UPSC Success Story: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ

IPS Pooja Yadav Success Story: ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಐಪಿಎಸ್ ಅಧಿಕಾರಿ ಪೂಜಾ ಯಾದವ್. ಜರ್ಮನಿಯಲ್ಲಿನ ಲಕ್ಷಗಳ ಸಂಬಳದ ಕೆಲಸ ಬಿಟ್ಟು ಬಂದು ದೇಶ ಸೇವೆಗೆ ಮುಂದಾದ ಪೂಜಾ ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.

First published:

  • 17

    UPSC Success Story: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ

    ಯುಪಿಎಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಯ ಕಥೆಯೂ ವಿಶೇಷವಾಗಿದೆ. ಕೆಲವರು ಕಠಿಣ ಹೋರಾಟದ ನಂತರ ಇಲ್ಲಿಗೆ ತಲುಪಿದರೆ, ಕೆಲವರು ತಮ್ಮ ಐಷಾರಾಮಿ ಉದ್ಯೋಗಗಳನ್ನು ತೊರೆದು ಇಲ್ಲಿಗೆ ಬರಲು ನಿರ್ಧರಿಸುತ್ತಾರೆ. ಪೂಜಾಳ ಕಥೆಯೇ ಹೀಗೆ, ಇಲ್ಲಿಗೆ ಬರುವ ಮುನ್ನ ಅವರು ವಿದೇಶದ ಕೆಲಸಕ್ಕೆ ಗುಡ್ ಬೈ ಹೇಳಿದ್ದರು.

    MORE
    GALLERIES

  • 27

    UPSC Success Story: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ

    ಪೂಜಾ ಯಾದವ್ ಮೂಲತಃ ಹರಿಯಾಣದವರು. 1988ರ ಸೆಪ್ಟೆಂಬರ್ 20ರಂದು ಜನಿಸಿದ ಪೂಜಾ ಯಾದವ್ ತನ್ನ ಆರಂಭಿಕ ಶಿಕ್ಷಣವನ್ನು ಹರಿಯಾಣದಲ್ಲಿ ಪಡೆದರು. ಅವರು ಬಯೋಟೆಕ್ನಾಲಜಿ ಮತ್ತು ಫುಡ್ ಟೆಕ್ನಾಲಜಿಯಲ್ಲಿ ಎಂಟೆಕ್ ಮಾಡಿದರು. ಎಂಟೆಕ್ ನಂತರ ಕೆನಡಾಕ್ಕೆ ಹೋದರು.

    MORE
    GALLERIES

  • 37

    UPSC Success Story: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ

    ಕೆಲವು ವರ್ಷಗಳ ಕಾಲ ಕೆನಡಾದಲ್ಲಿ ಕೆಲಸ ಮಾಡಿದ ನಂತರ ಜರ್ಮನಿಗೆ ಹೋದರು. ವಿದೇಶಿ ಉದ್ಯೋಗದಲ್ಲಿ ಹಣವಿತ್ತು, ಸೌಲಭ್ಯಗಳಿದ್ದವು. ಆದರೆ ಪೂಜಾಗೆ ಸಮಾಧಾನವಾಗಲಿಲ್ಲ. ಕೆಲಸ ಬಿಟ್ಟು ಭಾರತಕ್ಕೆ ಮರಳಿದರು.

    MORE
    GALLERIES

  • 47

    UPSC Success Story: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ

    ಭಾರತಕ್ಕೆ ಬಂದ ನಂತರ ಪೂಜಾ ಯಾದವ್ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ತನ್ನ ಮೊದಲ ಪ್ರಯತ್ನದಲ್ಲಿ ವಿಫಲರಾದರು. ನಂತರ ದುಪ್ಪಟ್ಟು ಪರಿಶ್ರಮದಿಂದ ಎರಡನೇ ಪ್ರಯತ್ನದಲ್ಲಿ 174ನೇ ರ್ಯಾಂಕ್ ಗಳಿಸಿದರು. ಪೂಜಾ ಯಾದವ್ 2018 ರ ಬ್ಯಾಚ್ ನ ಐಪಿಎಸ್ ಅಧಿಕಾರಿ.

    MORE
    GALLERIES

  • 57

    UPSC Success Story: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ

    ಪೂಜಾ ಸಾಮಾಜಿಕ ಮಾಧ್ಯಮ Instagramನಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ. ಪೂಜಾ ಯಾದವ್, ದೇಶದ ಅತ್ಯಂತ ಸುಂದರ ಆಡಳಿತ ಅಧಿಕಾರಿಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. 2018ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಗುಜರಾತ್ ಕೇಡರ್ ನ ಅಧಿಕಾರಿಯಾಗಿದ್ದಾರೆ.

    MORE
    GALLERIES

  • 67

    UPSC Success Story: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ

    ಎಂಟೆಕ್ ಓದುತ್ತಿರುವಾಗ ಮತ್ತು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಮಕ್ಕಳಿಗೆ ಟ್ಯೂಷನ್ ಕಲಿಸುತ್ತಿದ್ದರು. ಜೊತೆಗೆ ಖರ್ಚನ್ನು ಭರಿಸಲು ಸ್ವಾಗತಕಾರರಾಗಿಯೂ ಕೆಲಸ ಮಾಡುತ್ತಿದ್ದರು.

    MORE
    GALLERIES

  • 77

    UPSC Success Story: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ

    ಪೂಜಾ ಮತ್ತು 2016 ರ ಬ್ಯಾಚ್ ಐಎಎಸ್ ಅಧಿಕಾರಿ ವಿಕಲ್ಪ್ ಭಾರದ್ವಾಜ್ 2021 ರಲ್ಲಿ ವಿವಾಹವಾದರು. ಅವರು ಕೇರಳ ಕೇಡರ್ ನ ಅಧಿಕಾರಿಯಾಗಿದ್ದಾರೆ. ಅವರನ್ನು ವಿವಾಹವಾದ ನಂತರ ಅವರು ಗುಜರಾತ್ ಕೇಡರ್ ಗೆ ವರ್ಗಾವಣೆಗೆ ಮನವಿ ಮಾಡಿದರು. ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (LBSNAA ಮಸ್ಸೂರಿ) ನಲ್ಲಿ ಇಬ್ಬರೂ ಭೇಟಿಯಾದರು.

    MORE
    GALLERIES