UPSC Success Story: ತಾಯಿ ಇಲ್ಲದೆ ಹುಡ್ಗಿಯನ್ನು ಓದಿಸಲು ನಿರಾಕರಿಸಿದ್ರು; ಒಂಟಿಯಾಗಿದ್ದುಕೊಂಡು ಓದಿ IAS ಆದ ದಿಟ್ಟೆ

Ummul Kher: ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಪ್ರತಿ ಅಭ್ಯರ್ಥಿಯ ಹಿಂದೆಯೂ ಒಂದು ಹೋರಾಟದ ಕಥೆ ಇರುತ್ತದೆ. ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಐಎಎಸ್ ಉಮ್ಮುಲ್ ಖೇರ್ ಬದುಕೇ ಒಂದು ಹೋರಾಟ ಎನ್ನಬಹುದು. ಅನೇಕರಿಗೆ ಸ್ಪೂರ್ತಿಯಾಗಿರುವ ಅವರು ಬಗ್ಗೆ ತಿಳಿಯೋಣ ಬನ್ನಿ.

First published:

  • 18

    UPSC Success Story: ತಾಯಿ ಇಲ್ಲದೆ ಹುಡ್ಗಿಯನ್ನು ಓದಿಸಲು ನಿರಾಕರಿಸಿದ್ರು; ಒಂಟಿಯಾಗಿದ್ದುಕೊಂಡು ಓದಿ IAS ಆದ ದಿಟ್ಟೆ

    ಉಮ್ಮುಲ್ ಖೇರ್ ರಾಜಸ್ಥಾನದ ಪಾಲಿಯವರು. ಇವರು ಬಡ ಕುಟುಂಬದವರು. ಬಾಲ್ಯದಲ್ಲೇ ಉಮ್ಮಲ್ ಅವರಿಗೆ ಮೂಳೆ ದುರ್ಬಲ ಅಸ್ವಸ್ಥತೆ ಅಂದರೆ ಬೋನ್ ಫ್ರಾಜಿಲ್ ಡಿಸಾರ್ಡರ್ ಇತ್ತು. ಇದರಿಂದ ಮೂಳೆಗಳು ಆಗಾಗ್ಗೆ ಮುರಿಯಲ್ಪಟ್ಟವು. ಒಟ್ಟು 16 ಮೂಳೆಗಳು ಮುರಿದಿದ್ದು, 8 ಶಸ್ತ್ರಚಿಕಿತ್ಸೆಗಳನ್ನು ಅನುಭವಿಸಿದ್ದಾರೆ.

    MORE
    GALLERIES

  • 28

    UPSC Success Story: ತಾಯಿ ಇಲ್ಲದೆ ಹುಡ್ಗಿಯನ್ನು ಓದಿಸಲು ನಿರಾಕರಿಸಿದ್ರು; ಒಂಟಿಯಾಗಿದ್ದುಕೊಂಡು ಓದಿ IAS ಆದ ದಿಟ್ಟೆ

    ಬಡತನ ಮತ್ತು ಅನಾರೋಗ್ಯ ಎರಡೂ ಕಷ್ಟಕರ. ಆದರೆ ಕಷ್ಟಗಳಿಗೆ ಬೆನ್ನು ಮಾಡದೆ ದೃಢವಾಗಿ ನಿಂತವರು ಉಮ್ಮುಲ್. ಶ್ರಮ ಮತ್ತು ಧೈರ್ಯದ ಆಧಾರದ ಮೇಲೆ ಅವರು ಮಾಡಿದ್ದು ಈಗ ನಮ್ಮೆಲ್ಲರ ಮುಂದಿದೆ.

    MORE
    GALLERIES

  • 38

    UPSC Success Story: ತಾಯಿ ಇಲ್ಲದೆ ಹುಡ್ಗಿಯನ್ನು ಓದಿಸಲು ನಿರಾಕರಿಸಿದ್ರು; ಒಂಟಿಯಾಗಿದ್ದುಕೊಂಡು ಓದಿ IAS ಆದ ದಿಟ್ಟೆ

    ಉಮ್ಮುಲ್ ಖೇರ್ ದೀನದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯಲ್ಲಿ ಐದನೇ ತರಗತಿಯವರೆಗೆ ಓದಿದ್ದಾರೆ. ಆ ನಂತರ ಅವರು ಎಂಟನೇ ತರಗತಿಯವರೆಗೆ ಓದಿದ್ದು ಅಮರ್ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಎಂಬ ಸರ್ಕಾರಿ ಚಾರಿಟಬಲ್ ಸಂಸ್ಥೆಯಲ್ಲಿ. ಆಗ ಅವರ ತಾಯಿ ತೀರಿ ಹೋಗಿದ್ದರು. ಕುಟುಂಬವು 8 ನೇ ತರಗತಿಯ ನಂತರ ಶಿಕ್ಷಣವನ್ನು ಮುಂದುವರಿಸಲು ನಿರಾಕರಿಸಿತು.

    MORE
    GALLERIES

  • 48

    UPSC Success Story: ತಾಯಿ ಇಲ್ಲದೆ ಹುಡ್ಗಿಯನ್ನು ಓದಿಸಲು ನಿರಾಕರಿಸಿದ್ರು; ಒಂಟಿಯಾಗಿದ್ದುಕೊಂಡು ಓದಿ IAS ಆದ ದಿಟ್ಟೆ

    ನಂತರ ಉಮ್ಮುಲ್ ಖೇರ್ ಮನೆ ಬಿಟ್ಟು ಒಂಟಿಯಾಗಿ ತ್ರಿಲೋಕಪುರಿಯ ಜುಗ್ಗಿ ಜೋಪ್ರಿ (ಜೆಜೆ) ಕ್ಲಸ್ಟರ್ ನಲ್ಲಿ ವಾಸಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡರು. ತನ್ನ ಜೀವನೋಪಾಯಕ್ಕಾಗಿ, ಅವರು ಸ್ಲಂ ಮಕ್ಕಳಿಗೆ ಟ್ಯೂಷನ್ ನೀಡಲು ಪ್ರಾರಂಭಿಸಿದರು.

