ಐಎಎಸ್ ಹಿಮಾಂಶು ಕೌಶಿಕ್ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅವರ ತಂದೆ ಇಂಜಿನಿಯರ್, ತಾಯಿ ಸಂಸ್ಕೃತ ವಿಷಯದ ಶಿಕ್ಷಕಿ. ಹಿಮಾಂಶು ದೆಹಲಿಯಲ್ಲೇ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಗಾಜಿಯಾಬಾದ್ ನ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಓದಿದರು. ಅವರು ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ತೋರಿರಲಿಲ್ಲ, ಹೀಗಾಗಿ ಎರಡು ಬಾರಿ ಪರೀಕ್ಷೆಗಳನ್ನು ಅನುತೀರ್ಣರಾಗಿದ್ದರು.
ಹಿಮಾಂಶು ಬಿ.ಟೆಕ್ ನಲ್ಲಿ ಶೇ.65 ಅಂಕ ಪಡೆದಿದ್ದರು. ಹಿಮಾಂಶು ಕೌಶಿಕ್ ಪದವಿ ಮುಗಿದ ನಂತರ ಮೂರು ವರ್ಷಗಳ ಕಾಲ ಸಾಫ್ಟ್ ವೇರ್ ಡೆವಲಪರ್ ಆಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಆ ಸಮಯದಲ್ಲಿ ಅವರು ಸಿವಿಲ್ ಸರ್ವೀಸ್ ಗೆ ಹೋಗಲು ನಿರ್ಧರಿಸಿದ್ದರು. ಈ ಬಗ್ಗೆ ಮನೆಯವರು ಹಾಗೂ ಸ್ನೇಹಿತರಿಗೆ ಹೇಳಿದಾಗ ಹೆಚ್ಚಿನವರು ಬೆಂಬಲಿಸಲಿಲ್ಲವಂತೆ. ನಿಮ್ಮ ಕೈಯಲ್ಲಿ ಆಗಲ್ಲ ಅಂತಲೇ ಹೇಳಿದರಂತೆ.