UPSC Success Story: ಫ್ಯಾಮಿಲಿ ಬ್ಯುಸಿನೆಸ್ ಬಿಟ್ಟು IAS ಆದ ರಿತು ಮಹೇಶ್ವರಿ; ಇವರ ಪತಿ ಕೂಡ ಐಎಎಸ್ ಅಧಿಕಾರಿ

IAS Ritu Maheshwari Success Story: ಯುಪಿಎಸ್ ಸಿ ಸಾಧಕರ ಸರಣಿಯ ಇಂದಿನ ಅತಿಥಿ ಮಹಿಳಾ ಐಎಎಸ್ ಅಧಿಕಾರಿ ರಿತು ಮಹೇಶ್ವರಿ. ಇಂಜಿನಿಯರ್ ಆಗಿ ಇವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿ ಆಗುವ ಮೂಲಕ ಐಎಎಸ್ ಅಧಿಕಾರಿಯಾಗಿದ್ದಾರೆ. ಇತ್ತೀಚೆಗಷ್ಟೇ ನೋಯ್ಡಾದ ಡಿಎಂ ಆಗಿ ನೇಮಕಗೊಂಡ ಇವರ ಸಾಧನೆಯ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.

First published:

  • 17

    UPSC Success Story: ಫ್ಯಾಮಿಲಿ ಬ್ಯುಸಿನೆಸ್ ಬಿಟ್ಟು IAS ಆದ ರಿತು ಮಹೇಶ್ವರಿ; ಇವರ ಪತಿ ಕೂಡ ಐಎಎಸ್ ಅಧಿಕಾರಿ

    ಉತ್ತರ ಪ್ರದೇಶದ ಮಹಿಳಾ ಐಎಎಸ್ ರಿತು ಮಹೇಶ್ವರಿ ಸಾಕಷ್ಟು ಫೇಮಸ್. ಇತ್ತೀಚೆಗೆ ಅವರನ್ನು ನೋಯ್ಡಾದ ಡಿಎಂ ಮಾಡಲಾಗಿದೆ. ರಿತು ಮಹೇಶ್ವರಿ ಪಂಜಾಬ್ ನಲ್ಲಿ ಹುಟ್ಟಿ ಬೆಳೆದವರು. ಬಿ.ಟೆಕ್ ಓದಿದ ಬಳಿಕ ಆ ಕ್ಷೇತ್ರದಲ್ಲೇ ವೃತ್ತಿ ಮಾಡುವುದು ರಿತು ಅವರಿಗೆ ಇಷ್ಟವಿರಲಿಲ್ಲ.

    MORE
    GALLERIES

  • 27

    UPSC Success Story: ಫ್ಯಾಮಿಲಿ ಬ್ಯುಸಿನೆಸ್ ಬಿಟ್ಟು IAS ಆದ ರಿತು ಮಹೇಶ್ವರಿ; ಇವರ ಪತಿ ಕೂಡ ಐಎಎಸ್ ಅಧಿಕಾರಿ

    ಹಾಗಾಗಿ ಅವರು UPSCಗೆ ತಯಾರಿ ಆರಂಭಿಸಿದಳು. ಅಂತಿಮವಾಗಿ ಅವರು UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು. ರಿತು ಮಹೇಶ್ವರಿ ಯುಪಿ ಕೇಡರ್ನ ಪ್ರಸಿದ್ಧ ಐಎಎಸ್ ಅಧಿಕಾರಿ. ಅವರು 14 ಜುಲೈ 1978 ರಂದು ಪಂಜಾಬ್ ನಲ್ಲಿ ಜನಿಸಿದರು. ಫ್ಯಾಮಿಲಿ ಬ್ಯುಸಿನೆಸ್ ಸೇರುವ ಬದಲು ಸರ್ಕಾರಿ ನೌಕರಿಯತ್ತ ಮುಖ ಮಾಡಿದರು.