    MORE
    GALLERIES

  • 58

    UPSC Success Story: ತಾಯಿ ಇಲ್ಲದೆ ಹುಡ್ಗಿಯನ್ನು ಓದಿಸಲು ನಿರಾಕರಿಸಿದ್ರು; ಒಂಟಿಯಾಗಿದ್ದುಕೊಂಡು ಓದಿ IAS ಆದ ದಿಟ್ಟೆ

    ಖೇರ್ ಗೆ ಒಬ್ಬಂಟಿಯಾಗಿ ಬದುಕುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಈ ಸಮಯದಲ್ಲಿ, ಅಮರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಖೇರ್ ಅವರ 9 ಮತ್ತು 10ನೇ ತರಗತಿಗಳಿಗೆ ಬೋಧನೆ ಖರ್ಚನ್ನು ವಹಿಸಿಕೊಂಡಿತು. 12ನೇ ತರಗತಿಯಲ್ಲಿ, ಖೇರ್ 91% ಗಳಿಸಿದರು. ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗಾರ್ಗಿ ಕಾಲೇಜಿನಲ್ಲಿ ಪ್ರವೇಶ ಪಡೆದರು.

    MORE
    GALLERIES

  • 68

    UPSC Success Story: ತಾಯಿ ಇಲ್ಲದೆ ಹುಡ್ಗಿಯನ್ನು ಓದಿಸಲು ನಿರಾಕರಿಸಿದ್ರು; ಒಂಟಿಯಾಗಿದ್ದುಕೊಂಡು ಓದಿ IAS ಆದ ದಿಟ್ಟೆ

    ಈ ಸಮಯದಲ್ಲಿ ಅವರು ಟ್ಯೂಷನ್ ತೆಗೆದುಕೊಳ್ಳುವುದನ್ನು ಮುಂದುವರೆಸಿದರು. ಕಾಲೇಜಿನಲ್ಲಿ ಚರ್ಚಾ ಸ್ಪರ್ಧೆಗಳಲ್ಲಿ ಗೆದ್ದು ಉತ್ತಮ ಬಹುಮಾನ ಗಳಿಸಿದ್ದಾರೆ. 2012 ರಲ್ಲಿ ನಡೆದ ಸಣ್ಣ ಅಪಘಾತ ಅವರನ್ನು ಒಂದು ವರ್ಷ ಗಾಲಿಕುರ್ಚಿಯಲ್ಲಿ ಇರಿಸಿತು.

    MORE
    GALLERIES

  • 78

    UPSC Success Story: ತಾಯಿ ಇಲ್ಲದೆ ಹುಡ್ಗಿಯನ್ನು ಓದಿಸಲು ನಿರಾಕರಿಸಿದ್ರು; ಒಂಟಿಯಾಗಿದ್ದುಕೊಂಡು ಓದಿ IAS ಆದ ದಿಟ್ಟೆ

    ತನ್ನ ಪದವಿಯನ್ನು ಪೂರ್ಣಗೊಳಿಸಿದ ನಂತರ, ಉಮ್ಮುಲ್ ಖೇರ್ JNU ನಲ್ಲಿ ಮಾಸ್ಟರ್ ಇನ್ ಇಂಟರ್ನ್ಯಾಷನಲ್ ಸ್ಟಡೀಸ್ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇದರಿಂದ ಆಕೆಗೆ ತನ್ನ ಓದಿನ ಖರ್ಚನ್ನು ಭರಿಸುವಷ್ಟು ಹಣ ಸಿಕ್ಕಿತು.

    MORE
    GALLERIES

  • 88

    UPSC Success Story: ತಾಯಿ ಇಲ್ಲದೆ ಹುಡ್ಗಿಯನ್ನು ಓದಿಸಲು ನಿರಾಕರಿಸಿದ್ರು; ಒಂಟಿಯಾಗಿದ್ದುಕೊಂಡು ಓದಿ IAS ಆದ ದಿಟ್ಟೆ

    ಉಮ್ಮುಲ್ ಖೇರ್ ಗೆ ಎರಡನೇ ತರಗತಿಯಿಂದ ಐಎಎಸ್ ಆಗಬೇಕು ಎಂಬ ಕನಸು ಇತ್ತು. ಪಿಎಚ್ ಡಿ ಮಾಡಿದರೂ ಛಲ ಬಿಡದೆ ಸಿವಿಲ್ ಸರ್ವೀಸಸ್ ಪರೀಕ್ಷೆ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಎಲ್ಲ ಅಡೆತಡೆಗಳ ನಡುವೆಯೂ ದೃಢಸಂಕಲ್ಪದಿಂದ ಎಲ್ಲವನ್ನೂ ಸಾಧಿಸಿದರು. 2016 ರಲ್ಲಿ ಯುಪಿಎಸ್ ಸಿ ಮೊದಲ ಪ್ರಯತ್ನದಲ್ಲಿ 420ನೇ ರ್ಯಾಂಕ್ ಪಡೆದಿದ್ದಾರೆ.

    MORE
    GALLERIES