UPSC Success Story: ದೊಡ್ಡ ಸಂಬಳದ MNC ಉದ್ಯೋಗ ಬಿಟ್ಟು ಐಪಿಎಸ್ ಅಧಿಕಾರಿಯಾದ ಸಾಧಕಿ

IPS Areeba Noman Success Story: ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿರುವ ಒಬ್ಬೊಬ್ಬರ ಹಿಂದೆಯೂ ಒಂದೊಂದು ಸ್ಪೂರ್ತಿಯ ಕಥೆ ಇದೆ. ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ಇಂದಿನ ಅತಿಥಿ ಐಪಿಎಸ್ ಅರಿಬಾ ನೋಮನ್. MNC ಉದ್ಯೋಗ ಬಿಟ್ಟು ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅರಿಬಾ ಅವರ ಸಕ್ಸಸ್ ಸ್ಟೋರಿ ತಿಳಿಯೋಣ ಬನ್ನಿ.

First published:

  • 17

    UPSC Success Story: ದೊಡ್ಡ ಸಂಬಳದ MNC ಉದ್ಯೋಗ ಬಿಟ್ಟು ಐಪಿಎಸ್ ಅಧಿಕಾರಿಯಾದ ಸಾಧಕಿ

    ಬಹುತೇಕ ಸಾಧಕರ ಹಿಂದೆ ಹೆತ್ತವರ, ಕುಟುಂಬದ ತ್ಯಾಗ-ಪರಿಶ್ರಮ ಇರುತ್ತೆ. ಅರಿಬಾ ಅವರ ಸಾಧನೆಯ ಹಿಂದೆ ತಾಯಿಯ ಸೋದರ ಅಂದರೆ ಮಾವನ ಬೆಂಬಲ ಸಾಕಷ್ಟಿದೆಯಂತೆ. ಸೋದರ ಮಾವನ ಕನಸ್ಸಿನಂತೆ ಅರಿಬಾ ಇಂದು ಪೊಲೀಸ್ ಅಧಿಕಾರಿಯಾಗಿದ್ದಾರೆ.

    MORE
    GALLERIES

  • 27

    UPSC Success Story: ದೊಡ್ಡ ಸಂಬಳದ MNC ಉದ್ಯೋಗ ಬಿಟ್ಟು ಐಪಿಎಸ್ ಅಧಿಕಾರಿಯಾದ ಸಾಧಕಿ

    ಅರಿಬಾ ನೋಮನ್ ಮೂಲತಃ ಉತ್ತರ ಪ್ರದೇಶದ ಸುಲ್ತಾನ್ ಪುರದವರು. ಕೊತ್ವಾಲಿ ನಗರದ ಪ್ಯಾರೆ ಪಟ್ಟಿ ನಿವಾಸಿ. ಅರಿಬಾ ನೋಮನ್ ಅವರ ತಂದೆ ನೋಮನ್ ಅಹ್ಮದ್ ಅವರು ಸುಲ್ತಾನ್ ಪುರದ ರಾಷ್ಟ್ರೀಯ ವಿಮಾ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದಾರೆ. ತಾಯಿ ರುಖ್ಸಾನಾ ನಿಖತ್ ಗೃಹಿಣಿ.

    MORE
    GALLERIES

  • 37

    UPSC Success Story: ದೊಡ್ಡ ಸಂಬಳದ MNC ಉದ್ಯೋಗ ಬಿಟ್ಟು ಐಪಿಎಸ್ ಅಧಿಕಾರಿಯಾದ ಸಾಧಕಿ

    ಅರಿಬಾ 10 ನೇ ತರಗತಿಯವರೆಗೆ ಸ್ಟೆಲ್ಲಾ ಮೋರಿಸ್ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದಾರೆ. ಮೊದಲಿನಿಂದಲೂ ಓದಿನದಲ್ಲಿ ಮುಂದಿದ್ದ ಅರಿಬಾ ಟಾಪರ್ ಎನಿಸಿಕೊಂಡವರು. 10 ನೇ ಕ್ಲಾಸ್ ನಂತರ ಅರಿಬಾ ತನ್ನ ತಾಯಿಯ ಸೋದರ ಗುಫ್ರಾನ್ ಅಹ್ಮದ್ ಅವರೊಂದಿಗೆ ದೆಹಲಿಗೆ ಬಂದರು. ದೆಹಲಿಗೆ ಬಂದ ಮೇಲೆ ಅರಿಬಾ ಬದುಕೇ ಬದಲಾಯಿತು.

