ಡಾ. ಬುಶ್ರಾ ಬಾನೋ ಅವರು ತಮ್ಮ ಶೈಕ್ಷಣಿಕ ಜೀವನದಲ್ಲಿ ಸದಾ ಟಾಪರ್ ಆಗಿದ್ದರು. ಗಣಿತದಲ್ಲಿ ಬಿಎಸ್ಸಿ ಪದವಿ ಪಡೆದ ನಂತರ, 20 ನೇ ವಯಸ್ಸಿಗೆ ಬುಶ್ರಾ ಎಂಬಿಎ ಮುಗಿಸಿದರು. ನಂತರ ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಮ್ಯಾನೇಜ್ ಮೆಂಟ್ ನಲ್ಲಿ ಪಿಎಚ್ಡಿ ಗಾಗಿ ಅರ್ಜಿ ಸಲ್ಲಿಸಿದರು. ಮರುವರ್ಷವೇ ಅವರು ಜೆಆರ್ ಎಫ್ ಗೆ ಅರ್ಹತೆ ಪಡೆದರು. ಅವರು ತಮ್ಮ ಪಿಎಚ್ಡಿ ಯನ್ನು ಕೇವಲ 2 ವರ್ಷಗಳಲ್ಲೇ ಪೂರ್ಣಗೊಳಿಸಿದರು.
ಭಾರತಕ್ಕೆ ಬಂದ ನಂತರ, ಅವರು AMU ನಲ್ಲಿ ಪೋಸ್ಟ್ ಡಾಕ್ಟರೇಟ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಇದರೊಂದಿಗೆ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಕುಟುಂಬ ಮತ್ತು ಮಗುವಿನ ಜವಾಬ್ದಾರಿಯೊಂದಿಗೆ, ಅವರು 10 ಗಂಟೆಗಳ ಕಾಲ ಓದುತ್ತಿದ್ದರು. 2017ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರವೂ ಛಲ ಬಿಡಲಿಲ್ಲ.