Success Story: 10ನೇ ಕ್ಲಾಸ್ ಫೇಲ್ ಆಗಿದ್ದ ಹಳ್ಳಿ ಹುಡ್ಗ 3 ಸಲ UPSC ಪರೀಕ್ಷೆಯಲ್ಲಿ ಪಾಸ್ ಆಗಿದ್ದೇ ಒಂದು ಪವಾಡ!

IRS Devprakash Meena Success Story: ಶಾಲಾ-ಕಾಲೇಜು ಪರೀಕ್ಷೆಗಳಲ್ಲಿ ಕೆಲ ವಿದ್ಯಾರ್ಥಿಗಳು ಫೇಲ್ ಆಗುತ್ತಾರೆ. ಹಾಗಾಂತ ಅವರು ಸಂಪೂರ್ಣ ದಡ್ಡರು ಎಂದು ಹೇಳಲು ಆಗಲ್ಲ. ಅವರು ತಮ್ಮ ಸಾಮರ್ಥ್ಯವನ್ನು ಪೂರ್ತಿಯಾಗಿ ಬಳಸದೇ ಇರಬಹುದು ಅಥವಾ ಅವರಿಗೇ ತಮ್ಮ ಸಾಮರ್ಥ್ಯದ ಬಗ್ಗೆ ಗೊತ್ತಿರದೇ ಇರಬಹುದು. ಸೋತವರೇ ಮುಂದೆ ದೊಡ್ಡ ಮಟ್ಟದಲ್ಲಿ ಗೆದ್ದಿದ್ದಾರೆ. ಇದಕ್ಕೆ ಸಾಕ್ಷಿ ಐಆರ್ ಎಸ್ ಅಧಿಕಾರಿ ದೇವ್ ಪ್ರಕಾಶ್ ಮೀನಾ. ಅವರ ಸಕ್ಸಸ್​ ಸ್ಟೋರಿ ಬಗ್ಗೆ ತಿಳಿಯೋಣ.

First published:

  • 17

    Success Story: 10ನೇ ಕ್ಲಾಸ್ ಫೇಲ್ ಆಗಿದ್ದ ಹಳ್ಳಿ ಹುಡ್ಗ 3 ಸಲ UPSC ಪರೀಕ್ಷೆಯಲ್ಲಿ ಪಾಸ್ ಆಗಿದ್ದೇ ಒಂದು ಪವಾಡ!

    ಯುಪಿಎಸ್ ಸಿ ಸಾಧಕರ ಸರಣಿಯ ಇಂದಿನ ನಮ್ಮ ಅತಿಥಿ ಐಆರ್ ಎಸ್ ಅಧಿಕಾರಿ ದೇವ್ ಪ್ರಕಾಶ್ ಮೀನಾ ಕೂಡ ಜೀವನದಲ್ಲಿ ಸೋತು ಗೆದ್ದವರು. ಅವರ ಯಶಸ್ಸಿನ ಹಾದಿ ಅನೇಕ ಆ್ಯವರೇಜ್ ವಿದ್ಯಾರ್ಥಿಗಳಿಗೆ ನಿಜಕ್ಕೂ ಸ್ಪೂರ್ತಿ.

    MORE
    GALLERIES

  • 27

    Success Story: 10ನೇ ಕ್ಲಾಸ್ ಫೇಲ್ ಆಗಿದ್ದ ಹಳ್ಳಿ ಹುಡ್ಗ 3 ಸಲ UPSC ಪರೀಕ್ಷೆಯಲ್ಲಿ ಪಾಸ್ ಆಗಿದ್ದೇ ಒಂದು ಪವಾಡ!

    2008ರ ಬ್ಯಾಚ್ ಐಆರ್ ಎಸ್ ಅಧಿಕಾರಿಯಾಗಿರುವ ದೇವ್ ಪ್ರಕಾಶ್ ಮೀನಾ 10ನೇ ತರಗತಿಯಲ್ಲಿ ಒಮ್ಮೆ ಫೇಲ್ ಆಗಿದ್ದರು. ನಂತರ ಶೇ.43ರಷ್ಟು ಅಂಕಗಳ ಮೂಲಕ ಪಾಸ್ ಆದರು. ಸೆಕೆಂಡ್ ಪಿಯುನಲ್ಲಿ ಶೇ.56ರಷ್ಟು ಅಂಕಗಳು ಹಾಗೂ ಬಿಎ ಪದವಿಯಲ್ಲಿ ಶೇ.48ರಷ್ಟು ಮಾತ್ರ ಅಂಕಗಳನ್ನು ಗಳಿಸುವ ಮೂಲಕ ಸಾಮಾನ್ಯ ವಿದ್ಯಾರ್ಥಿ ಎನಿಸಿಕೊಂಡರು.

    MORE
    GALLERIES

  • 37

    Success Story: 10ನೇ ಕ್ಲಾಸ್ ಫೇಲ್ ಆಗಿದ್ದ ಹಳ್ಳಿ ಹುಡ್ಗ 3 ಸಲ UPSC ಪರೀಕ್ಷೆಯಲ್ಲಿ ಪಾಸ್ ಆಗಿದ್ದೇ ಒಂದು ಪವಾಡ!

