ಐಪಿಎಸ್ ಡಿ ರೂಪ ಅವರ ಪೂರ್ಣ ಹೆಸರು ರೂಪ ದಿವಾಕರ್ ಮೌದ್ಗಿಲ್. ಕರ್ನಾಟಕದ ದಾವಣಗೆರೆ ರೂಪಾ ಅವರ ತವರು ಜಿಲ್ಲೆ. ಅವರ ತಂದೆಯ ಹೆಸರು ಜೆ.ಎಚ್. ದಿವಾಕರ್.. ಅವರು ನಿವೃತ್ತ ಇಂಜಿನಿಯರ್, ತಾಯಿಯ ಹೆಸರು ಹೇಮಾವತಿ. ರೂಪಾ ಅವರ ತಂಗಿ ರೋಹಿಣಿ ದಿವಾಕರ್ 2008ರ ಬ್ಯಾಚ್ ನ ಐಆರ್ ಎಸ್ ಅಧಿಕಾರಿ. ಪ್ರಸ್ತುತ, ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.