Success Story: ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟ ಬಳಿಕವೇ UPSCಯಲ್ಲಿ ಪಾಸ್ ಆಗಿ IAS ಆದ ಪರಿ

IAS Pari Bishnoi Success Story: UPSC ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಭೇದಿಸಲು ಅಭ್ಯರ್ಥಿಗಳು ಹಗಲಿರುಳು ಶ್ರಮಿಸುತ್ತಾರೆ. ಕೆಲವರು ಮೋಜು-ಮಸ್ತಿಯಿಂದ ದೂರ ಉಳಿದು ತಪಸ್ಸಿನಂತೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಈ ಮಾತು ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ನಮ್ಮ ಇಂದಿನ ಅತಿಥಿ ಐಎಎಸ್ ಪರಿ ವಿಷ್ಣೋಯಿ ಸರಿಯಾಗಿ ಹೊಂದುತ್ತದೆ. ಪರಿ ವಿಷ್ಣೋಯಿ ಅವರ ಯಶಸ್ಸಿನ ಹಾದಿಯನ್ನು ತಿಳಿಯೋಣ ಬನ್ನಿ.

First published:

  • 17

    Success Story: ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟ ಬಳಿಕವೇ UPSCಯಲ್ಲಿ ಪಾಸ್ ಆಗಿ IAS ಆದ ಪರಿ

    ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಕಾಕ್ರಾ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಪರಿ ಬಿಷ್ಣೋಯ್. 2019 ರ ಬ್ಯಾಚ್ ನ ಐಎಎಸ್ ಅಧಿಕಾರಿ. ಪರಿ ಬಿಷ್ಣೋಯ್ ಕೇವಲ 24ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾಗುವ ಮೂಲಕ ಮಾದರಿಯಾಗಿದ್ದಾರೆ. ಈ ಹಂತವನ್ನು ತಲುಪಲು ಅವರು ಸಾಕಷ್ಟು ಶ್ರಮ ಹಾಕಿದ್ದಾರೆ.

    MORE
    GALLERIES

  • 27

    Success Story: ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟ ಬಳಿಕವೇ UPSCಯಲ್ಲಿ ಪಾಸ್ ಆಗಿ IAS ಆದ ಪರಿ

    ಪರಿ ವಿಷ್ಣೋಯ್ ಅವರು 1996ರ ಫೆಬ್ರವರಿ 26 ರಂದು ಜನಿಸಿದರು. ಪರಿ ಬಿಷ್ಣೋಯ್ ಅವರ ತಂದೆ ಮಣಿರಾಮ್ ಬಿಷ್ಣೋಯ್ ವೃತ್ತಿಯಲ್ಲಿ ವಕೀಲರು. ಅವರ ತಾಯಿ ಸುಶೀಲಾ ವಿಷ್ಣೋಯ್ ಅಜ್ಮೀರ್ ಜಿಲ್ಲೆಯ ಜಿಆರ್ ಪಿ ಪೊಲೀಸ್ ಅಧಿಕಾರಿಯಾಗಿದ್ದಾರೆ.

    MORE
    GALLERIES

  • 37

    Success Story: ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟ ಬಳಿಕವೇ UPSCಯಲ್ಲಿ ಪಾಸ್ ಆಗಿ IAS ಆದ ಪರಿ

    ಪರಿ ಅವರಿಗೆ ಬಾಲ್ಯದಿಂದಲೂ ಮನೆಯಲ್ಲಿ ಶಿಕ್ಷಣದ ವಾತಾವರಣ ಸಿಕ್ಕಿತು. ಮಾಧ್ಯಮ ವರದಿಗಳ ಪ್ರಕಾರ, ಪರಿ ವಿಷ್ಣೋಯಿ ತನ್ನ ವಿಷ್ಣೋಯ್ ಸಮುದಾಯದ ಮೊದಲ ಮಹಿಳಾ ಐಎಎಸ್ ಅಧಿಕಾರಿ.

    MORE
    GALLERIES

  • 47

    Success Story: ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟ ಬಳಿಕವೇ UPSCಯಲ್ಲಿ ಪಾಸ್ ಆಗಿ IAS ಆದ ಪರಿ

    ಪರಿ ತನ್ನ ಆರಂಭಿಕ ಶಿಕ್ಷಣವನ್ನು ಅಜ್ಮೀರ್ ನ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ಮಾಡಿದರು. 12ನೇ ಕ್ಲಾಸ್ ನಲ್ಲಿದ್ದಾಗಲೇ ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದ್ದರು. ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ UPSC ಗೆ ತಯಾರಿ ಆರಂಭಿಸಿದರು.

    MORE
    GALLERIES

  • 57

    Success Story: ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟ ಬಳಿಕವೇ UPSCಯಲ್ಲಿ ಪಾಸ್ ಆಗಿ IAS ಆದ ಪರಿ

    ಪರಿ ಬಿಷ್ಣೋಯ್ ಅವರು ಅಜ್ಮೀರ್ ನ MDS ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೂರು ಬಾರಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಕಾಣಿಸಿಕೊಂಡಿದ್ದಾಳೆ. ಇದರ ಮಧ್ಯೆಯೇ ಅವರು NET-JRF ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿದ್ದರು.

    MORE
    GALLERIES

  • 67

    Success Story: ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟ ಬಳಿಕವೇ UPSCಯಲ್ಲಿ ಪಾಸ್ ಆಗಿ IAS ಆದ ಪರಿ

    ಯುಪಿಎಸ್ ಸಿ ತಯಾರಿ ಸಂದರ್ಭದಲ್ಲಿ ಪರಿ ಬಿಷ್ಣೋಯ್ ಸೋಷಿಯಲ್ ಮೀಡಿಯಾದಿಂದ ಸಂಪೂರ್ಣವಾಗಿ ದೂರವಾಗಿದ್ದರು. ಮೊಬೈಲ್ ಬಳಕೆಯನ್ನೂ ನಿಲ್ಲಿಸಿದ್ದರು. ಮೊದಲ ಎರಡು ಪ್ರಯತ್ನಗಳಲ್ಲಿ, ಅವರು ಕಡಿಮೆ ಅಂಕಗಳಿಂದ ನಾಗರಿಕ ಸೇವೆಗಳ ಪರೀಕ್ಷೆಯನ್ನು ಭೇದಿಸಲು ವಿಫಲರಾದರು. ಆದರೆ ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿತು.

    MORE
    GALLERIES

  • 77

    Success Story: ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟ ಬಳಿಕವೇ UPSCಯಲ್ಲಿ ಪಾಸ್ ಆಗಿ IAS ಆದ ಪರಿ

    ಪರಿ ಬಿಷ್ಣೋಯ್ ಮೂರನೇ ಪ್ರಯತ್ನದಲ್ಲಿ ಅಖಿಲ ಭಾರತ 30ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾದರು. ಅವರು ಈಗ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಐಎಎಸ್ ಪರಿ ಬಿಷ್ಣೋಯ್ ಪ್ರಸ್ತುತ ಗ್ಯಾಂಗ್ ಟಾಕ್ ನ ಎಸ್ ಡಿಎಂ ಆಗಿದ್ದಾರೆ. ಅವರು ಸಿಕ್ಕಿಂ ಕೇಡರ್ ಪಡೆದಿದ್ದಾರೆ.

    MORE
    GALLERIES