Work Stress: ಉದ್ಯೋಗಿಗಳೇ, ಕೆಲಸದ ಒತ್ತಡದಿಂದ ಪಾರಾಗಲು ಈ ಸಿಂಪಲ್ ಸಲಹೆಗಳನ್ನು ಪಾಲಿಸಿ

Stress Removal Tips: ಕೆಲಸದ ಹೊರೆ ಯಾರಿಗೆ ಇರಲ್ಲ ಹೇಳಿ. ದಿನ ಬೆಳಗಾದರೆ ತರಾತುರಿಯಲ್ಲಿ ಆಫೀಸ್ ಗೆ ಹೋಗುವುದರಿಂದ ಹಿಡಿದು ಮರಳಿ ಮನೆಗೆ ಬಂದ ನಂತರವೂ ಕೆಲಸದ ಒತ್ತಡವನ್ನು ಅನೇಕರು ಅನುಭವಿಸುತ್ತಾರೆ. ದಿನನಿತ್ಯದ ಈ ಜಂಜಾಟವನ್ನು ನಿಭಾಯಿಸುವ ಕಲೆಯನ್ನು ಪ್ರತಿಯೊಬ್ಬ ಉದ್ಯೋಗಿಯೂ ಕಲಿಯಲೇಬೇಕು.

First published:

  • 17

    Work Stress: ಉದ್ಯೋಗಿಗಳೇ, ಕೆಲಸದ ಒತ್ತಡದಿಂದ ಪಾರಾಗಲು ಈ ಸಿಂಪಲ್ ಸಲಹೆಗಳನ್ನು ಪಾಲಿಸಿ

    ಕಚೇರಿಯಲ್ಲಿ ಕೆಲಸದ ಕಾರಣ ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಅನೇಕ ಉದ್ಯೋಗಿಗಳು ಕಚೇರಿಯ ನಂತರವೂ ಒತ್ತಡದಿಂದ ಮುಕ್ತರಾಗಲು ಕಷ್ಟವಾಗುತ್ತದೆ.

    MORE
    GALLERIES

  • 27

    Work Stress: ಉದ್ಯೋಗಿಗಳೇ, ಕೆಲಸದ ಒತ್ತಡದಿಂದ ಪಾರಾಗಲು ಈ ಸಿಂಪಲ್ ಸಲಹೆಗಳನ್ನು ಪಾಲಿಸಿ

    ಅತಿಯಾದ ಕೆಲಸದ ಕಾರಣ ಒತ್ತಡವನ್ನು ಅನುಭವಿಸುತ್ತಿದ್ದರೆ, ಕೆಲವು ಸುಲಭ ವಿಧಾನಗಳ ಸಹಾಯದಿಂದ ನೀವು ಕೆಲವೇ ನಿಮಿಷಗಳಲ್ಲಿ ನಿರಾಳವಾಗಬಹುದು. ಆ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳು ಇಲ್ಲಿವೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    Work Stress: ಉದ್ಯೋಗಿಗಳೇ, ಕೆಲಸದ ಒತ್ತಡದಿಂದ ಪಾರಾಗಲು ಈ ಸಿಂಪಲ್ ಸಲಹೆಗಳನ್ನು ಪಾಲಿಸಿ

    ಸುತ್ತಾಡಲು ಹೋಗಿ: ಕಚೇರಿಯ ಆಯಾಸವನ್ನು ಹೋಗಲಾಡಿಸಲು ನೀವು ವಾಕ್ ಮಾಡಬಹುದು. ಇದು ನಿಮ್ಮ ಮನಸ್ಥಿತಿಯನ್ನು ಹಗುರಗೊಳಿಸುತ್ತದೆ. ಪ್ರತಿದಿನ 20-30 ನಿಮಿಷಗಳ ಕಾಲ ನಡೆಯುವುದರಿಂದ ಖಿನ್ನತೆ ಮತ್ತು ಆತಂಕದ ಭಾವನೆಯಿಂದ ದೂರವಾಗಬಹುದು.

