UPSC Success Story: ತಂದೆಯ ಕೊಲೆಯಿಂದ ರೊಚ್ಚಿಗೆದ್ದು 3 ವರ್ಷಗಳಲ್ಲೇ IAS ಅಧಿಕಾರಿಯಾದ ಮಗ!

ತನ್ನ ಕುಟುಂಬದೊಂದಿಗೆ ಆದ ಅನ್ಯಾಯದ ವಿರುದ್ಧ ರೊಚ್ಚಿಗೇಳುವ ಹೀರೋ ಕೂಡಲೇ ವಿಲನ್ ಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ. ನಮ್ಮಲ್ಲಿನ ಅನೇಕ ಸಿನಿಮಾಗಳ ಕಥೆ ಇದು. ನಿಜಜೀವನದಲ್ಲೂ ಈ ರೀತಿಯ ಕಥೆಗಳಿವೆ. ಅದಕ್ಕೆ ತಾಜಾ ಉದಾಹರಣೆ ಭಜರಂಗ್ ಯಾದವ್ ಅವರು ಸ್ಟೋರಿ.

First published:

  • 17

    UPSC Success Story: ತಂದೆಯ ಕೊಲೆಯಿಂದ ರೊಚ್ಚಿಗೆದ್ದು 3 ವರ್ಷಗಳಲ್ಲೇ IAS ಅಧಿಕಾರಿಯಾದ ಮಗ!

    ಐಎಎಸ್ ಅಧಿಕಾರಿಯಾಗಿರುವ ಭಜರಂಗ್ ಯಾದವ್ ಅವರದ್ದು ಅನ್ಯಾಯದ ವಿರುದ್ಧದ ಹೋರಾಟದ ಕಥೆ. ಸಿನಿಮಾಗಳಿರುವಂತೆ ಇಲ್ಲಿ ಕೂಡ ಭಜರಂಗ್ ಯಾದವ್ ತಮ್ಮ ತಂದೆಯ ಕೊಲೆಯಿಂದ ನೊಂದು ದೊಡ್ಡ ಅಧಿಕಾರಿಯಾಗಿದ್ದಾರೆ.

    MORE
    GALLERIES

  • 27

    UPSC Success Story: ತಂದೆಯ ಕೊಲೆಯಿಂದ ರೊಚ್ಚಿಗೆದ್ದು 3 ವರ್ಷಗಳಲ್ಲೇ IAS ಅಧಿಕಾರಿಯಾದ ಮಗ!

    ಭಜರಂಗ್ ಯಾದವ್ ಉತ್ತರ ಪ್ರದೇಶದ ಬಸ್ತಿ ನಿವಾಸಿ. ಇವರ ತಂದೆ ರೈತರಾಗಿದ್ದರು. ಬಡವರಿಗೆ ಸಹಾಯ ಮಾಡುತ್ತಿದ್ದ ತಂದೆಗೆ ಅನೇಕ ಶತ್ರುಗಳು ಹುಟ್ಟಿಕೊಂಡಿದ್ದರು. ಕೊನೆಗೊಂದು ದಿನ ಅವರನ್ನು ಕೊಲೆ ಮಾಡಲಾಯಿತು. ಈ ಘಟನೆಯಿಂದ ಭಜರಂಗ್ ಯಾದವ್ ತೀವ್ರವಾಗಿ ಆಘಾತಕ್ಕೊಳಗಾದರು.

    MORE
    GALLERIES

  • 37

    UPSC Success Story: ತಂದೆಯ ಕೊಲೆಯಿಂದ ರೊಚ್ಚಿಗೆದ್ದು 3 ವರ್ಷಗಳಲ್ಲೇ IAS ಅಧಿಕಾರಿಯಾದ ಮಗ!

    ತಂದೆಯ ಕೊಲೆಗೆ ನ್ಯಾಯ ಸಿಗಲು ದೊಡ್ಡ ಅಧಿಕಾರಿ ಆಗಲೇಬೇಕೆಂದು ಮೂರೇ ವರ್ಷದಲ್ಲಿ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿದ್ದಾರೆ. ಯುಪಿಎಸ್ ಸಿ ಪರೀಕ್ಷೆಯಲ್ಲಿ 454ನೇ ರ್ಯಾಂಕ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

    MORE
    GALLERIES

  • 47

    UPSC Success Story: ತಂದೆಯ ಕೊಲೆಯಿಂದ ರೊಚ್ಚಿಗೆದ್ದು 3 ವರ್ಷಗಳಲ್ಲೇ IAS ಅಧಿಕಾರಿಯಾದ ಮಗ!