    MORE
    GALLERIES

  • 47

    UPSC Success Story: ದೊಡ್ಡ ಸಂಬಳದ MNC ಉದ್ಯೋಗ ಬಿಟ್ಟು ಐಪಿಎಸ್ ಅಧಿಕಾರಿಯಾದ ಸಾಧಕಿ

    ದೆಹಲಿಯಲ್ಲಿ ಪಿಯು ಶಿಕ್ಷಣ ಪೂರೈಸಿದರು. ನಂತರ ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಮಾಡಿದ್ದಾರೆ. ಕಂಪ್ಯೂಟರ್ ಸೈನ್ಸ್ ನಲ್ಲಿ ಟಾಪರ್ ಎನಿಸಿಕೊಂಡಿದ್ದಾರೆ. ಪದವಿ ಮುಗಿದ ಮೇಲೆ ಅರಿಬಾ ಅವರಿಗೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಕ್ಕಿತು.

    MORE
    GALLERIES

  • 57

    UPSC Success Story: ದೊಡ್ಡ ಸಂಬಳದ MNC ಉದ್ಯೋಗ ಬಿಟ್ಟು ಐಪಿಎಸ್ ಅಧಿಕಾರಿಯಾದ ಸಾಧಕಿ

    ಆದರೆ ತನ್ನನ್ನು ದೊಡ್ಡ ಅಧಿಕಾರಿಯಾಗಿ ನೋಡುವ ಮಾವನ ಕನಸ್ಸಿಗೆ ಅರಿಬಾ ತಲೆಬಾಗಿದರು. ಇದೇ ಸಮಯದಲ್ಲಿ ಮಾವನ ಮನೆಗೆ ಸುಲ್ತಾನಪುರದ ಅಂದಿನ ಎಸ್ ಡಿಎಂ ಸದರ್ ಪ್ರಮೋದ್ ಪಾಂಡೆ ಬಂದರು. ಅವರ ಮಾರ್ಗದರ್ಶನದಲ್ಲಿ UPSC ಅಧ್ಯಯನಗಳ ಪ್ರಕ್ರಿಯೆಯು ಪ್ರಾರಂಭವಾಯಿತು.

    MORE
    GALLERIES

  • 67

    UPSC Success Story: ದೊಡ್ಡ ಸಂಬಳದ MNC ಉದ್ಯೋಗ ಬಿಟ್ಟು ಐಪಿಎಸ್ ಅಧಿಕಾರಿಯಾದ ಸಾಧಕಿ

    ಸೂಕ್ತ ಮಾರ್ಗದರ್ಶನ ಹಾಗೂ ಕಠಿಣ ಪರಿಶ್ರಮದ ಮೂಲಕ ಯುಪಿಎಸ್ ಸಿ ಪರೀಕ್ಷೆಯಲ್ಲಿ 109ನೇ ರ್ಯಾಂಕ್ ಗಳಿಸಿದರು. ಆ ಮೂಲಕ ಐಪಿಎಸ್ ಅಧಿಕಾರಿಯಾದರು. ತಮ್ಮ ಯಶಸ್ಸಿಗೆ ಮಾವನೇ ಕಾರಣ ಎನ್ನುತ್ತಾರೆ ಅರಿಬಾ.

    MORE
    GALLERIES

  • 77

    UPSC Success Story: ದೊಡ್ಡ ಸಂಬಳದ MNC ಉದ್ಯೋಗ ಬಿಟ್ಟು ಐಪಿಎಸ್ ಅಧಿಕಾರಿಯಾದ ಸಾಧಕಿ

    ಗಾಡ್ ಫಾದರ್ ನಂತೆ ಮಾರ್ಗದರ್ಶನ ನೀಡಿದ ಪ್ರಮೋದ್ ಪಾಂಡೆ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಪ್ರಸ್ತುತ ಐಪಿಎಸ್ ಅರಿಬಾ ಅವರು ಯುಪಿ ಕೇಡರ್ ಅಧಿಕಾರಿಯಾಗಿದ್ದಾರೆ. ಕುಟುಂಬದವರು ಕನಸ್ಸನ್ನು ನನಸು ಮಾಡುವುದು ನಿಜಕ್ಕೂ ಒಳ್ಳೆಯ ಹಾದಿ ಎಂದು ಅರಿಬಾ ಸಲಹೆ ನೀಡುತ್ತಾರೆ.

    MORE
    GALLERIES