದಿದ್ದಾರೆ. ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ಸರ್ಜನಾ ಯಾದವ್ ಅವರು TRAI ನಲ್ಲಿ ಸಂಶೋಧನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಉದ್ಯೋಗ ಮಾಡಿಕೊಂಡು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರು 2018 ರಲ್ಲಿ ಕೆಲಸವನ್ನು ತೊರೆದರು.