ಗೋವಿಂದ್ ಅವರು 7ನೇ ತರಗತಿಯಲ್ಲಿದ್ದಾಗ ತಾಯಿ ತೀರಿಕೊಂಡರು. ಆಗ ಅವರ ತಂದೆ, ಗೋವಿಂದ್ ಮತ್ತು ಅವರ ಹೆಣ್ಣುಮಕ್ಕಳೊಂದಿಗೆ ಕಾಶಿಯ ಆಲಿಪುರಕ್ಕೆ ಸ್ಥಳಾಂತರಗೊಂಡಿದ್ದರು. ಹಲವು ಬಾರಿ ಗೋವಿಂದ್ ಮತ್ತು ಅವರ ಕುಟುಂಬದವರು ಒಣ ರೊಟ್ಟಿಯನ್ನೇ ತಿಂದು ಬದುಕುತ್ತಿದ್ದರು. ಇಷ್ಟೆಲ್ಲಾ ಆದರೂ ಗೋವಿಂದ್ ತಂದೆ ತನ್ನ ನಾಲ್ಕು ಮಕ್ಕಳ ವಿದ್ಯಾಭ್ಯಾಸಕ್ಕೆ ಕೊರತೆ ಬರದಂತೆ ನೋಡಿಕೊಂಡರು. ಅವರು ತಮ್ಮ ಮೂವರು ಪದವೀಧರ ಹೆಣ್ಣುಮಕ್ಕಳ ಮದುವೆಗಾಗಿ ಉಳಿದ ರಿಕ್ಷಾಗಳನ್ನು ಮಾರಾಟ ಮಾಡಿದರು.
ಗೋವಿಂದ್ ಜೈಸ್ವಾಲ್ ತನ್ನ ಆರಂಭಿಕ ಶಿಕ್ಷಣವನ್ನು ಉಸ್ಮಾನ್ ಪುರದ ಸರ್ಕಾರಿ ಶಾಲೆಯಲ್ಲಿ ಮಾಡಿದರು. ನಂತರ ಅವರು ವಾರಣಾಸಿಯಲ್ಲಿರುವ ಹರಿಶ್ಚಂದ್ರ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಪದವಿ ಪಡೆದರು. 2006ರಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಲು ಗೋವಿಂದ್ ದೆಹಲಿಗೆ ಬಂದಿದ್ದರು. ಇವರಿಗೆ ಹಣ ಕಳುಹಿಸುವ ಸಲುವಾಗಿ ತಂದೆ ತಮ್ಮ ಕಾಲಿಗೆ ಗಾಯವಾಗಿದ್ದರೂ ರಿಕ್ಷಾ ಓಡಿಸುತ್ತಿದ್ದರು.