ರಾಜಸ್ಥಾನದ ಬಾರ್ಮರ್ ಜಿಲ್ಲೆಯ ನಿವಾಸಿ ಗಂಗಾ ಸಿಂಗ್ ರಾಜಪುರೋಹಿತ್ 2016ರಲ್ಲಿ UPSC ಪರೀಕ್ಷೆಯಲ್ಲಿ 33 ನೇ ರ್ಯಾಂಕ್ ಗಳಿಸಿದ್ದರು. ಬಿಎಸ್ಸಿ ಮಾಡಿದ ನಂತರ ಐಎಎಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು. ಅವರ ಐಚ್ಛಿಕ ವಿಷಯ ಹಿಂದಿ ಸಾಹಿತ್ಯವಾಗಿತ್ತು. UPSC ಪರೀಕ್ಷೆಯ ತಯಾರಿಯಲ್ಲಿ ಹಲವು ಏರಿಳಿತಗಳಿವೆ. ಅಂತಹ ಪರಿಸ್ಥಿತಿಯಲ್ಲಿ, ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು ಎಂದು ಇವರು ಸಲಹೆ ನೀಡುತ್ತಾರೆ.
Gaurav Singh Sogarwal IAS: ಗೌರವ್ ಸಿಂಗ್ ಸೊಗರ್ವಾಲ್ ರಾಜಸ್ಥಾನದ ಭರತ್ ಪುರ ನಿವಾಸಿ. ರೈತ ಕುಟುಂಬದಲ್ಲಿ ಜನಿಸಿದ ಇವರು 3 ವರ್ಷದವರಾಗಿದ್ದಾಗ ತಾಯಿ ನಿಧನರಾದರು. 14ನೇ ವಯಸ್ಸಿನಲ್ಲಿ ಅವರ ತಂದೆ ನಿಧನರಾದರು. ಪುಣೆಯ ಭಾರತಿ ವಿದ್ಯಾಪೀಠದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಈ ವೇಳೆ ಟ್ಯೂಷನ್ ಕೂಡ ಹೇಳಿಕೊಡುತ್ತಿದ್ದರು. ಮೊದಲ ಮತ್ತು ಎರಡನೇ ಯತ್ನದಲ್ಲಿ ಅನುತ್ತೀರ್ಣರಾದ ಅವರು, 46ನೇ ಯಾಂಕ್ ನೊಂದಿಗೆ ಮೂರನೇ ಸಲ ಪಾಸ್ ಆದರು. ನಾಲ್ಕನೇ ಪ್ರಯತ್ನದಲ್ಲಿ ಬಯಸಿದ್ದಂತೆ ಐಪಿಎಸ್ ಆದರು.
ಅನುರಾಧಾ ಪಾಲ್ ಅವರದ್ದು ತೀರಾ ಸಾಮಾನ್ಯ ಕುಟುಂಬ. ಅವರ ತಂದೆ ಹಾಲು ಮಾರಾಟಗಾರರಾಗಿದ್ದರು. ಜವಾಹರ್ ನವೋದಯ ವಿದ್ಯಾಲಯದಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಉತ್ತರಾಖಂಡದ ಗೋವಿಂದ್ ಬಲ್ಲಭ್ ಪಂತ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಅನುರಾಧಾ ಪಾಲ್ ಅವರು 2012 ರಲ್ಲಿ ಐಎಎಸ್ ಪರೀಕ್ಷೆಯಲ್ಲಿ 451 ನೇ ರ್ಯಾಂಕ್ ಮತ್ತು 2015 ರಲ್ಲಿ 62 ನೇ ರ್ಯಾಂಕ್ ಪಡೆದರು.