UPSC Success Story: ಸತತ 5ನೇ ಪ್ರಯತ್ನದಲ್ಲಿ IAS ಆದ ರೈತನ ಮಗ ಸೋಮನಾಥ್

IAS Somnath Success Story: ಯುಪಿಎಸ್ ಸಿ ಪರೀಕ್ಷೆ ದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದು ಎಲ್ಲರಿಗೂ ಗೊತ್ತಿದೆ. ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಅನೇಕ ವರ್ಷಗಳೇ ಹಿಡಿಯುತ್ತೆ. ಆದರೆ ಕೆಲವರು ಯುಪಿಎಸ್ ಸಿ ಪರೀಕ್ಷೆಯ ಸೋಲಿನಿಂದ ಕಂಗೆಡುತ್ತಾರೆ. ಪರೀಕ್ಷಾ ತಯಾರಿ ಮುಂದುವರಿಸಬೇಕೋ, ನಿಲ್ಲಿಸಬೇಕೋ ಎಂಬ ಗೊಂದಲ ಕಾಡುತ್ತೆ. ಅಂತಹವರು ಈ ಯುಪಿಎಸ್ ಸಿ ಪರೀಕ್ಷಾ ಸಾಧಕನ ಕಥೆ ಕೇಳಬೇಕು.

First published:

  • 17

    UPSC Success Story: ಸತತ 5ನೇ ಪ್ರಯತ್ನದಲ್ಲಿ IAS ಆದ ರೈತನ ಮಗ ಸೋಮನಾಥ್

    ಇವರು ಐಎಎಸ್ ಸೋಮನಾಥ್. ಮೂಲತಃ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಗುವಾಂಚ್ ಗ್ರಾಮದವರು. ರೈತ ಕುಟುಂಬದಲ್ಲಿ ಬೆಳೆದ ಸೋಮನಾಥ್ ಮನೆಯಲ್ಲಿ ಬಡತನವನ್ನು ಕಂಡವರು. ಕಷ್ಟಗಳು ವ್ಯಕ್ತಿಯನ್ನು ಬಲಿಷ್ಠನನ್ನಾಗಿ ಮಾಡುತ್ತದೆ. ಸೋಮನಾಥ್ ವಿಷಯದಲ್ಲಿ ಈ ಮಾತು ಸತ್ಯ.

    MORE
    GALLERIES

  • 27

    UPSC Success Story: ಸತತ 5ನೇ ಪ್ರಯತ್ನದಲ್ಲಿ IAS ಆದ ರೈತನ ಮಗ ಸೋಮನಾಥ್

    ಸೋಮನಾಥ್ ಶಾಲಾ ಶಿಕ್ಷಣದ ನಂತರ ಎಂಜಿನಿಯರಿಂಗ್ ಓದಿದರು. ಇಂಜಿನಿಯರಿಂಗ್ ನಂತರ ಸೆಲ್ ಆಫೀಸರ್ ಆದರು. ಇದಾದ ಬಳಿಕ ಹಣಕಾಸಿನ ತೊಂದರೆಯಿಂದ ಯುಪಿಎಸ್ ಸಿಗೆ ತಯಾರಿ ನಡೆಸಲು ಸಾಧ್ಯವಾಗಲಿಲ್ಲ.

    MORE
    GALLERIES

  • 37

    UPSC Success Story: ಸತತ 5ನೇ ಪ್ರಯತ್ನದಲ್ಲಿ IAS ಆದ ರೈತನ ಮಗ ಸೋಮನಾಥ್

    ಸೋಮನಾಥ್ ಗ್ರಾಜುಯೇಟ್ ರೆಕಾರ್ಡ್ ಪರೀಕ್ಷೆಗೆ (GRE) ತಯಾರಾಗಲು ಬಯಸಿದ್ದರು. GRE ಅಂದರೆ US, ಕೆನಡಾ ಮತ್ತು ಇತರ ಹಲವು ದೇಶಗಳಲ್ಲಿ ಪದವಿ ಪ್ರವೇಶಕ್ಕೆ ಅಗತ್ಯವಿರುವ ಪ್ರಮಾಣೀಕೃತ ಪರೀಕ್ಷೆಯಾಗಿದೆ. ಹಣದ ಕೊರತೆಯಿಂದ ಸೋಮನಾಥ್ ಜಿಆರ್ ಇಗೂ ತಯಾರಿ ನಡೆಸಲು ಸಾಧ್ಯವಾಗಲಿಲ್ಲ.