    MORE
    GALLERIES

  • 37

    UPSC Success Story: ಫ್ಯಾಮಿಲಿ ಬ್ಯುಸಿನೆಸ್ ಬಿಟ್ಟು IAS ಆದ ರಿತು ಮಹೇಶ್ವರಿ; ಇವರ ಪತಿ ಕೂಡ ಐಎಎಸ್ ಅಧಿಕಾರಿ

    ರಿತು ಮಹೇಶ್ವರಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಮಾಡಿದ್ದಾರೆ. ಅವರು 2003 ಬ್ಯಾಚ್ ನ ಐಎಎಸ್ ಅಧಿಕಾರಿ. ಅವರ ಸಾಮರ್ಥ್ಯ ಮತ್ತು ಉತ್ತಮ ಕೆಲಸಕ್ಕಾಗಿ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅವರು ಯುಪಿ ಕೇಡರ್ ನ ಅತ್ಯುತ್ತಮ ಮಹಿಳಾ ಐಎಎಸ್ ಅಧಿಕಾರಿ ಎನಿಸಿಕೊಂಡಿದ್ದಾರೆ.

    MORE
    GALLERIES

  • 47

    UPSC Success Story: ಫ್ಯಾಮಿಲಿ ಬ್ಯುಸಿನೆಸ್ ಬಿಟ್ಟು IAS ಆದ ರಿತು ಮಹೇಶ್ವರಿ; ಇವರ ಪತಿ ಕೂಡ ಐಎಎಸ್ ಅಧಿಕಾರಿ

    ರಿತು ಮಹೇಶ್ವರಿ ಅವರು ಉತ್ತರ ಪ್ರದೇಶದ ಅಮ್ರೋಹಾ, ಗಾಜಿಪುರ, ಶಹಜಹಾನ್ ಪುರ ಮತ್ತು ಗಾಜಿಯಾಬಾದ್ನಲ್ಲಿ ಪ್ರಮುಖ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು ಗಾಜಿಯಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕೆಲಸ ಮಾಡಿದ್ದಾರೆ.

    MORE
    GALLERIES

  • 57

    UPSC Success Story: ಫ್ಯಾಮಿಲಿ ಬ್ಯುಸಿನೆಸ್ ಬಿಟ್ಟು IAS ಆದ ರಿತು ಮಹೇಶ್ವರಿ; ಇವರ ಪತಿ ಕೂಡ ಐಎಎಸ್ ಅಧಿಕಾರಿ

    ಐಎಎಸ್ ರಿತು ಮಹೇಶ್ವರಿ ಅವರ ಪತಿ ಮಯೂರ್ ಮಹೇಶ್ವರಿ ಕೂಡ ಐಎಎಸ್ ಅಧಿಕಾರಿ. ರಿತು ಮಹೇಶ್ವರಿ ಗ್ರೇಟರ್ ನೋಯ್ಡಾ ಪ್ರಾಧಿಕಾರ ಮತ್ತು ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಕೂಡ ಆಗಿದ್ದಾರೆ.

    MORE
    GALLERIES

  • 67

    UPSC Success Story: ಫ್ಯಾಮಿಲಿ ಬ್ಯುಸಿನೆಸ್ ಬಿಟ್ಟು IAS ಆದ ರಿತು ಮಹೇಶ್ವರಿ; ಇವರ ಪತಿ ಕೂಡ ಐಎಎಸ್ ಅಧಿಕಾರಿ

    ರಿತು ಮಹೇಶ್ವರಿ ಅವರು ಪತಿ ಮಯೂರ್ ಮಹೇಶ್ವರಿ ಪ್ರಸ್ತುತ ಉತ್ತರ ಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಯೂರ್ ಮಹೇಶ್ವರಿ ಅವರು ಈ ಹಿಂದೆ ಪ್ರಧಾನ ಮಂತ್ರಿ ಕಚೇರಿಯಲ್ಲಿ ಹಿರಿಯ ಪಾತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

    MORE
    GALLERIES

  • 77

    UPSC Success Story: ಫ್ಯಾಮಿಲಿ ಬ್ಯುಸಿನೆಸ್ ಬಿಟ್ಟು IAS ಆದ ರಿತು ಮಹೇಶ್ವರಿ; ಇವರ ಪತಿ ಕೂಡ ಐಎಎಸ್ ಅಧಿಕಾರಿ

    ಸಾಕಷ್ಟು ಐಎಎಸ್ ದಂಪತಿಗಳ ಮಧ್ಯೆ ರಿತು ಮಹೇಶ್ವರಿ - ಮಯೂರ್ ಮಹೇಶ್ವರಿ ದಂಪತಿ ಕೂಡ ತುಂಬಾನೇ ಫೇಮಸ್. ಇನ್ನು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇವರು ಸ್ಪೂರ್ತಿಯಾಗಿದ್ದಾರೆ.

    MORE
    GALLERIES