    MORE
    GALLERIES

  • 47

    Work Stress: ಉದ್ಯೋಗಿಗಳೇ, ಕೆಲಸದ ಒತ್ತಡದಿಂದ ಪಾರಾಗಲು ಈ ಸಿಂಪಲ್ ಸಲಹೆಗಳನ್ನು ಪಾಲಿಸಿ

    ಮ್ಯೂಸಿಕ್ ಕೇಳಿ: ಸಂಗೀತವನ್ನು ಅತ್ಯುತ್ತಮ ವಿಶ್ರಾಂತಿ ಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ. ಆಫೀಸ್ ಒತ್ತಡವನ್ನು ತೆಗೆದುಹಾಕಲು ನೀವು ನಿಮ್ಮ ನೆಚ್ಚಿನ ಹಾಡನ್ನು ಕೇಳಬಹುದು. ಹಾಡನ್ನು ಕೇಳುವುದರ ಜೊತೆಗೆ ಗುನುಗುನಿಸುವಾಗ, ನೀವು ಒಳ್ಳೆಯ ಭಾವನೆಯನ್ನು ಅನುಭವಿಸುತ್ತೀರಿ.

    MORE
    GALLERIES

  • 57

    Work Stress: ಉದ್ಯೋಗಿಗಳೇ, ಕೆಲಸದ ಒತ್ತಡದಿಂದ ಪಾರಾಗಲು ಈ ಸಿಂಪಲ್ ಸಲಹೆಗಳನ್ನು ಪಾಲಿಸಿ

    ಧ್ಯಾನ ಮಾಡಿ: ಧ್ಯಾನವು ಒತ್ತಡವನ್ನು ತೆಗೆದು ಹಾಕುವ ತಂತ್ರವೆಂದು ಸಾಬೀತುಪಡಿಸಬಹುದು. ನೀವು ಪ್ರತಿದಿನ ಸ್ವಲ್ಪ ಸಮಯದವರೆಗೆ ಧ್ಯಾನವನ್ನು ಮಾಡಿ. ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಮನಸ್ಸು ಶಾಂತವಾಗಿದ್ದರೆ ಒತ್ತಡದ ಮಾತೇ ಇರುವುದಿಲ್ಲ.

    MORE
    GALLERIES

  • 67

    Work Stress: ಉದ್ಯೋಗಿಗಳೇ, ಕೆಲಸದ ಒತ್ತಡದಿಂದ ಪಾರಾಗಲು ಈ ಸಿಂಪಲ್ ಸಲಹೆಗಳನ್ನು ಪಾಲಿಸಿ

    ನಿಮ್ಮ ನೆಚ್ಚಿನ ವ್ಯಕ್ತಿ, ಸಾಕು ಪ್ರಾಣಿಗಳ ಜೊತೆ ಸಮಯ ಕಳೆಯಿರಿ: ಮಕ್ಕಳು, ಸಾಕು ಪ್ರಾಣಿಗಳೊಂದಿಗೆ ಸಮಯ ಕಳೆದರೆ ಮನಸ್ಸು ಹಗುರವಾಗುತ್ತೆ. ಆಫೀಸ್ ನಲ್ಲೂ ನಿಮ್ಮ ನೆಚ್ಚಿನ ಸಹೋದ್ಯೋಗಿಗಳೊಂದಿಗೆ ಹೆಚ್ಚು ಸಮಯ ಕಳೆಯಿರಿ. ಇದು ನಿಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತೆ.

    MORE
    GALLERIES

  • 77

    Work Stress: ಉದ್ಯೋಗಿಗಳೇ, ಕೆಲಸದ ಒತ್ತಡದಿಂದ ಪಾರಾಗಲು ಈ ಸಿಂಪಲ್ ಸಲಹೆಗಳನ್ನು ಪಾಲಿಸಿ

    ವ್ಯಾಯಾಮ ಮಾಡಿ: ಕಚೇರಿಯಲ್ಲಿ ಗಂಟೆಗಟ್ಟಲೆ ಕೆಲಸ ಮಾಡುವುದರಿಂದ ಹೆಚ್ಚಿನ ಜನರು ದೈಹಿಕವಾಗಿ ಆಯಾಸವನ್ನು ಅನುಭವಿಸುತ್ತಾರೆ. ಒತ್ತಡದಿಂದ ಮುಕ್ತವಾಗಿರಲು ದೈನಂದಿನ ವ್ಯಾಯಾಮದ ಸಹಾಯವನ್ನು ತೆಗೆದುಕೊಳ್ಳಬಹುದು. ಅಥವಾ ನಿಮ್ಮ ನೆಚ್ಚಿನ ಕ್ರೀಡೆಯನ್ನು ಆಡುವ ಮೂಲಕ ಫಿಟ್ ಆಗಿ ಮತ್ತು ಸಂತೋಷವಾಗಿರಬಹುದು.

    MORE
    GALLERIES