    MORE
    GALLERIES

  • 47

    UPSC Success Story: ಸತತ 5ನೇ ಪ್ರಯತ್ನದಲ್ಲಿ IAS ಆದ ರೈತನ ಮಗ ಸೋಮನಾಥ್

    MPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಮುಂಬೈನ ಮಂತ್ರಾಲಯದಲ್ಲಿ ಸೆಲ್ ಅಧಿಕಾರಿಯಾದರು. ನಂತರ ಸೋಮನಾಥ್ ಯುಪಿಎಸ್ ಸಿಗೆ ತಯಾರಿ ಆರಂಭಿಸಿದರು. ಸೋಮನಾಥ್ ಅವರು 2016, 2017 ಮತ್ತು 2018 ರಲ್ಲಿ ಮೂರು ಬಾರಿ UPSC CSE ಅನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ.

    MORE
    GALLERIES

  • 57

    UPSC Success Story: ಸತತ 5ನೇ ಪ್ರಯತ್ನದಲ್ಲಿ IAS ಆದ ರೈತನ ಮಗ ಸೋಮನಾಥ್

    2019ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಕಡಿಮೆ ರ್ಯಾಂಕ್ ಬಂದ ಕಾರಣ ಬಯಸಿದ ಪೋಸ್ಟಿಂಗ್ ಸಿಗಲಿಲ್ಲ. 2019ರಲ್ಲಿ IRS ಪೋಸ್ಟ್ ಸಿಕ್ಕಿತು. 2020ರಲ್ಲಿ 5ನೇ ಬಾರಿಗೆ UPSC ಪರೀಕ್ಷೆಯನ್ನು ನೀಡಿದರು, ಈ ಬಾರಿ ಅವರಿಗೆ ಅಖಿಲ ಭಾರತ 166 ರ್ಯಾಂಕ್ ಸಿಕ್ಕಿತು.

    MORE
    GALLERIES

  • 67

    UPSC Success Story: ಸತತ 5ನೇ ಪ್ರಯತ್ನದಲ್ಲಿ IAS ಆದ ರೈತನ ಮಗ ಸೋಮನಾಥ್

    ಈ ರ್ಯಾಂಕ್ ನೊಂದಿಗೆ ಸೋಮನಾಥ್ ಅವರ ಕನಸು ನನಸಾಯಿತು, ಅವರು IAS ಹುದ್ದೆಯನ್ನು ಪಡೆದರು. ಮೊದಲ ಪೋಸ್ಟಿಂಗ್ ರಾಜಸ್ಥಾನದ ಬಾರ್ಮರ್ ನಲ್ಲಿ ಆಗಿದೆ. ಇಲ್ಲಿ ಅವರು ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    UPSC Success Story: ಸತತ 5ನೇ ಪ್ರಯತ್ನದಲ್ಲಿ IAS ಆದ ರೈತನ ಮಗ ಸೋಮನಾಥ್

    ನಾಸಿಕ್ ನ ಬಡ ರೈತ ಕುಟುಂಬದ ಸೋಮನಾಥ್ ಅವರಿಗೆ ಮೂವರು ಸಹೋದರಿಯರಿದ್ದಾರೆ. ಸೋಮನಾಥ್​ ಅವರ ತಂದೆ-ತಾಯಿ ಇಂದಿಗೂ ಕೃಷಿ ಕೆಲಸ ಮಾಡುತ್ತಾರೆ. ರೈತರ ಮಕ್ಕಳು ದೊಡ್ಡ ಹುದ್ದೆಗಳನ್ನು ಅಲಂಕರಿಸುವುದು ನಿಜಕ್ಕೂ ಹೆಮ್ಮೆಯ ವಿಷಯ ಅಂತಲೇ ಹೇಳಬಹುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES