1) ಐಎಎಸ್ ದೇವಯಾನಿ ಸಿಂಗ್: ವಾರದಲ್ಲಿ ಎರಡು ದಿನ ಓದುವ ಮೂಲಕ UPSC ಯಲ್ಲಿ 11 ನೇ ರ್ಯಾಂಕ್ ಪಡೆದಿದ್ದಾರೆ. ಸತತ ಮೂರು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ನಾಲ್ಕನೇ ಪ್ರಯತ್ನದಲ್ಲಿ ದೇವಯಾನಿ ಯಶಸ್ಸು ಪಡೆದರು. 2015 ಮತ್ತು 2016ರಲ್ಲಿ ದೇವಯಾನಿ ಯುಪಿಎಸ್ಸಿ ಪ್ರಿಲಿಮ್ಸ್ನಲ್ಲಿ ತೇರ್ಗಡೆಯಾಗಿರಲಿಲ್ಲ. 2017 ರಲ್ಲಿ ಮೂರನೇ ಪ್ರಯತ್ನದಲ್ಲಿ ಸಂದರ್ಶನದ ಸುತ್ತನ್ನು ತಲುಪಿರೂ ಅಂತಿಮ ಪಟ್ಟಿಯಲ್ಲಿ ಹೆಸರು ಕಾಣಿಸಲಿಲ್ಲ. ಛಲ ಬಿಡದೆ 4ನೇ ಭಾರಿ ಗೆದ್ದರು.
2) IAS ಸೌಮ್ಯ ಶರ್ಮಾ: 16 ನೇ ವಯಸ್ಸಿನಲ್ಲಿ ಶ್ರವಣ ಶಕ್ತಿ ಕಳೆದುಕೊಂಡರು, ಆದರೆ ಮೊದಲ ಪ್ರಯತ್ನದಲ್ಲಿ ದೆಹಲಿಯ ನಿವಾಸಿ ಸೌಮ್ಯ ಶರ್ಮಾ IAS ಟಾಪರ್ ಆದರು. ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಾವುದೇ ತರಬೇತು ಪಡೆಯದೆ ಅಖಿಲ ಭಾರತ ಮಟ್ಟದಲ್ಲಿ 9ನೇ ರ್ಯಾಂಕ್ ಗಳಿಸಿದ್ದರು. ಪರೀಕ್ಷೆಯ ದಿನ ಸೌಮ್ಯಾ ವೈರಲ್ ಜ್ವರದಿಂದ ಬಳಲುತ್ತಿದ್ದರು. 2017 ರಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಆಕೆಗೆ 23 ವರ್ಷ ವಯಸ್ಸಾಗಿತ್ತು.
3) ಐಎಎಸ್ ಸೌಮ್ಯ ಪಾಂಡೆ : ಯುಪಿಎಸ್ಸಿ ಅಗ್ರಸ್ಥಾನ ಪಡೆದ ಐಎಎಸ್ ಸೌಮ್ಯ ಪಾಂಡೆ 2016ರ ಬ್ಯಾಚ್ ನವರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ ಸಿಯನ್ನು ಭೇದಿಸಿದರು. ಸೌಮ್ಯಾ 10ನೇ ತರಗತಿಯಲ್ಲಿ ಶೇ 98 ಮತ್ತು 12ನೇ ತರಗತಿಯಲ್ಲಿ ಶೇ 97.8 ಅಂಕ ಪಡೆದಿದ್ದರು. ಇದಲ್ಲದೇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿದ್ದರಿ. 2016 ರಲ್ಲಿ ಪರೀಕ್ಷೆ ತೆಗೆದುಕೊಂಡರು.
4) ಐಪಿಎಸ್ ಮನೋಜ್ ಕುಮಾರ್ ಶರ್ಮಾ: 12ನೇ ತರಗತಿಯಲ್ಲಿ ಫೇಲ್ ಆಗಿ ಟೆಂಪೋ ಓಡಿಸಿಕೊಂಡು ಭಿಕ್ಷುಕರೊಂದಿಗೆ ಮಲಗುತ್ತಿದ್ದ ಇವರು ಐಪಿಎಸ್ ಆಗಿದ್ದೇ ಒಂದು ಪವಾಡ. ಮಧ್ಯಪ್ರದೇಶದ ಐಪಿಎಸ್ ಮನೋಜ್ ಕುಮಾರ್ ಶರ್ಮಾ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಿ ಯಶಸ್ಸು ಸಾಧಿಸಿದರು. ದೊಡ್ಡ ಅಧಿಕಾರಿ ಆದರಷ್ಟೇ ಪ್ರೇಮ ವಿವಾಹವಾಗುವುದು ಎಂದು ಗರ್ಲ್ ಫ್ರೆಂಡ್ ಹಾಕಿದ ಕಂಡಿಷನ್ ನಿಂದ ಇವರು ಐಪಿಎಸ್ ಅಧಿಕಾರಿ ಆಗಿದ್ದಾರೆ. ಆ ಮೂಲಕ ಇವರ ಪ್ರೇಮಕಥೆ ಸ್ಪೂರ್ತಿದಾಯಕ ಎನಿಸಿಕೊಂಡಿದೆ.
6) ಪ್ರದೀಪ್ ಸಿಂಗ್: ಯೂಟ್ಯೂಬ್ ನಿಂದ ಯುಪಿಎಸ್ ಸಿ ತಯಾರಿ ನಡೆಸಿ ಐಎಎಸ್ ಆದರು. ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ 2019 ರಲ್ಲಿ ನಂಬರ್-1 ಶ್ರೇಣಿಯನ್ನು ಪಡೆದರು. ಪ್ರದೀಪ್ ಕೆಲಸ ಮಾಡುತ್ತಲೇ UPSCಗೆ ತಯಾರಿ ನಡೆಸಿದ್ದರು. ಆಫೀಸಿಗೆ ಬರುವಾಗಲೂ ಯೂಟ್ಯೂಬ್ ಮೂಲಕ ಅಧ್ಯಯನ ಮಾಡುತ್ತಿದ್ದರು. ಆಫೀಸಿನಲ್ಲಿ ಊಟದ ಸಮಯದಲ್ಲೂ ಓದುತ್ತಿದ್ದರು. ಹರಿಯಾಣದ ಸೋನಿಪತ್ ಜಿಲ್ಲೆಯ ನಿವಾಸಿ ಪ್ರದೀಪ್ ಸಿಂಗ್ ಅವರು UPSC 2019 ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಆಲ್ ಇಂಡಿಯಾ ನಂ. 1 ರ್ಯಾಂಕ್ ಪಡೆದರು.