    ಭಜರಂಗ್ ಯಾದವ್ ಬಹದ್ದೂರ್ ಪುರದ ಧೋಭತ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರ ತಾಯಿ ಗ್ರಾಮ ಪ್ರಧಾನರಾಗಿದ್ದಾರೆ. ಅವರಿಗೆ 4 ಸಹೋದರರು ಮತ್ತು ಸಹೋದರಿ ಇದ್ದಾರೆ. ಒಬ್ಬರು ಸಹೋದರಿ ಸೇನೆಯ ಮೆಟೀರಿಯಲ್ ಅಸಿಸ್ಟೆಂಟ್ ಹುದ್ದೆಗೆ ನೇಮಕಗೊಂಡಿದ್ದಾರೆ.

    MORE
    GALLERIES

  • 57

    UPSC Success Story: ತಂದೆಯ ಕೊಲೆಯಿಂದ ರೊಚ್ಚಿಗೆದ್ದು 3 ವರ್ಷಗಳಲ್ಲೇ IAS ಅಧಿಕಾರಿಯಾದ ಮಗ!

    ಭಜರಂಗ್ ಯಾದವ್ ಐಎಎಸ್ ಅಧಿಕಾರಿಯಾಗುವ ಮೂಲಕ ಬಡವರು ಮತ್ತು ಅಸಹಾಯಕರಿಗೆ ಸಹಾಯ ಮಾಡಲು ಬಯಸುತ್ತಾರೆ. ಒಬ್ಬ ದಕ್ಷ ಅಧಿಕಾರಿ ಮಾತ್ರ ಬಡವರಿಗೆ ಸಹಾಯ ಮಾಡಬಲ್ಲ ಎಂದು ತಂದೆಯ ಮರಣದ ನಂತರ ಅವರು ಅರ್ಥಮಾಡಿಕೊಂಡಿದ್ದಾರಂತೆ.

    MORE
    GALLERIES

  • 67

    UPSC Success Story: ತಂದೆಯ ಕೊಲೆಯಿಂದ ರೊಚ್ಚಿಗೆದ್ದು 3 ವರ್ಷಗಳಲ್ಲೇ IAS ಅಧಿಕಾರಿಯಾದ ಮಗ!

    ಭಜರಂಗ್ ಯಾದವ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲಿಯೇ ಪೂರೈಸಿದ್ದಾರೆ. ಅವರು ತಮ್ಮ ಶಾಲಾ ಶಿಕ್ಷಣವನ್ನು ಬಾಸ್ಟೊದಿಂದ ಮಾಡಿದರು. ನಂತರ ಅವರು ಅಲಹಾಬಾದ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

    MORE
    GALLERIES

  • 77

    UPSC Success Story: ತಂದೆಯ ಕೊಲೆಯಿಂದ ರೊಚ್ಚಿಗೆದ್ದು 3 ವರ್ಷಗಳಲ್ಲೇ IAS ಅಧಿಕಾರಿಯಾದ ಮಗ!

    ಎಲ್ಲಾ ಕೆಟ್ಟ ಘಟನೆಗಳ ಅಂತ್ಯ ಕೆಟ್ಟದಾಗಿಯೇ ಇರಬೇಕು ಅಂತಿಲ್ಲ. ಜೀವನದಲ್ಲಿ ಎದುರಾಗುವ ಕಷ್ಟಗಳು ನಮ್ಮನ್ನು ಬಲಿಷ್ಠರಾಗಿಸಬೇಕು. ಎಲ್ಲಾ ಅನ್ಯಾಯಗಳ ವಿರುದ್ಧ ಹೋರಾಡಲು ಸರಿಯಾದ ಮಾರ್ಗ ಇದೆ ಎಂದು ಭಜರಂಗ್ ಯಾದವ್ ತೋರಿಸಿಕೊಟ್ಟಿದ್ದಾರೆ. ತಂದೆಯನ್ನು ಕೊಂದವರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳದೆ ಐಎಎಸ್ ಅಧಿಕಾರಿ ಆಗುವ ಮೂಲಕ ಸಾಧನೆ ಮಾಡಿದ್ದಾರೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES