UPSC Village: ಇದು ಪುಟ್ಟ ಹಳ್ಳಿಯಲ್ಲ, IAS-IPS ಫ್ಯಾಕ್ಟರಿ: ಗ್ರಾಮದ ಬಹುತೇಕರು ಸರ್ಕಾರಿ ಅಧಿಕಾರಿಗಳು

Story of UP Jaunpur Village Madho Patti: ನ್ಯೂಸ್ 18 ಕನ್ನಡದಲ್ಲಿ ಪ್ರತಿದಿನ UPSC ಪರೀಕ್ಷೆಯಲ್ಲಿ ತೇರ್ಗಡೆಯಾದದವರ UPSC ಸಕ್ಸಸ್ ಸ್ಟೋರಿಗಳನ್ನು ನೀವು ಓದುತ್ತಿದ್ದೀರಿ. ಇಂದಿನ UPSC ಕಥೆ ಹೆಚ್ಚು ವಿಶೇಷವಾಗಿದೆ. ಒಂದೇ ಕುಟುಂಬದಲ್ಲಿ UPSC ಪರೀಕ್ಷೆ ಪಾಸ್ ಮಾಡಿದವರನ್ನು ನಾವು ನೋಡಿದ್ದೇವೆ. ಆದರೆ ಒಂದು ಊರಿನ ಬಹುತೇಕ ಎಲ್ಲಾ ಯುವಕರು UPSC ಪರೀಕ್ಷೆಯಲ್ಲಿ ಪಾಸ್ ಆಗಿದ್ದನ್ನು ಕೇಳಿದ್ದೀರಾ, ಅಂತಹ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ.

First published:

  • 17

    UPSC Village: ಇದು ಪುಟ್ಟ ಹಳ್ಳಿಯಲ್ಲ, IAS-IPS ಫ್ಯಾಕ್ಟರಿ: ಗ್ರಾಮದ ಬಹುತೇಕರು ಸರ್ಕಾರಿ ಅಧಿಕಾರಿಗಳು

    ಉತ್ತರ ಪ್ರದೇಶದಲ್ಲಿರುವ ಈ ಹಳ್ಳಿಯನ್ನು IAS-IPS ಫ್ಯಾಕ್ಟರಿ ಎನ್ನಲಾಗುತ್ತೆ. ಯುಪಿಯ ರಾಜಧಾನಿಯಾದ ಲಕ್ನೋದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಜೌನ್ ಪುರ ಜಿಲ್ಲೆಯ ಮಾಧೋಪಟ್ಟಿ ಗ್ರಾಮದ ಬಗ್ಗೆ ತಿಳಿಯೋಣ ಬನ್ನಿ.

    MORE
    GALLERIES

  • 27

    UPSC Village: ಇದು ಪುಟ್ಟ ಹಳ್ಳಿಯಲ್ಲ, IAS-IPS ಫ್ಯಾಕ್ಟರಿ: ಗ್ರಾಮದ ಬಹುತೇಕರು ಸರ್ಕಾರಿ ಅಧಿಕಾರಿಗಳು

    ಕೇವಲ 75 ಮನೆಗಳನ್ನು ಹೊಂದಿರುವ ಮಾಧೋಪಟ್ಟಿ ಗ್ರಾಮವು ದೇಶಕ್ಕೆ 47 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನೀಡಿದೆ. ಯುಪಿಎಸ್ ಸಿ ಹೊರತುಪಡಿಸಿ ಗ್ರಾಮದ 51 ಮಂದಿ ಸರ್ಕಾರದ ದೊಡ್ಡ ಹುದ್ದೆಗಳಲ್ಲಿದ್ದಾರೆ. 47 ಐಎಎಸ್ ಐಪಿಎಸ್ ಅಧಿಕಾರಿಗಳನ್ನು ನೀಡಿದ ಈ ಪುಟ್ಟ ಗ್ರಾಮ ಆಕರ್ಷಣೆಯ ಕೇಂದ್ರವೂ ಆಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 37

    UPSC Village: ಇದು ಪುಟ್ಟ ಹಳ್ಳಿಯಲ್ಲ, IAS-IPS ಫ್ಯಾಕ್ಟರಿ: ಗ್ರಾಮದ ಬಹುತೇಕರು ಸರ್ಕಾರಿ ಅಧಿಕಾರಿಗಳು

    1952 ರಲ್ಲಿ ಮೊದಲ ಬಾರಿಗೆ, ಮಧೋಪಟ್ಟಿ ಗ್ರಾಮದ ಡಾ.ಇಂದುಪ್ರಕಾಶ್ ಯುಪಿಎಸ್ ಸಿಯಲ್ಲಿ 2ನೇ ರ್ಯಾಂಕ್ ಗಳಿಸಿದರು. ಅವರಿಗೆ ಐಎಎಸ್ ಹುದ್ದೆ ಸಿಕ್ಕಿದೆ. ಡಾ.ಇಂದುಪ್ರಕಾಶ್ ಅವರ ನಾಲ್ವರು ಸಹೋದರರೂ ಐಎಎಸ್ ಅಧಿಕಾರಿಗಳಾದರು. 2002ರಲ್ಲಿ ಡಾ.ಇಂದುಪ್ರಕಾಶ್ ಅವರ ಪುತ್ರ ಯಶಸ್ವಿ 31ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಆದರು.

    MORE
    GALLERIES

  • 47

    UPSC Village: ಇದು ಪುಟ್ಟ ಹಳ್ಳಿಯಲ್ಲ, IAS-IPS ಫ್ಯಾಕ್ಟರಿ: ಗ್ರಾಮದ ಬಹುತೇಕರು ಸರ್ಕಾರಿ ಅಧಿಕಾರಿಗಳು

    ಈ ಗ್ರಾಮದಿಂದ ಒಬ್ಬರ ಹಿಂದೆ ಒಬ್ಬರು ಭಾರತೀಯ ಆಡಳಿತ ಸೇವೆಗೆ ಹೋಗಿದ್ದಾರೆ. ಇದರಿಂದಾಗಿ ಗ್ರಾಮವನ್ನು ಐಎಎಸ್ ಕಾರ್ಖಾನೆ ಎಂದು ಕರೆಯಲು ಪ್ರಾರಂಭಿಸಲಾಯಿತು. ಮಾಧೋಪಟ್ಟಿ ಗ್ರಾಮದಿಂದ ಐಎಎಸ್ ಮಾತ್ರವಲ್ಲದೆ ಅನೇಕ ಪಿಸಿಎಸ್ ಅಧಿಕಾರಿಗಳನ್ನು ಸಹ ನೀಡಿದೆ ಎಂದು ಗ್ರಾಮದ ನಿವಾಸಿ ರಣವಿಜಯ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದರು.

    MORE
    GALLERIES

  • 57

    UPSC Village: ಇದು ಪುಟ್ಟ ಹಳ್ಳಿಯಲ್ಲ, IAS-IPS ಫ್ಯಾಕ್ಟರಿ: ಗ್ರಾಮದ ಬಹುತೇಕರು ಸರ್ಕಾರಿ ಅಧಿಕಾರಿಗಳು

    ಗ್ರಾಮದ ಮಹಿಳೆಯರೂ ಪಿಸಿಎಸ್ ಅಧಿಕಾರಿಗಳಾಗಿದ್ದಾರೆ. ಹಳ್ಳಿಯಿಂದ ಪುರುಷ ಅಧಿಕಾರಿಗಳು ಐಎಎಸ್, ಐಪಿಎಸ್ ಆಗಿದ್ದು ಮಾತ್ರವಲ್ಲದೆ ಹೆಣ್ಣುಮಕ್ಕಳು ಮತ್ತು ಸೊಸೆಯಂದಿರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಧಿಕಾರಿಗಳಾದ ಗ್ರಾಮದ ಯುವಕ-ಯುವತಿಯರು ತಮ್ಮ ತಮ್ಮ ಕ್ಷೇತ್ರಗಳಿಗೆ ಕೀರ್ತಿ ತಂದರೂ ಸ್ವಗ್ರಾಮದ ಅಭಿವೃದ್ಧಿ ಮುಂದಾಗಲಿಲ್ಲ ಎಂಬ ನೋವು ಹಲವು ಗ್ರಾಮಸ್ಥರಲ್ಲಿ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    UPSC Village: ಇದು ಪುಟ್ಟ ಹಳ್ಳಿಯಲ್ಲ, IAS-IPS ಫ್ಯಾಕ್ಟರಿ: ಗ್ರಾಮದ ಬಹುತೇಕರು ಸರ್ಕಾರಿ ಅಧಿಕಾರಿಗಳು

    ಯುಪಿಎಸ್ ಸಿ ಹಾಗೂ ಇತರೆ ದೊಡ್ಡ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಗ್ರಾಮದಿಂದ ಇಷ್ಟೊಂದು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾದ ಕೀರ್ತಿ ಜೌನ್ಪುರ ಜಿಲ್ಲೆಯ ತಿಲಕ್ ಧರಿ ಸಿಂಗ್ ಸ್ನಾತಕೋತ್ತರ ಕಾಲೇಜಿಗೆ ಸಲ್ಲುತ್ತದೆ ಎಂದು ಗ್ರಾಮದ ಶಿಕ್ಷಕ ಕಾರ್ತಿಕೇಯ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    MORE
    GALLERIES

  • 77

    UPSC Village: ಇದು ಪುಟ್ಟ ಹಳ್ಳಿಯಲ್ಲ, IAS-IPS ಫ್ಯಾಕ್ಟರಿ: ಗ್ರಾಮದ ಬಹುತೇಕರು ಸರ್ಕಾರಿ ಅಧಿಕಾರಿಗಳು

    ವಿದ್ಯಾರ್ಥಿಗಳು ಕಾಲೇಜು ಸಮಯದಲ್ಲಿಯೇ ನಾಗರಿಕ ಸೇವಾ ಪರೀಕ್ಷೆಯ ತಯಾರಿಯ ಮೂಲಭೂತ ಅಂಶಗಳನ್ನು ಕಲಿಯಲು ಪ್ರಾರಂಭಿಸುತ್ತಾರೆ. ಇಲ್ಲಿಂದಲೇ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಾರೆ ಎಂದು ಹೇಳಬಹುದು ಎಂದು ಶಿಕ್ಷಕ ಕಾರ್ತಿಕೇಯ ಸಿಂಗ್ ತಿಳಿಸಿದರು.

    MORE
    GALLERIES