ಐಎಎಸ್ ಜುನೈದ್ ಅಹ್ಮದ್ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಪಟ್ಟಣದ ನಿವಾಸಿ. ಶಾಲಾ-ಕಾಲೇಜುಗಳಲ್ಲಿ ಟಾಪರ್ ಆದವರಷ್ಟೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಭಾವಿಸುವವರಿಗೆ ಇವರೇ ಉದಾಹರಣೆ. ಜುನೈದ್ ಅಹ್ಮದ್ ಪದವಿಯವರೆಗೂ ಸಾಧಾರಣ ಅಂಕಗಳನ್ನು ಗಳಿಸುವ ವಿದ್ಯಾರ್ಥಿಯಾಗಿದ್ದರು. ಅವರ ಕಠಿಣ ಪರಿಶ್ರಮ ಮತ್ತು ತಪ್ಪುಗಳಿಂದ ಪಾಠ ಕಲಿತು ಐಎಎಸ್ ಅಧಿಕಾರಿಯಾದರು.