    ಆದರೆ 10ನೇ, 12ನೇ, ಪದವಿ ಅಥವಾ ಯಾವುದೇ ತರಗತಿಯಲ್ಲಿನ ಅಂಕಗಳು ಒಬ್ಬರ ಭವಿಷ್ಯವನ್ನು ನಿರ್ಧರಿಸುವುದಿಲ್ಲ. IRS ಅಧಿಕಾರಿ ದೇವ್ ಪ್ರಕಾಶ್ ಮೀನಾ ಅವರು ತಮ್ಮ ಕಠಿಣ ಪರಿಶ್ರಮದ ಮೂಲಕ ಅದನ್ನು ಸಾಧಿಸಿ ತೋರಿಸಿದ್ದಾರೆ.

    MORE
    GALLERIES

  • 47

    Success Story: 10ನೇ ಕ್ಲಾಸ್ ಫೇಲ್ ಆಗಿದ್ದ ಹಳ್ಳಿ ಹುಡ್ಗ 3 ಸಲ UPSC ಪರೀಕ್ಷೆಯಲ್ಲಿ ಪಾಸ್ ಆಗಿದ್ದೇ ಒಂದು ಪವಾಡ!

    ಅವರು ಜುಲೈ 1, 1978 ರಂದು ರಾಜಸ್ಥಾನದ ದೌಸಾ ಜಿಲ್ಲೆಯ ಮಾಹ್ವಾ ತಹಸಿಲ್ ನ ಬಿರ್ಸಾನಾ ಗ್ರಾಮದಲ್ಲಿ ಜನಿಸಿದರು. ದೇವ್ ಪ್ರಕಾಶ್ ಅವರಿಗೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆಯಲು ಸಾಕಷ್ಟು ತೊಂದರೆಗಳಿದ್ದವು. ತರಗತಿಗಳಿಗೆ ಹಾಜರಾಗಲು ರಸೀದ್ ಪುರ ಗ್ರಾಮಕ್ಕೆ ಮೈಲುಗಟ್ಟಲೆ ನಡೆದು ಹೋಗುತ್ತಿದ್ದರು. ವ್ಯಾಸಂಗದ ಜೊತೆಗೆ ಮನೆಕೆಲಸದ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದರು.

    MORE
    GALLERIES

  • 57

    Success Story: 10ನೇ ಕ್ಲಾಸ್ ಫೇಲ್ ಆಗಿದ್ದ ಹಳ್ಳಿ ಹುಡ್ಗ 3 ಸಲ UPSC ಪರೀಕ್ಷೆಯಲ್ಲಿ ಪಾಸ್ ಆಗಿದ್ದೇ ಒಂದು ಪವಾಡ!

    ರಾಜಸ್ಥಾನ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದೊಂದಿಗೆ ಬಿಎ ಪೂರ್ಣಗೊಳಿಸಿದರು. ಅಲ್ಲಿ ತಂಗಿದ್ದಾಗಲೇ ಅವರಿಗೆ ಯುಪಿಎಸ್ ಸಿ ಸಿವಿಲ್ ಸರ್ವಿಸಸ್ ಬಗ್ಗೆ ತಿಳಿಯಿತು. ನಂತರ UPSC ಯ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಆರಂಭಿಸಿದರು.

    MORE
    GALLERIES

  • 67

    Success Story: 10ನೇ ಕ್ಲಾಸ್ ಫೇಲ್ ಆಗಿದ್ದ ಹಳ್ಳಿ ಹುಡ್ಗ 3 ಸಲ UPSC ಪರೀಕ್ಷೆಯಲ್ಲಿ ಪಾಸ್ ಆಗಿದ್ದೇ ಒಂದು ಪವಾಡ!

    ಈ ಪರೀಕ್ಷೆಯಲ್ಲಿ ಅವರು ಒಂದಲ್ಲ ಎರಡಲ್ಲ 3 ಬಾರಿ ಪಾಸ್ ಆಗಿದ್ದಾರೆ. ಅಂತಿಮವಾಗಿ ಅವರು 2008ರ ಬ್ಯಾಚ್ ನ IRS ಅಧಿಕಾರಿಯಾದರು. ಪ್ರಸ್ತುತ ಕಾಂಡ್ಲಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

    MORE
    GALLERIES

  • 77

    Success Story: 10ನೇ ಕ್ಲಾಸ್ ಫೇಲ್ ಆಗಿದ್ದ ಹಳ್ಳಿ ಹುಡ್ಗ 3 ಸಲ UPSC ಪರೀಕ್ಷೆಯಲ್ಲಿ ಪಾಸ್ ಆಗಿದ್ದೇ ಒಂದು ಪವಾಡ!

    10ನೇ ಕ್ಲಾಸ್ ಫೇಲ್ ಆಗಿದ್ದ ಹಳ್ಳಿ ಹುಡ್ಗ 3 ಸಲ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ನಿಜಕ್ಕೂ ಪವಾಡವೇ ಸರಿ. ಶೈಕ್ಷಣಿಕವಾಗಿ ಕಡಿಮೆ ಅಂಕಗಳನ್ನು ಪಡೆದವರು ಸಹ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ದೇವ್ ಪ್ರಕಾಶ್ ಅವರು ತೋರಿಸಿಕೊಟ್ಟಿದ್ದಾರೆ.

    MORE
    GALLERIES