UPSC Success Story: ಕೇವಲ 4 ಅಂಕಗಳಿಂದ IAS ಕನಸು ಭಗ್ನ; ಮುಂದೆ ಸಾಧನೆಗೆ ದಾರಿಯಾಗಿದ್ದು ‘ಆ’ ಘಟನೆ

IAS Divya Mishra: ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು UPSC ಪರೀಕ್ಷೆ ಬರೆಯುತ್ತಾರೆ. ಅವರಲ್ಲಿ ಕೆಲವರು ಮಾತ್ರ ಯಶಸ್ವಿಯಾಗುತ್ತಾರೆ. ಐಎಎಸ್ ಆಗುವ ಕನಸು ಕಾಣುವುದು ಸುಲಭ, ಆದರೆ ಆ ಕಷ್ಟದ ಹಾದಿಯಲ್ಲಿ ಯಶಸ್ಸು ಕಾಣುವುದು ತುಂಬಾ ಕಷ್ಟ. ದಿವ್ಯಾ ಮಿಶ್ರಾ ಎಂಬಾಕೆ ಕೇವಲ 4 ಅಂಕಗಳಿಂದ ಅವಕಾಶ ವಂಚಿತರಾಗಿದ್ದರು. ನಂತರ ಅವರೇನು ಮಾಡಿದರು ತಿಳಿಯೋಣ ಬನ್ನಿ.

First published:

  • 17

    UPSC Success Story: ಕೇವಲ 4 ಅಂಕಗಳಿಂದ IAS ಕನಸು ಭಗ್ನ; ಮುಂದೆ ಸಾಧನೆಗೆ ದಾರಿಯಾಗಿದ್ದು ‘ಆ’ ಘಟನೆ

    ಯುಪಿಎಸ್ ಸಿ ಸಾಧಕರ ಸರಣಿಯ ನಮ್ಮ ಅತಿಥಿ ಐಎಎಸ್ ದಿವ್ಯಾ ಮಿಶ್ರಾ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಅವರ ಮನೆಯಲ್ಲೂ ಓದು-ಬರವಣಿಗೆ ವಾತಾವರಣವಿತ್ತು. ಈ ಕಾರಣದಿಂದ ಆಕೆ ಐಎಎಸ್ ಆಗಬೇಕೆಂಬ ಕನಸು ಕಂಡರು.

    MORE
    GALLERIES

  • 27

    UPSC Success Story: ಕೇವಲ 4 ಅಂಕಗಳಿಂದ IAS ಕನಸು ಭಗ್ನ; ಮುಂದೆ ಸಾಧನೆಗೆ ದಾರಿಯಾಗಿದ್ದು ‘ಆ’ ಘಟನೆ

    ಉತ್ತರ ಪ್ರದೇಶದ ಕಾನ್ಪುರದ ನೌಬಸ್ತಾದ ಹನುಮಂತ್ ವಿಹಾರ್ ನಿವಾಸಿ ದಿವ್ಯಾ ಮಿಶ್ರಾ ಅವರ ತಂದೆ ದಿನೇಶ್ ಮಿಶ್ರಾ ಅವರು ನವೋದಯ ವಿದ್ಯಾಲಯದ ಪ್ರಾಂಶುಪಾಲರು. ತಾಯಿ ಮಂಜು ಮಿಶ್ರಾ ಗೃಹಿಣಿ. ದಿವ್ಯಾ ಅವರ ಕಿರಿಯ ಸಹೋದರ ದಿವ್ಯಾಂಶು ಮಿಶ್ರಾ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.

    MORE
    GALLERIES

  • 37

    UPSC Success Story: ಕೇವಲ 4 ಅಂಕಗಳಿಂದ IAS ಕನಸು ಭಗ್ನ; ಮುಂದೆ ಸಾಧನೆಗೆ ದಾರಿಯಾಗಿದ್ದು ‘ಆ’ ಘಟನೆ

    ದಿವ್ಯಾ ಅವರು ನವೋದಯ ವಿದ್ಯಾಲಯದಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. 10ನೇ ಬೋರ್ಡ್ ಪರೀಕ್ಷೆಯಲ್ಲಿ ಶೇ 96.6 ಅಂಕಗಳೊಂದಿಗೆ ರಾಜ್ಯಕ್ಕೆ ಟಾಪರ್ ಆಗಿದ್ದರು. ಇದಾದ ನಂತರ 12ನೇ ತರಗತಿಯಲ್ಲಿ ಶೇ.92.4 ಅಂಕ ಪಡೆದಿದ್ದಾರೆ.

    MORE
    GALLERIES

  • 47

    UPSC Success Story: ಕೇವಲ 4 ಅಂಕಗಳಿಂದ IAS ಕನಸು ಭಗ್ನ; ಮುಂದೆ ಸಾಧನೆಗೆ ದಾರಿಯಾಗಿದ್ದು ‘ಆ’ ಘಟನೆ

    ಆ ನಂತರ ದಿವ್ಯಾ ಎಕೆಟಿಯುನಿಂದ ಬಿಟೆಕ್ ಮುಗಿಸಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ. ಪಿಎಚ್ ಡಿ ಕೂಡ ಮಾಡಿದ್ದಾರೆ. ದಿವ್ಯಾ ಅವರು ಸ್ನಾತಕೋತ್ತರ ಅಧ್ಯಯನದೊಂದಿಗೆ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾದರು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 57

    UPSC Success Story: ಕೇವಲ 4 ಅಂಕಗಳಿಂದ IAS ಕನಸು ಭಗ್ನ; ಮುಂದೆ ಸಾಧನೆಗೆ ದಾರಿಯಾಗಿದ್ದು ‘ಆ’ ಘಟನೆ

    ದಿವ್ಯಾ ಮಿಶ್ರಾಗೆ ಬಾಲ್ಯದಿಂದಲೂ ಐಎಎಸ್ ಆಗಬೇಕೆಂಬ ಆಸೆ ಇತ್ತು. ಆದರೆ ಈ ಪಯಣ ಅವರಿಗೆ ಸ್ವಲ್ಪ ಕಷ್ಟವಾಗಿತ್ತು. ತನ್ನ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಕೇವಲ 4 ಅಂಕಗಳಿಂದ ವಿಫಲರಾಗಿದ್ದರು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 67

    UPSC Success Story: ಕೇವಲ 4 ಅಂಕಗಳಿಂದ IAS ಕನಸು ಭಗ್ನ; ಮುಂದೆ ಸಾಧನೆಗೆ ದಾರಿಯಾಗಿದ್ದು ‘ಆ’ ಘಟನೆ

    ಎರಡನೇ ಪ್ರಯತ್ನದಲ್ಲಿ 312ನೇ ರ್ಯಾಂಕ್ ಪಡೆದು ರೈಲ್ವೆ ಇಲಾಖೆಯಲ್ಲಿ ಅಧಿಕಾರಿಯಾಗುವ ಅವಕಾಶ ಪಡೆದರು. ಆದರೆ ಐಎಎಸ್ ಆಗುವುದು ಅವರ ಕನಸ್ಸಾಗಿತ್ತು. ಅದಕ್ಕಾಗಿ ಮತ್ತೊಮ್ಮೆ ಪ್ರಯತ್ನಿಸಿದರು. 2020 ರಲ್ಲಿ, ದಿವ್ಯಾ ಮಿಶ್ರಾ 28 ನೇ ರ್ಯಾಂಕ್ ನೊಂದಿಗೆ ಐಎಎಸ್ ಆದರು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    UPSC Success Story: ಕೇವಲ 4 ಅಂಕಗಳಿಂದ IAS ಕನಸು ಭಗ್ನ; ಮುಂದೆ ಸಾಧನೆಗೆ ದಾರಿಯಾಗಿದ್ದು ‘ಆ’ ಘಟನೆ

    ಐಎಎಸ್ ದಿವ್ಯಾ ಮಿಶ್ರಾ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗಲೇ ಆಕೆಯ ಕಿರಿಯ ಸಹೋದರ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದರು. ಆಗ ಉರಿ ಅಟ್ಯಾಕ್ ದಿವ್ಯಾ ಅವರನ್ನು ಕಂಗಾಲಾಗಿಸಿತ್ತು. ಅದೇ ಛಲದಲ್ಲಿ ಓದಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದರು. (ಪ್ರಾತಿನಿಧಿಕ ಚಿತ್ರ)

    MORE
    GALLERIES